– ಮಗನಿಗೆ ಚಪ್ಪಲಿಯಿಂದ ಹೊಡೆದ ತಂದೆ
– ಯುವತಿಯ ಜಡೆ ಹಿಡಿದು ಎಳೆದಾಡಿದ ತಾಯಿ
ಲಕ್ನೋ: ಪ್ರೇಯಸಿಯೊಂದಿಗೆ ಚೌಮಿನ್ ಸವಿಯುತ್ತಿದ್ದ ವೇಳೆ ಪೋಷಕರಿಗೆ ಸಿಕ್ಕಿಬಿದ್ದ ಯುವಕ ಹಾಗೂ ಯುವತಿಯ ಪೋಷಕರು ಸಾರ್ವಜನಿಕವಾಗಿ ಥಳಿಸಿದ ಘಟನೆ ಉತ್ತರಪ್ರದೇಶದ (Uttar Pradesh) ಕಾನ್ಪುರದಲ್ಲಿ (Kanpur) ನಡೆದಿದೆ.
#कानपुर मां ने बेटे और बेटे की प्रेमिका को साथ पकड़ा बीच सड़क कर दी पिटाई..
लड़के की मां ने बेटे की प्रेमिका को बीच सड़क जमकर पीटा,बीचब चाव कर थे बेटे की भी हुई पिटाई, गुजैनी थाना क्षेत्र के राम गोपाल चौराहे की घटना ।#kanpur #news #sirfsuch pic.twitter.com/Rh9vopObhz
— ठाkur Ankit Singh (@liveankitknp) May 2, 2025
ಗುಜೈನಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಮ್‌ಗೋಪಾಲ್ ಛೇದಕದಲ್ಲಿ ಈ ಘಟನೆ ನಡೆದಿದ್ದು, ಸಾರ್ವಜನಿಕವಾಗಿ ಥಳಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರೋಹಿತ್ (21) ಆತನ 19 ವರ್ಷದ ಪ್ರೇಯಸಿಯೊಂದಿಗೆ ಚೌಮಿನ್ ತಿನ್ನತ್ತಿದ್ದ ವೇಳೆ ಯುವಕನ ಪೋಷಕರಾದ ಶಿವಕರನ್ ಹಾಗೂ ಸುಶೀಲಾ ಸ್ಥಳಕ್ಕೆ ಆಗಮಿಸಿದ್ದಾರೆ. ಈ ವೇಳೆ ಅವರಿಬ್ಬರ ಪ್ರೀತಿ ಬೆಳಕಿಗೆ ಬಂದಿದ್ದು, ಪ್ರೀತಿಯನ್ನು ನಿರಾಕರಿಸಿದ ಪೋಷಕರು ಸಾರ್ವಜನಿಕವಾಗಿ ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅಶ್ರಫ್ ಹತ್ಯೆ ವಿಚಾರ ಪ್ರಸ್ತಾಪಿಸಿ ಸಚಿವರಿಗೆ ಮುಸ್ಲಿಂ ಮುಖಂಡರಿಂದ ಕ್ಲಾಸ್ – ಟೇಬಲ್ ಬಡಿದು ಆಕ್ರೋಶ
ಘಟನೆ ಬಳಿಕ ಕೌನ್ಸಿಲಿಂಗ್ ಮಾಡಿ ಪೊಲೀಸರು ಜೋಡಿಯನ್ನು ಬೇರ್ಪಡಿಸಿದ್ದಾರೆ. ದ್ವಿಚಕ್ರ ವಾಹನದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ ಜೋಡಿಗೆ ತಾಯಿ ಸುಶೀಲಾ ಹೊಡೆದಿದ್ದಾರೆ. ಸ್ಥಳೀಯ ನಿವಾಸಿಗಳು ಮತ್ತು ದಾರಿಹೋಕರು ಇಬ್ಬರನ್ನೂ ಬೇರ್ಪಡಿಸಲು ಪ್ರಯತ್ನಿಸಿದ ವೇಳೆ ಯುವತಿಯ ಕೂದಲನ್ನು ಹಿಡಿದು ಹಲ್ಲೆ ನಡೆಸಿದ್ದಾರೆ. ಅಲ್ಲದೇ ರೋಹಿತ್‌ನ ತಂದೆ ಕೂಡ ಆತನಿಗೆ ಚಪ್ಪಲಿಯಿಂದ ಹೊಡೆದಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಯುರೋಪಿಯನ್ ದೇಶಗಳಿಂದ ಪಾಕ್‌ಗೆ ಶಾಕ್ – ಪಾಕಿಸ್ತಾನ ವಾಯು ಪ್ರದೇಶದಲ್ಲಿ ವಿಮಾನ ಹಾರಾಟಕ್ಕೆ ಹಿಂದೇಟು