ಭೋಪಾಲ್: ಹೊಸದಾಗಿ ಚುನಾಯಿತರಾದ ಜಿಲ್ಲಾ ಪಂಚಾಯತ್ ಸದಸ್ಯನ ಮೇಲೆ ಗ್ಯಾಂಗ್ ಒಂದು ದೊಣ್ಣೆಗಳಿಂದ ಹೊಡೆದು, ಒದ್ದು, ಗುದ್ದಿರುವ ಘಟನೆ ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
A newly elected panch in was hit with sticks and kicked and punched by a group on men. The incident happened at a village in Sehore district @ndtv@ndtvindia pic.twitter.com/uX7BJFbFP5
— Anurag Dwary (@Anurag_Dwary) July 30, 2022
Advertisement
ಜಿಲ್ಲಾ ಪಂಚಾಯತ್ ಚುನಾವಣೆಯ ಫಲಿತಾಂಶ ಬಂದ ನಂತರ ಈ ಘಟನೆ ನಡೆದಿದೆ. ರಾಕೇಶ್ ಲೋಧಿ ಅವರು ತಮ್ಮ ಕೆಲವು ಸಹಾಯಕರೊಂದಿಗೆ ನಿಂತಿದ್ದ ವೇಳೆ, ಐದು ಜನರಿದ್ದ ಮಹೇಶ್ ಲೋಧಿಯವರ ಗ್ಯಾಂಗ್ ದೊಣ್ಣೆಯನ್ನು ಹಿಡಿದುಕೊಂಡು ಬಂದು ಏಕಾಏಕಿ ಹಲ್ಲೆ ನಡೆಸಲು ಆರಂಭಿಸಿದ್ದಾರೆ. ಹಾಡಗಲಲ್ಲೇ ನಡು ರಸ್ತೆಯಲ್ಲಿ ಪಂಚ ರಾಕೇಶ್ ಲೋಧಿ ಮೇಲೆ ದೊಣ್ಣೆಯಿಂದ ಹೊಡೆದಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಕಾಮನ್‍ವೆಲ್ತ್ ಗೇಮ್ಸ್ 2022: ಎರಡನೇ ದಿನ ಪದಕದ ನಿರೀಕ್ಷೆಯಲ್ಲಿ ಭಾರತ – ಲವ್ಲಿನಾ, ಮೀರಾಬಾಯಿ ಚಾನು ಕಣಕ್ಕೆ
Advertisement
Advertisement
ವೀಡಿಯೋದಲ್ಲಿ ರಾಕೇಶ್ ಅವರ ಬೆನ್ನು, ಹೊಟ್ಟೆ ಮತ್ತು ತಲೆಯ ಮೇಲೆ ಹೊಡೆಯುತ್ತಿರುವುದನ್ನು ಕಾಣಬಹುದಾಗಿದೆ. ಈ ವೇಳೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ, ದುಷ್ಕರ್ಮಿಗಳು ಬಿಡದೇ ಮನಬಂದಂತೆ ಥಳಿಸಿದ್ದಾರೆ. ಕೊನೆಗೆ ರಾಕೇಶ್ ಅನ್ನು ಆತನ ಸಹಾಯಕ ಸೋನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಶಾಸಕರು ತುಲಾಭಾರ ಮಾಡುವಷ್ಟು ಹಣ ಮಾಡ್ಕೊಂಡಿದ್ದಾರೆ, ಆದರೆ ಅವರಿಗೆ ಆಸ್ಪತ್ರೆ ಬೇಡ: ಚಕ್ರವರ್ತಿ ಸೂಲಿಬೆಲೆ