LatestLeading NewsMain PostRamanagara

ಒಕ್ಕಲಿಗರ ಮತಗಳು ಬಿಜೆಪಿಗೆ ವಾಲುತ್ತಿರುವುದು ಹೆಚ್‌ಡಿಕೆಗೆ ಆತಂಕ ಹೆಚ್ಚಿಸಿದೆ – ಸಿ.ಪಿ.ಯೋಗೇಶ್ವರ್

ರಾಮನಗರ: ಕೆಂಪೇಗೌಡರ ಪ್ರತಿಮೆ (Kempegowda Statue) ಬಗ್ಗೆ ರಾಜಕೀಯ ಚರ್ಚೆ ವಿಚಾರವಾಗಿ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ (H.D.Kumaraswamy), ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (D.K.Shivakumar) ವಿರುದ್ಧ ಮಾಜಿ ಸಚಿವ ಸಿ.ಪಿ.ಯೋಗೀಶ್ವರ್‌ (C.P.Yogeshwara) ಕಿಡಿಕಾರಿದ್ದಾರೆ.

ಕೆಂಪೇಗೌಡರ ಪ್ರತಿಮೆ ಜಾತಿ, ಪಕ್ಷಕ್ಕೆ ಮೀರಿದ ವಿಚಾರ. ಚುನಾವಣಾ ವರ್ಷ ಆಗಿರುವುದರಿಂದ ಕಾಂಗ್ರೆಸ್-ಜೆಡಿಎಸ್ (Congress-JDS) ಈ ರೀತಿ ಚರ್ಚೆ ಮಾಡ್ತಿದ್ದಾರೆ. ನಾವು ಮಾಡದ ಕೆಲಸವನ್ನ ಬಿಜೆಪಿ ಮಾಡಿದೆ ಎಂಬ ಕೀಳರಿಮೆ ಅವರಿಗಿದೆ ಎಂದು ಯೋಗೇಶ್ವರ್‌ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಹಳೇ ಮೈಸೂರಿನ ಭದ್ರಕೋಟೆ ಗಟ್ಟಿ ಮಾಡಲು ಎಚ್‌ಡಿಕೆ ಪ್ಲಾನ್‌

ಒಕ್ಕಲಿಗರ ಮತಗಳು ಬಿಜೆಪಿಗೆ ವಾಲುತ್ತಿರುವುದು ಹೆಚ್‌ಡಿಕೆಗೆ ಆತಂಕ ಹೆಚ್ಚಿಸಿದೆ - ಸಿ.ಪಿ.ಯೋಗೇಶ್ವರ್

ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರನ್ನೂ ಆಹ್ವಾನಿಸಲಾಗಿದೆ. ಸ್ವತಃ ಅಶ್ವತ್ಥ ನಾರಾಯಣ ಅವರೇ ಹೋಗಿ ಆಹ್ವಾನ‌ ಮಾಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಕೂಡ ಕರೆ ಮಾಡಿ ಆಹ್ವಾನಿಸಿದ್ದಾರೆ. ಆದರೆ ಕುಮಾರಸ್ವಾಮಿಗೆ ರಾಜಕೀಯ ಆತಂಕ ಇದೆ. ಒಕ್ಕಲಿಗರ ಮತಗಳು ಬಿಜೆಪಿಗೆ ವಾಲುತ್ತಿರುವ ಆತಂಕ ಹೆಚ್ಚಾಗಿದೆ. ಒಕ್ಕಲಿಗರ ಮತ ಬ್ಯಾಂಕ್‌ ಅನ್ನು ಯಾರೂ ಜೆಡಿಎಸ್‌ಗೆ ಗುತ್ತಿಗೆ ಕೊಟ್ಟಿಲ್ಲ. ಬಿಜೆಪಿ ಕೂಡ ಕೆಂಪೇಗೌಡರ ದೂರದೃಷ್ಟಿಯಂತೆ ಆಡಳಿತ ನೀಡುತ್ತಿದೆ ಎಂದಿದ್ದಾರೆ.‌

ಹೆಚ್‌.ಡಿ.ಕುಮಾರಸ್ವಾಮಿ ಎರಡು ಬಾರಿ ವಿಫಲವಾಗಿರುವ ನಾಯಕ. ಕುಮಾರಸ್ವಾಮಿಯವರನ್ನು ಜನ ತಿರಸ್ಕಾರ ಮಾಡ್ತಿದ್ದಾರೆ. ಆ ಪ್ರಕ್ರಿಯೆ 2023ಕ್ಕೂ ಮುಂದುವರಿಯಲಿದೆ‌. ಅವರು ಅಧಿಕಾರ ಇದ್ದಾಗ ಕೆಲಸ ಮಾಡಲಿಲ್ಲ. ಕೇವಲ ಸುಳ್ಳು ಹೇಳಿಕೊಂಡು ರಾಜಕಾರಣ ಮಾಡ್ತಿದ್ದಾರೆ. ಹಾಗಾಗಿ ಒಕ್ಕಲಿಗ ಸಮಾಜ ಕೂಡ ಬಿಜೆಪಿ ಪರ ಒಲವು ತೋರಿದೆ. ಜೆಡಿಎಸ್ ಒಕ್ಕಲಿಗ ಸಮುದಾಯದ ಮತಗಳ ಮೇಲೆ ಡಿಪೆಂಡ್ ಆಗಿದೆ. ಬೇರೆ ಸಮುದಾಯದ ಸಪೋರ್ಟ್ ಸಿಗ್ತಿಲ್ಲ. ಅವರು 2023ಕ್ಕೂ ಸಕ್ಸಸ್ ಆಗೋದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗೆಲ್ಲುವ ವಿಶ್ವಾಸ ಇಲ್ಲದೆ ಸಿದ್ದರಾಮಯ್ಯ ಜಾಗ ಹುಡುಕಾಟ: ಯಡಿಯೂರಪ್ಪ ವ್ಯಂಗ್ಯ

Live Tv

Leave a Reply

Your email address will not be published. Required fields are marked *

Back to top button