ಬೆಳಗಾವಿ: ಬೇರೆ ಕಡೆ ಪಂಚಮಸಾಲಿ (Panchamasali) ಸಮಾವೇಶ ಮಾಡೋದು ಸುಲಭವಾಗಿದೆ. ಗೋಕಾಕ್‍ನಲ್ಲಿ (Gokak) ಪಂಚಮಸಾಲಿ ಸಮಾವೇಶ ಮಾಡಲು ಎಂಟೆದೆ ಬೇಕು ಎಂದು ಕೂಡಲಸಂಗಮ ಸಂಗಮ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ (Basava Jaya Mruthyunjaya Swamiji) ಗುಡುಗಿದರು.
Advertisement
ಜಿಲ್ಲೆಯ ಗೋಕಾಕ್ ನಗರದ ನ್ಯೂ ಇಂಗ್ಲಿಷ್ ಶಾಲಾ ಆವರಣದಲ್ಲಿ ಅಖಿಲ ಭಾರತ ಪಂಚಮಸಾಲಿ ಮಹಾಸಭಾದ ಆಶ್ರಯದಲ್ಲಿ ಕೂಡಲಸಂಗಮ ಸಂಗಮ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಆಗ್ರಹಿಸಿ ನಡೆಯುತ್ತಿರುವ ಸಮಾವೇಶ ರೈತಗೀತೆ ಮೂಲಕ ಚಾಲನೆ ನೀಡಲಾಯಿತು. ಬಳಿಕ ಮಾತನಾಡಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಗೋಕಾಕ್‍ನಲ್ಲಿ ಇಂದು ಸಮಾವೇಶ ಮಾಡುತ್ತಿದ್ದೇವೆ. ಅರಭಾವಿ, ಗೋಕಾಕ್‌ನಲ್ಲಿ ಪಂಚಮಸಾಲಿ ಬಾವುಟ ಮುಗಿಲೆತ್ತರಕ್ಕೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹಾರಿಸಿದರು. ಅಪಮಾನ, ಅವಮಾನದಿಂದ ಹೋರಾಟಗಾರರು ಹೊರಹೊಮ್ಮುತ್ತಾರೆ. ಆ ರೀತಿ ಹೋರಾಟಗಾರರಾಗಿ ಈರಣ್ಣಾ ಕಡಾಡಿ ಹೊರಹೊಮ್ಮಿದ್ದಾರೆ ಎಂದರು. ಇದನ್ನೂ ಓದಿ: ಬಾದಾಮಿಯಲ್ಲಿ ಸ್ಪರ್ಧೆ ಇಲ್ಲ: ಸಿದ್ದರಾಮಯ್ಯ ಅಧಿಕೃತ ಘೋಷಣೆ
Advertisement
Advertisement
ನಮ್ಮ ಪಂಚಮಸಾಲಿ ಸಮುದಾಯದ ಮಕ್ಕಳಿಗೆ 2ಎ ಮೀಸಲಾತಿ, ಉಳಿದ ಎಲ್ಲಾ ಸಮಾಜದ ಮಕ್ಕಳಿಗೆ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ಸಿಗಬೇಕೆಂದು ಹೋರಾಟ ಮಾಡಲಾಗಿದೆ. ಈಗಾಗಲೇ ಸಾವಿರಾರು ಕಿ.ಮೀ ಪಾದಯಾತ್ರೆ ಮಾಡಿ ಹಕ್ಕೊತ್ತಾಯ ಮಾಡಿದರೂ ಸರ್ಕಾರ ಸ್ಪಂದಿಸಲಿಲ್ಲ. ಹತ್ತು ಲಕ್ಷ ಜನ ಸೇರಿಸಿ ಬೆಂಗಳೂರಲ್ಲಿ ಸಮಾವೇಶ ಮಾಡಿದರೂ ಸರ್ಕಾರಕ್ಕೆ ನಮ್ಮ ಕೂಗು ಕೇಳಲಿಲ್ಲ. ಬಸನಗೌಡ ಪಾಟೀಲ್ ಯತ್ನಾಳ್ ವಿಧಾನಸೌಧದೊಳಗೆ ಗುಡುಗಿದರು. ನಾವು ಹೊರಗಡೆ ಹೋರಾಟ ಮಾಡಿದೆವು. ಅಂದಿನ ಸಿಎಂ ಬಿ.ಎಸ್ ಯಡಿಯೂರಪ್ಪ ಆರು ತಿಂಗಳಲ್ಲಿ ಮೀಸಲಾತಿ ಕೊಡೋದಾಗಿ ಹೇಳಿದರು. ಬಳಿಕ ಅವರೇ ಸಿಎಂ ಸ್ಥಾನದಿಂದ ಹೊರಟು ಹೋದರು. ಬಳಿಕ ಬಂದ ಸಿಎಂ ಬಸವರಾಜ ಬೊಮ್ಮಾಯಿ 3 ತಿಂಗಳ ಕಾಲಾವಕಾಶ ಕೇಳಿ ಮಾತು ತಪ್ಪಿದರು. ಇದಾದ ಬಳಿಕ ಬಸವರಾಜ ಬೊಮ್ಮಾಯಿ ನಿವಾಸ ಎದುರು ಹೋರಾಟ ಮಾಡಿದ್ದೇವೆ. ಸರ್ಕಾರದ ವಿಳಂಬ ನೀತಿಗೆ ನಮಗೆಲ್ಲ ನೋವಾಗಿದೆ. ಬೆಂಗಳೂರಲ್ಲಿ 25 ಲಕ್ಷ ಜನರನ್ನು ಸೇರಿಸಿ ಪಂಚಮಸಾಲಿ ವಿರಾಟ ಶಕ್ತಿ ಪ್ರದರ್ಶನ ಮಾಡಲಾಗುತ್ತದೆ. ಡಿಸೆಂಬರ್ 12 ರಂದು 25 ಲಕ್ಷ ಜನರಿಂದ ಬೆಂಗಳೂರಿನ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ಈ ಹೋರಾಟಕ್ಕೆ ಸೆಮಿಫೈನಲ್ ಅಂದ್ರೆ ಅದು ಗೋಕಾಕ್ ಪಂಚಮಸಾಲಿ ಸಮಾವೇಶವಾಗಿದೆ ಎಂದರು. ಇದನ್ನೂ ಓದಿ: ಕೊಡವರಂತೆ ತಮ್ಮ ಸಮುದಾಯದವರ ನರಮೇಧ ಮಾಡಿದ್ರೆ ಸಿದ್ದರಾಮಯ್ಯ ಟಿಪ್ಪು ಜಯಂತಿ ಮಾಡ್ತಿದ್ರಾ? ಪ್ರತಾಪ ಸಿಂಹ
Advertisement
ಈ ಮೊದಲು ಗೋಕಾಕ್ ರಾಜಕಾರಣಕ್ಕೆ ಮಾತ್ರ ಬ್ರೇಕಿಂಗ್ ನ್ಯೂಸ್ ಆಗ್ತಿತ್ತು. ಆದ್ರೆ ಪ್ರಥಮ ಬಾರಿ ಪಂಚಮಸಾಲಿ ಶಕ್ತಿ ಪ್ರದರ್ಶನ ಬ್ರೇಕಿಂಗ್ ನ್ಯೂಸ್ ಆಗುತ್ತಿದೆ. ಅರಭಾವಿ, ವೀರಭದ್ರನಂತೆ ಪಂಚಮಸಾಲಿಗಳು ಎಂದಿದ್ದಾರೆ. ಈಗ ಮತ್ತೆ ಗೋಕಾಕ್‍ನಲ್ಲಿ ಖಡೇ ಖಡೇ ರುದ್ರ ಎನ್ನುತ್ತ ವೀರಭದ್ರನಂತೆ ಎದ್ದಿದ್ದಾರೆ. ಪಂಚಮಸಾಲಿ ಅಂದ್ರೆ ಮುಗ್ಧರು ಅಂತಾ ತಿಳಿದುಕೊಂಡಿದ್ದರು. ನಾವು ಈವರೆಗೆ ಗವಿಯಲ್ಲಿ ಮಲಗಿದ ಸಿಂಹಗಳಂತೆ ಮಲಗಿದ್ವಿ. ಆದರೆ, ಪಾದಯಾತ್ರೆ ಬಳಿಕ ಗವಿಯಲ್ಲಿ ಅಡಗಿದ ಸಿಂಹಗಳು ಘರ್ಜನೆ ಮಾಡುತ್ತಿವೆ. ಯಡಿಯೂರಪ್ಪ ಸಿಎಂ ಆಗಿದ್ದಾಗಲೇ ಪಂಚಮಸಾಲಿ ಮೀಸಲಾತಿ ಪಡೆಯಬೇಕೆಂದಿತ್ತು. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುತ್ತೇವೆ ಅಂತಾ ಯಡಿಯೂರಪ್ಪ ಹೇಳಿದ್ರು. ಯಡಿಯೂರಪ್ಪ ನಮಗೆ ಮೀಸಲಾತಿ ಕೊಡದಿದ್ದಕ್ಕೆ ಅಸಮಾಧಾನವಿದೆ. ಉಳಿದ ಸಮುದಾಯಕ್ಕೆ ಕೊಟ್ಟು ನಮಗೆ ಮೀಸಲಾತಿ ಕೊಡಲಿಲ್ಲ ಅದು ನಮಗೆ ನೋವಾಗಿದೆ. ಅದೇ ರೀತಿ ಸಿಎಂ ಬಸವರಾಜ ಬೊಮ್ಮಾಯಿ ನಮಗೆ ಮೀಸಲಾತಿ ಕೊಡುತ್ತಾರೆ ಅಂದುಕೊಂಡಿದ್ದೇವೆ. ಬಸವರಾಜ ಬೊಮ್ಮಾಯಿ ಶಿಗ್ಗಾಂವನಲ್ಲಿ ಮೂರು ಬಾರಿ ಶಾಸಕರಾಗಲು ಪಂಚಮಸಾಲಿ ಸಮುದಾಯದವರು ಕಾರಣರಾಗಿದ್ದಾರೆ. ಅನೇಕ ಬಾರಿ ಬೊಮ್ಮಾಯಿ ಕಣ್ಣೀರು ಹಾಕಿ ನಮ್ಮ ಸಮಾಜದ ಋಣ ನೆನೆದಿದ್ದಾರೆ. ನಮ್ಮ ಸಮಾಜದ ಋಣ ನಿಮ್ಮ ಮೇಲೆ ಇದ್ದಿದ್ದು ಸತ್ಯವಾಗಿದ್ರೆ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.
ಮೂಗಿಗೆ ತುಪ್ಪ ಹಚ್ಚಿದ್ರೆ ಸುಮ್ಮನಿರ್ತಾರೆ ಅಂದುಕೊಂಡಿದ್ರು. ಅವರು ಚಾಪೆ ಕೆಳಗೆ ನುಗ್ಗಿದ್ರೆ ನಾವು ರಂಗೋಲಿ ಕೆಳಗೆ ನುಗ್ಗುತ್ತೇವೆ. ನಮ್ಮ ಸಹನೆಯ ಕಟ್ಟೆ ಒಡೆದು ಹೋಗಿದೆ. ಡಿಸೆಂಬರ್ 12 ರಂದು ನಮ್ಮ ಕೊನೆಯ ಹೋರಾಟವಾಗಿದೆ. ಎರಡು ವರ್ಷಗಳ ಕಾಲ ಮಠ ಬಿಟ್ಟು ಮೀಸಲಾತಿಗಾಗಿ ನಿರಂತರ ಹೋರಾಟ ಮಾಡಿದ್ದೇನೆ. ನಾವೆಲ್ಲ ಕೂಡಿ ಕಟ್ಟಿದ ಮೀಸಲಾತಿ ರಥವನ್ನು ಹಿಂದಕ್ಕೆ ತಳ್ಳುವ ಪ್ರಯತ್ನ ನಮ್ಮ ಸಮಾಜದ ನಾಯಕರು ಮಾಡಬೇಡಿ. ಇದು ಕೋರ್ಟ್‍ನಲ್ಲಿ ಇರುವ ವಿಚಾರವಾಗಿದೆ. ನಾವು 3ಬಿಯಲ್ಲಿದ್ದು 2ಎನಲ್ಲಿ ಸೇರಿಸಿ ಎಂಬುದು ನಮ್ಮ ಹಕ್ಕೊತ್ತಾಯವಾಗಿದೆ. ಎಲ್ಲರೂ ಡಿಸೆಂಬರ್ 12ರಂದು ಬೆಂಗಳೂರಿಗೆ ಬರಲು ತಯಾರಿ ಮಾಡಿಕೊಳ್ಳಬೇಕು. ಅಷ್ಟರಲ್ಲೇ ಮೀಸಲಾತಿ ಕೊಟ್ರೆ ಗೋಕಾಕ್ ಕರದಂಟು ತಿನಿಸಿ ಕಲ್ಲು ಸಕ್ಕರೆ ತುಲಾಭಾರ ಮಾಡಿ ಸನ್ಮಾನ ಮಾಡುತ್ತೇವೆ. ಮೀಸಲಾತಿ ನೀಡದಿದ್ರೆ ನಮ್ಮ ನಿರ್ಧಾರವನ್ನು ಡಿ.12ರಂದು ಪ್ರಕಟ ಮಾಡುತ್ತೇವೆ. ಎಸ್‍ಸಿಎಸ್‍ಟಿ ಮೀಸಲಾತಿ ಹೆಚ್ಚಳ ನಾವು ಸ್ವಾಗತ ಮಾಡಿದ್ವಿ. ಆವಾಗಲೇ ನಮಗೂ ಮೀಸಲಾತಿ ಘೋಷಿಸಿದ್ರೆ ಒಳ್ಳೆಯದಾಗುತ್ತಿತ್ತು. ಅರಭಾವಿ, ಹುಕ್ಕೇರಿ ಗೋಕಾಕ್‍ನಲ್ಲಿ ಪಂಚಮಸಾಲಿ ಸಮಾವೇಶ ಮಾಡಲು ತೊಂದರೆ ಆಗುತ್ತಿತ್ತು. ಅನ್ಯ ಸಮುದಾಯದ ಯಾರಿಂದಲೂ ಒಂದು ಪೈಸೆ ತಗೆದುಕೊಳ್ಳದೇ ಸ್ವಾಭಿಮಾನಿ ಸಮಾವೇಶ ಮಾಡಿದ್ದೇವೆ. ಗೋಕಾಕ್‍ನಲ್ಲಿ ಸಮಾವೇಶ ಮಾಡೋದು ಸುಲಭದ ಕೆಲಸ ಆಗಿರಲಿಲ್ಲ. ಆಗ ಈರಣ್ಣ ಕಡಾಡಿ ನಮ್ಮ ತಾಲೂಕಿಗೆ ಬಂದು ಸಂಘಟನೆ ಮಾಡಿ ಅಂದ್ರು. ನಮ್ಮ ಜನ ಸಿಂಹದ ಮರಿಗಳು ನಿರ್ಭಯವಾಗಿ ಗೋಕಾಕ್, ಅರಭಾವಿಯಲ್ಲಿ ಸಂಘಟನೆಗೆ ನಿರ್ಧರಿಸಿದ್ದರು ಎಂದು ತಿಳಿಸಿದರು. ಇದನ್ನೂ ಓದಿ: ಒಕ್ಕಲಿಗರ ಮತಗಳು ಬಿಜೆಪಿಗೆ ವಾಲುತ್ತಿರುವುದು ಹೆಚ್‌ಡಿಕೆಗೆ ಆತಂಕ ಹೆಚ್ಚಿಸಿದೆ – ಸಿ.ಪಿ.ಯೋಗೇಶ್ವರ್
ಗೋಕಾಕ್ ಕ್ಷೇತ್ರದ ಪ್ರಥಮ ಶಾಸಕ ನಮ್ಮ ಸಮಾಜದವರು ಆಗಿದ್ರು. ಗೋಕಾಕ್‍ನಲ್ಲಿ ಇಡೀ ಪಂಚಮಸಾಲಿ ಸಮುದಾಯ ನಿರ್ಣಾಯಕವಾಗಿದೆ. ಗೋಕಾಕ್ ತಾಲೂಕಿನ ಪಂಚಮಸಾಲಿ ಹೋರಾಟ 2ಜಿ, 3ಜಿ ಅಲ್ಲ 5ಜಿ ಹೋರಾಟ ನಡೆದಿದೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಸಮಾವೇಶದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ್, ಲಕ್ಷ್ಮೀ ಹೆಬ್ಬಾಳ್ಕರ್, ಎಂಎಲ್‍ಸಿ ಚನ್ನರಾಜ ಹಟ್ಟಿಹೊಳಿ, ಮಾಜಿ ಸಚಿವರಾದ ವಿನಯ್ ಕುಲಕರ್ಣಿ, ಶಶಿಕಾಂತ್ ನಾಯಕ್, ಮಾಜಿ ಶಾಸಕರಾದ ವಿಜಯಾನಂದ ಕಾಶಪ್ಪನವರ್, ವಿ.ಐ.ಪಾಟೀಲ್, ಹೆಚ್.ಎಸ್.ಶಿವಶಂಕರ ಸೇರಿ ಹಲವರು ಉಪಸ್ಥಿತರಿದ್ದರು.