– ಪಾಕಿಸ್ತಾನ ತನ್ನ ಕೀಳುಮಟ್ಟದ ಮನೋಭಾವ ಪ್ರದರ್ಶಿಸಿದೆ
ನವದೆಹಲಿ: ಪಾಕಿಸ್ತಾನವು ಭಾರತದ (India Pakistan War) ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಸಿ ದಾಳಿ ನಡೆಸಿದೆ. ಜಮ್ಮು-ಕಾಶ್ಮೀರದ (Jammu & Kashmir) ಗಡಿಯುದ್ದಕ್ಕೂ ಹಲವಾರು ಗುರುದ್ವಾರಗಳು, ಕಾನ್ವೆಂಟ್‌ಗಳು ಮತ್ತು ದೇವಾಲಯಗಳು ಪಾಕಿಸ್ತಾನದ ಶೆಲ್ ದಾಳಿಯಿಂದ ಹಾನಿಗೊಳಗಾಗಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಪೂಜಾ ಸ್ಥಳಗಳನ್ನು ಗುರಿಯಾಗಿಸಿಕೊಂಡು ಶೆಲ್ ದಾಳಿ ನಡೆಸಿರುವುದು ಪಾಕಿಸ್ತಾನದ ಕೀಳುಮಟ್ಟದ ಮನೋಭಾವವನ್ನು ತೋರಿಸುತ್ತದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ (Vikram Misri) ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ: ಭಾರತದ 36 ಕಡೆ 400 ಮಿಸೈಲ್‌ನಿಂದ ಪಾಕ್ ದಾಳಿ: ಕರ್ನಲ್ ಸೋಫಿಯಾ ಖುರೇಷಿ
ಮೇ 7 ರಂದು ಪಾಕಿಸ್ತಾನದ ಗಡಿಯಲ್ಲಿ ನಡೆದ ಗುಂಡಿನ ದಾಳಿಯನ್ನು ಖಂಡಿಸಿದ ಮಿಶ್ರಿ, ನಿಯಂತ್ರಣ ರೇಖೆಯುದ್ದಕ್ಕೂ ಭಾರೀ ಶೆಲ್ ದಾಳಿ ನಡೆಸುತ್ತಿದ್ದಾಗ, ಪಾಕಿಸ್ತಾನದಿಂದ ಹಾರಿಸಲಾದ ಶೆಲ್ ಪೂಂಚ್‌ನಲ್ಲಿರುವ ಮೇರಿ ಇಮ್ಯಾಕ್ಯುಲೇಟ್ ಸಭೆಯ ಕಾರ್ಮಲೈಟ್‌ಗಳು ನಡೆಸುತ್ತಿರುವ ಕ್ರೈಸ್ಟ್ ಶಾಲೆಯ ಹಿಂದೆ ಬಿದ್ದಿತು. ಪಾಕಿಸ್ತಾನದಿಂದ ಹಾರಿಸಲಾದ ಶೆಲ್ ಕ್ರೈಸ್ಟ್ ಶಾಲೆಯ ಇಬ್ಬರು ವಿದ್ಯಾರ್ಥಿಗಳ ಮನೆಗೆ ಬಡಿದಿದೆ ಎಂದು ತಿಳಿಸಿದ್ದಾರೆ.
ಮದರ್ ಕಾರ್ಮೆಲ್ ಸಭೆಗೆ ಸೇರಿದ ಕ್ರೈಸ್ತ ಸನ್ಯಾಸಿನಿಯರ ಕಾನ್ವೆಂಟ್ ಮೇಲೆ ಪಾಕಿಸ್ತಾನದ ಮತ್ತೊಂದು ಶೆಲ್ ದಾಳಿ ನಡೆದು, ನೀರಿನ ಟ್ಯಾಂಕ್‌ಗಳಿಗೆ ಹಾನಿಯಾಗಿದೆ. ಸೌರ ಫಲಕ ಮೂಲಸೌಕರ್ಯಗಳನ್ನು ನಾಶವಾಗಿದೆ. ಪಾಕಿಸ್ತಾನ ಶೆಲ್ ದಾಳಿಯ ಸಮಯದಲ್ಲಿ ಸನ್ಯಾಸಿಗಳು, ಶಾಲಾ ಸಿಬ್ಬಂದಿ ಮತ್ತು ಸ್ಥಳೀಯ ನಿವಾಸಿಗಳು ಶಾಲೆಯ ಕೆಳಗಿರುವ ಭೂಗತ ಸಭಾಂಗಣದಲ್ಲಿ ಆಶ್ರಯ ಪಡೆದರು. ಘಟನೆಯಲ್ಲಿ ಯಾವುದೇ ಹೆಚ್ಚಿನ ಹಾನಿಯಾಗಿಲ್ಲ ಎಂದು ಮಿಶ್ರಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: 44 ಸೆಕೆಂಡ್‌ನಲ್ಲಿ 72 ರಾಕೆಟ್ – ಏನಿದು ಪಿನಾಕಾ ರಾಕೆಟ್ ಲಾಂಚರ್?