ಮುಂಬೈ: ಬಾಲಿವುಡ್ ಬೆಡಗಿ ಪರಿಣಿತಿ ಚೋಪ್ರಾ ಟೈಟ್ ಡ್ರೆಸ್ ಧರಿಸಿ ಕಷ್ಟಪಡುತ್ತಿರುವ ಫೋಟೋಗಳನ್ನು ನೆಟ್ಟಿಗರು ಟ್ರೋಲ್ ಮಾಡಲಾರಂಭಿಸಿದ್ದಾರೆ.
ಪರಿಣಿತಿ, ನಟ ಅರ್ಜುನ್ ಕಪೂರ್ ಜೊತೆ ‘ನಮಸ್ತೆ ಇಂಗ್ಲೆಂಡ್’ ಚಿತ್ರದಲ್ಲಿ ನಟಿಸಿದ್ದು, ಸಿನಿಮಾ ಪ್ರಮೋಶನ್ ಗಾಗಿ ಮುಂಬೈನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಪರಿಣೀತಿ ತೆಳು ನೀಲಿ ಬಣ್ಣದ ಕೋಲ್ಡ್ ತೋಳುಗಳ ಟೈಟ್ ಮಿನಿ ಡ್ರೆಸ್ ಧರಿಸಿದ್ದರು. ಆದರೆ ಕಾರ್ಯಕ್ರಮದ ಉದ್ದಕ್ಕೂ ಪರಿಣಿತಿ ತಮ್ಮ ಡ್ರೆಸ್ ಸರಿ ಮಾಡಿಕೊಳ್ಳುವುದರಲ್ಲಿಯೇ ಬ್ಯೂಸಿಯಾಗಿದ್ದರು. ಇದನ್ನು ಗಮನಿಸಿದ ನೆಟ್ಟಿಗರು ತನ್ನ ಅನಿಸಿಕೆಯನ್ನು ಕಮೆಂಟ್ ಮೂಲಕ ತಿಳಿಸಿದ್ದಾರೆ.
Advertisement
Advertisement
ಪರಿಣಿತಿ ಫೋಟೋ ನೋಡಿ ಒಬ್ಬರು ನಿಮ್ಮ ಕಾಲುಗಳು ದಪ್ಪ ಇದೆ ಅಂದ್ರೆ, ಮತ್ತೊಬ್ಬರು ನಿಮಗೆ ಸ್ಟೈಲಿಶ್ ಮ್ಯಾನ್ ಅವಶ್ಯಕತೆ ಇದೆ. ಮತ್ತೊಬ್ಬರು ಪರಿಣಿತಿ ನೀವು ತುಂಬಾ ದಪ್ಪಾ ಆಗುತ್ತಿದ್ದೀರಿ ಎಂದು ಕಮೆಂಟ್ ಮಾಡುತ್ತಿದ್ದಾರೆ.
Advertisement
ನಮಸ್ತೆ ಇಂಗ್ಲೆಂಡ್ ಚಿತ್ರ ಅಕ್ಷಯ್ ಕುಮಾರ್ ಹಾಗೂ ಕತ್ರಿನಾ ಕೈಫ್ ಅಭಿನಯಿಸಿದ ‘ನಮಸ್ತೆ ಲಂಡನ್’ ಚಿತ್ರದ ಮುಂದುವರಿದ ಭಾಗ ಎಂದು ಹೇಳಲಾಗಿದೆ. ಈ ಚಿತ್ರ ಮುಂದಿನ ತಿಂಗಳು ಅಕ್ಟೋಬರ್ 19ರಂದು ವಿಶ್ವಾದ್ಯಂತ ಬಿಡುಗಡೆ ಆಗಲಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv