ಕಾರವಾರ: ಪರೇಶ್ ಮೇಸ್ತಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ ಕಮಲಾಕರ್ ಮೇಸ್ತಾ ನೀಡಿದ್ದ ದೂರಿನ ಆಧಾರದಲ್ಲಿ ಎಲ್ಲಾ ಐವರು ಆರೋಪಿಗಳನ್ನ ಬಂಧಿಸುವಲ್ಲಿ ಹೊನ್ನಾವರ ಪೊಲೀಸರು ಯಶಸ್ವಿಯಾಗಿದ್ದಾರೆ.
Advertisement
ಕಳೆದ ವಾರ ಮೊದಲ ಆರೋಪಿ ಆಸೀಪ್ ರಫಿಕ್ ಎಂಬವನನ್ನು ಭಟ್ಕಳದ ಶಿರಾಲಿಯಲ್ಲಿ ಬಂಧಿಸಿದ್ರೆ ಹೊನ್ನಾವರದಲ್ಲಿ ಡಿಸಂಬರ್ ನಲ್ಲಿ ಪ್ರಮುಖ ಆರೋಪಿ ಆಜಾದ್ ಅಣ್ಣಿಗೇರಿಯನ್ನು ಹಾಗೂ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಸಲೀಂ ಶೇಖ್‍ನನ್ನು ಎರಡು ದಿನಗಳ ಹಿಂದೆ ಬಂಧಿಸಲಾಗಿತ್ತು. ಇದನ್ನೂ ಓದಿ: Exclusive: ವಿಷವುಣಿಸಿ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದಾರೆ – ಪರೇಶ್ ಮೇಸ್ತಾ ತಂದೆ ಹೇಳಿಕೆ
Advertisement
Advertisement
ನಂತರ ಬಂಧಿತರು ನೀಡಿದ ಖಚಿತ ಮಾಹಿತಿ ಆಧರಿಸಿ ಗುರುವಾರ ಶಿರಸಿಯಲ್ಲಿ ಇಮ್ತಿಯಾಜ್ ಶೇಖ್ ಹಾಗೂ ಸಯ್ಯದ್ ಫೈಜಲ್ ನನ್ನು ಬಂಧಿಸಲಾಗಿದೆ. ಈ ಮೂಲಕ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಎಲ್ಲಾ ಐದು ಆರೋಪಿಗಳ ಬಂಧನವಾಗಿದೆ. ಇದನ್ನೂ ಓದಿ: ಪರೇಶ್ ಮೇಸ್ತಾ ಸಾವು: ವೈದ್ಯರ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ
Advertisement
ಈ ಮೂಲಕ ಪ್ರಕರಣವನ್ನು ಸಿ.ಬಿ.ಐ ಕೈಗೆತ್ತಿಕೊಳ್ಳುವ ಮೊದಲು ಹೊನ್ನಾವರ ಪೊಲೀಸರು ಕಮಲಾಕರ್ ಮೇಸ್ತಾ ನೀಡಿದ ದೂರಿನ ಆಧಾರದಲ್ಲಿ ಆರೋಪಿಗಳನ್ನ ಬಂಧಿಸಿದ್ದಾರೆ. ಪರೇಶ್ ಮೇಸ್ತಾ ಸಾವು ಕೊಲೆಯೇ ಅಥವಾ ಸಹಜ ಸಾವೋ ಎಂಬುದಕ್ಕೆ ಆರೋಪಿಗಳ ಹೇಳಿಕೆಯೇ ಪ್ರಮುಖವಾಗಲಿದೆ. ಇದನ್ನೂ ಓದಿ: ಪರೇಶ್ ಮೇಸ್ತಾ ಸಾವಿನ ಪ್ರಕರಣದ ತನಿಖೆ ಸಿಬಿಐ ಹೆಗಲಿಗೆ
https://www.youtube.com/watch?v=5XVX-SyTRAI