Bengaluru CityDistrictsKarnatakaLatestLeading NewsMain PostUttara Kannada

ಶಾಸಕರು ತುಲಾಭಾರ ಮಾಡುವಷ್ಟು ಹಣ ಮಾಡ್ಕೊಂಡಿದ್ದಾರೆ, ಆದರೆ ಅವರಿಗೆ ಆಸ್ಪತ್ರೆ ಬೇಡ: ಚಕ್ರವರ್ತಿ ಸೂಲಿಬೆಲೆ

Advertisements

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಶಾಸಕರು ತುಲಾಭಾರ ಮಾಡುವಷ್ಟು ದುಡ್ಡು ಮಾಡಿದ್ದಾರೆ. ಆದರೆ ಅವರಿಗೆ ಆಸ್ಪತ್ರೆ ನಿರ್ಮಾಣದ ಬಗ್ಗೆ ಇಚ್ಛಾಶಕ್ತಿ ತೊರುತ್ತಿಲ್ಲ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ವಾಗ್ದಾಳಿ ನಡೆಸಿದರು.

ಶಿರೂರು ಘಟನೆಯ ಬಳಿಕ ಉತ್ತರ ಕನ್ನಡದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಹೋರಾಟಕ್ಕೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಈ ಹೋರಾಟಕ್ಕೆ ಇದೀಗ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಕೈಜೋಡಿದ್ದು, ಈ ಬಗ್ಗೆ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರ ಜಿಲ್ಲೆಯಲ್ಲಿ ಆಸ್ಪತ್ರೆಗಾಗಿ ಬಂದು ಹೋರಾಟ ಮಾಡುತ್ತಿದ್ದೇವೆ. ಈ ಪ್ರತಿಭಟನೆಗೆ ಸಾಥ್ ನೀಡಲು ಒಬ್ಬ ಅಯೋಗ್ಯ ಶಾಸಕ ಕೂಡ ಬಂದಿಲ್ಲ. ಅಷ್ಟೇ ಅಲ್ಲದೇ ಉತ್ತರ ಕನ್ನಡದ ಸಂಸದರಾಗಿಯೇ ಅನಂತ್ ಕುಮಾರ್ ಹೆಗಡೆ ಐದಾರು ಬಾರಿ ಆಯ್ಕೆ ಆಗಿದ್ದಾರೆ. ಆದರೆ ನಯಾ ಪೈಸೆಯೂ ಉಪಯೋಗವಾಗಿಲ್ಲ ಎಂದು ಕಿಡಿಕಾರಿದರು.

ಪದೇ ಪದೇ ರಾಜ್ಯ ಸರ್ಕಾರವನ್ನು ಬೈಯುವ ಪರಿಸ್ಥಿತಿಗೆ ಬಂದಿದೆ. ಉತ್ತರ ಕನ್ನಡದಲ್ಲಿ ಟೂರಿಸಂ ಅಭಿವೃದ್ಧಿ ಮಾಡಿದರೆ ಬೆಂಗಳೂರಿಗೆ ಉದ್ಯೋಗ ಅರಸಿ ಬರಬೇಕಾಗಿಲ್ಲ. ಆದರೆ ಜನಪ್ರತಿನಿಧಿಗಳು ಅಭಿವೃದ್ಧಿ ಬಗ್ಗೆ ತಲೆಕೆಡೆಸಿಕೊಳ್ಳುತ್ತಿಲ್ಲ ಎಂದ ಅವರು, ಜನಪ್ರತಿನಿಧಿಗಳು ಮಾಡಿರುವ ಹಣ ಎಷ್ಟಿದೆ ಅಂದರೆ ನೀವ್ಯಾರು ವೋಟು ಮಾಡದೇ ಇದ್ದರೂ ಅವರು ಗೆಲುವು ಸಾಧಿಸುತ್ತಾರೆ. ಅವರ ಸಾಮರ್ಥ್ಯ ಅಷ್ಟಿದೆ ಎಂದು ಜನಪ್ರತಿನಿಧಿಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಕುಮಟಾದ ಶಾಸಕರ ಜೊತೆ ನಾನು ಮಾತಾನಾಡಿದ್ದೇನೆ. ಸರ್ಕಾರಕ್ಕೆ ಆಗದೇ ಇದ್ದರೇ ಖಾಸಗಿ ಸಹಭಾಗಿತ್ವದಲ್ಲಿ ಮಾಡೋಣ ಅಂತಾ ಹೇಳಿದ್ದೇನೆ. ಅಷ್ಟೇ ಅಲ್ಲದೇ ಆಸ್ಪತ್ರೆ ಕಟ್ಟಲು ಜಾಗ ತೋರಿಸಿ ಅಂತಾನೂ ಹೇಳಿದ್ದೆ ಎಂದರು. ಇದನ್ನೂ ಓದಿ: ಪ್ರತಿಭಟನೆ ನಡೆಸಿದವರು ABVP ಕಾರ್ಯಕರ್ತರು ಹೌದೋ ಅಲ್ವಾ ಅಂತಾ ಅನುಮಾನ: ಆರಗ

ನಾಳೆ ದಾಂಡೇಲಿ ಕುಮಟಾ ಶಿರಸಿಗೆ ಶಾಸಕರು, ಸಂಸದರು ಹೋದರೆ ಕಲ್ಲು ಹೊಡೆಯುತ್ತೀರಾ!? ಎಂದು ಪ್ರಶ್ನಿಸಿದ ಅವರು, ದಕ್ಷಿಣ ಕನ್ನಡದವರು ಆಕ್ರೋಶದಿಂದ ತಮಗೆ ಬೇಕಾದ್ದದ್ದನ್ನು ಪಡೆಯುತ್ತಾರೆ. ದಕ್ಷಿಣ ಕನ್ನಡದವರು ಆಕ್ರೋಶದಿಂದ ತಮಗೆ ಬೇಕಾದ್ದದ್ದನ್ನು ಪಡೆಯುತ್ತಾರೆ. ಆದರೆ ಉತ್ತರ ಕನ್ನಡದವರಯ ಸಾಫ್ಟ್ ಆಗಿ ಹೇಳುತ್ತಾರೆ. ಆದರೆ ಜನಪ್ರತಿನಿಧಿಗಳದ್ದು ಎಮ್ಮೆ ಚರ್ಮ ಎಂದು ಸಿಟ್ಟನ್ನು ಹೊರ ಹಾಕಿದರು. ಇದನ್ನೂ ಓದಿ: ಗಲೀಜಾದ ಹಾಸಿಗೆಯಲ್ಲಿ ಮಲಗಲು ಹೇಳಿದ ಸಚಿವ – ಅವಮಾನದಿಂದ ರಾಜೀನಾಮೆ ಕೊಟ್ಟ ಉಪಕುಲಪತಿ

Live Tv

Leave a Reply

Your email address will not be published.

Back to top button