Districts
ಸರ್ಕಾರ ಬದಲಾಯಿಸಿ, ಮಗನಿಗೆ ನ್ಯಾಯಕೊಡಿ: ಪರೇಶ್ ಮೆಸ್ತಾ ಪೋಷಕರಿಂದ ಮತಯಾಚನೆ

ಉಡುಪಿ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಪರೇಶ್ ಮೇಸ್ತಾ ತಂದೆ ತಾಯಿ ಉಡುಪಿಯ ಬೈಂದೂರಲ್ಲಿ ಬಿಜೆಪಿ ಪರ ಕ್ಯಾಂಪೇನ್ ಮಾಡಿದ್ದಾರೆ.
ನಿಗೂಢವಾಗಿ ಸಾವನ್ನಪಿರುವ ಪರೇಶ್ ಮೇಸ್ತಾ ಹೆತ್ತವರು, ಬಿ.ಜೆ.ಪಿ ಅಭ್ಯರ್ಥಿ ಸುಕುಮಾರ್ ಶೆಟ್ಟಿ ಪರ ಪರೇಶ್ ಮೇಸ್ತಾ ತಂದೆ ಕಮಾಲಕರ್ ಮೇಸ್ತಾ ತಾಯಿ ರುಕ್ಮಾ ಭಾಯಿ ಅವರು ಪ್ರಚಾರ ನಡೆಸಿದ್ದಾರೆ. ಗಂಗೊಳ್ಳಿ, ಮರವಂತೆ ಪ್ರದೇಶದಲ್ಲಿ ಪ್ರಚಾರ ಮಾಡುತ್ತಿರುವ ಅವರು, ಮೀನುಗಾರ ಸಮುದಾಯದ ಮನೆಗಳಿಗೆ ಭೇಟಿ ಮಾಡಿದ್ದಾರೆ.
ಗಂಗೊಳ್ಳಿ ಪ್ರದೇಶಗಳಲ್ಲಿ ಚುನಾವಣಾ ಪ್ರಚಾರ ಕೈಗೊಂಡು ಮಗನಿಗೆ ನ್ಯಾಯ ದೊರಕಲು ಸರ್ಕಾರ ಬದಲಿಸುವಂತೆ ಮನವಿ ಮಾಡುತ್ತಿದ್ದಾರೆ. ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಮೀನುಗಾರರ ಮತಗಳು ನಿರ್ಣಾಯಕ ಮೇಸ್ತಾ ಪೋಷಕರ ಪ್ರಚಾರ ಮಹತ್ವ ಪಡೆದುಕೊಂಡಿದೆ.
