ಬೆಂಗಳೂರು: ದಾಳಿ ಮಾಡಿದಾಗ ಸರಿ ಇಲ್ಲ ಅಂತಾರೆ, ಈಗ ಸಿಬಿಐ ಪರವಾಗಿ ಮಾತನಾಡ್ತಾರೆ ಎಂದು ಕಾಂಗ್ರೆಸ್‌ಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ತಿರುಗೇಟು ನೀಡಿದರು.
ಪರೇಶ್ ಮೇಸ್ತಾ (Paresh Mesta) ಸಾವು ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಸಿಬಿಐ ಮತ್ತು ಇಡಿ ಬಗ್ಗೆ ಬೆಳಗ್ಗೆ ರಾತ್ರಿ ಕಾಂಗ್ರೆಸ್‌ನವ್ರು ಪ್ರಶ್ನೆ ಮಾಡುತ್ತಿದ್ದರು. ಆದರೆ ಇದೀಗ CBI ಪರವಾಗಿ ಮಾತನಾಡ್ತಿದ್ದಾರೆ. ಇದು ಅವರ ಅನುಕೂಲ ಸಿಂಧು ರಾಜಕಾರಣಕ್ಕೆ ಉದಾಹರಣೆಯಾಗಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಅವರ ಮೇಲೆ ಸಿಬಿಐ (CBI) ದಾಳಿ ಮಾಡಿದ್ರೆ ಸಿಬಿಐ ಸರಿ ಇಲ್ಲ ಅಂತಾರೆ. ಇಡಿ (ED), ಐಟಿ (IT) ದಾಳಿ ವಿಚಾರವಾಗಿ ತನಿಖೆ ಮಾಡಿದ್ರೆ ಕೇಂದ್ರ ಸರ್ಕಾರದ ಕೈಗೊಂಬೆ ಅಂತ ಹೇಳ್ತಾರೆ. ಈಗ ಸಿಬಿಐ ವರದಿ ಬಂದಿದೆ. ಸಿಬಿಐ ಕರೆಕ್ಟ್ ಅಂತಿದ್ದಾರೆ ಎಂದರು.
ಪರೇಶ್ ಮೇಸ್ತಾ ಕೇಸ್, ಶರತ್ ಮಡಿವಾಳ ಕೇಸ್‌ಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಎಫ್‌ಐಆರ್ ಹಾಕುವುದರಿಂದ ಹಿಡಿದು, ಪೋಸ್ಟ್ ಮಾರ್ಟಮ್ ವರದಿ ಬರುವವರೆಗೂ ವಿಳಂಬ ಮಾಡಲಾಗಿದೆ, ಈ ವೇಳೆಯಲ್ಲೇ ಸಾಕ್ಷ್ಯ ನಾಶ ಮಾಡಲಾಗಿದೆ ಎಂದು ಟೀಕಿಸಿದರು.
ಯಾವುದೇ ಕ್ರೈಮ್ ಬರುವ 24 ಗಂಟೆಗಳು, 48 ಗಂಟೆಗಳ ವರದಿ ಬಹಳ ಮುಖ್ಯ. ಮಾಧ್ಯಮಗಳಲ್ಲಿ ಬಂದಿರೋದನ್ನ ನೋಡಿದ್ದೇವೆ. ಪೋಸ್ಟ್ ಮಾರ್ಟಮ್ ವರದಿ ಬರುವ ಮೊದಲೇ ಪ್ರೈಮರಿ ವರದಿ ನಾಶ ಮಾಡಿದರು. ಸಿಬಿಐಗೆ ಪರೇಶ್ ಮೇಸ್ತಾ ಕೇಸ್ ಹಾಕುವಾಗ, ಇಲ್ಲಿನ ಕಾಂಗ್ರೆಸ್ ಸರ್ಕಾರ ಏನೆಲ್ಲಾ ಮಾಡಿದೆ ಅನ್ನೋದು ನಮಗೆ ಗೊತ್ತಿದೆ. ರಾಜ್ಯದ ಜನ ದಡ್ಡರೂ ಅಲ್ಲ ಹಾಗೂ ಎಲ್ಲರೂ ರಾಹುಲ್ ಗಾಂಧಿಯೂ ಅಲ್ಲ ಎಂದು ಕಿಡಿಕಾರಿದರು.
ಶರತ್ ಮಡಿವಾಳ (Sharat Madival) ಹತ್ಯೆ ಆದಾಗ ನಾನು ಅವರ ಮನೆಗೆ ಹೋಗಿದ್ದೆ. ಶರತ್ ಮಡಿವಾಳ ಪೋಸ್ಟ್ ಮಾರ್ಟಮ್ ವರದಿ ಬಂದಿರಲಿಲ್ಲ. ಆಗ ಸಿದ್ದರಾಮಯ್ಯ (Siddaramaiah) ಮಂಗಳೂರು (Mangaluru) ಪ್ರವಾಸದಲ್ಲಿದ್ದರು. ಅವರ ಕಾರ್ಯಕ್ರಮಕ್ಕೆ ತೊಂದರೆ ಆಗಬಾರದು ಅಂತ ಅವರ ಶವವನ್ನೂ ಹಸ್ತಾಂತರ ಮಾಡಿರಲಿಲ್ಲ. ಈ ಎಲ್ಲಾ ವಿಚಾರ ಬಹಳ ಸ್ಪಷ್ಟವಾಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಹೇಡಿಗಳ ರೂಪದಲ್ಲಿ ರಸ್ತೆಯ ಮೇಲೆ ಬರೆದು ಹೋದವರಿಗೆ RSS ಹೆದರಲ್ಲ: ಈಶ್ವರಪ್ಪ
ಈಗ ಯಾವುದೋ ರಿಪೋರ್ಟ್ ಬಂತು ಅಂತ 175 ಜನ PFI, KFD ಕಾರ್ಯಕರ್ತರರ ಕೇಸ್ ವಾಪಸ್ ಪಡೆದದ್ದು ಸುಳ್ಳಾಗಲ್ಲ. ಅನುಕೂಲ ಸಿಂಧು ರಾಜಕಾರಣ ಮಾಡಲಾಗಿದೆ. ಟಿಪ್ಪು ಜಯಂತಿ ಮಾಡಿ ಇಡೀ ರಾಜ್ಯವನ್ನ ಬೆಂಕಿ ಹಚ್ಚಿದ್ದು ಜನ ಮರೆಯಲು ಆಗಲ್ಲ. ಈಗ ಬಂದ ಸಿಬಿಐ ವರದಿ ಇವರಿಗೆ ಸಹಾಯಕ್ಕೆ ಬರಲ್ಲ ಎಂದು ತಿರುಗೇಟು ನೀಡಿದರು.
ಇಂದು ಕುಟ್ಟಪ್ಪ ಹತ್ಯೆಯಿಂದ ಹಿಡಿದು ರುದ್ರೇಶ್‌ವರೆಗೂ ನೂರಕ್ಕೂ ಹೆಚ್ಚು ಹತ್ಯೆ ಆಯ್ತು. UAPA ಕೇಸ್ ಸರಿಯಾಗಿ ಹಾಕದೆ, ಅವರಿಗೆ ತಕ್ಷಣಕ್ಕೆ ಬೇಲ್ ಸಿಗುವಂತೆ ಮಾಡಿದರು. ಕಾಂಗ್ರೆಸ್‌ನವರಿಗೆ PFI ಬ್ಯಾನ್ ಮಾಡಿರೋದು ಹೇಳಿಕೊಳ್ಳಲಾಗದಷ್ಟು ನೋವಾಗ್ತಿದೆ. ಅವರೇ ಹೇಳಿದ್ರು ಅವರೆಲ್ಲಾ ನಮ್ಮ ಬ್ರದರ್ಸ್ ಅಂತ. ಈಗ ಬ್ರದರ್ಸ್ ಸಂಘಟನೆ ಬ್ಯಾನ್ ಮಾಡಿರೋದ್ರಿಂದ ನೋವಾಗಿದೆ. ಅದನ್ನ ಹೇಳಿಕೊಳ್ಳಲಾಗದೆ ಈಗ ಅವರನ್ನ ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ. ಸ್ಪಷ್ಟವಾಗಿ ಇದೆಲ್ಲವನ್ನೂ ಜನ ನೋಡ್ತಿದ್ದಾರೆ. ಈ ಹಿಂದೆಯೂ ಜನ ಪಾಠ ಕಲಿಸಿದ್ರು, ಮುಂದೆಯೂ ಅವರಿಗೆ ಪಾಠ ಕಲಿಸ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: 873 ಪೊಲೀಸ್ ಅಧಿಕಾರಿಗಳಿಗೆ PFI ಜೊತೆ ನಂಟು: NIA