ಚಂಡೀಗಢ: ಪಠಾಣ್‍ಕೋಟ್‍ನಲ್ಲಿ ಪತ್ತೆಯಾದ ಪಾಕಿಸ್ತಾನದ ಡ್ರೋನ್ ಮೇಲೆ ಗಡಿ ಭದ್ರತಾ ಪಡೆ(ಬಿಎಸ್‍ಎಫ್) ಸಿಬ್ಬಂದಿ ಗುಂಡು ಹಾರಿಸಿ ಓಡಿಸಿದ್ದಾರೆ.
Advertisement
ಶನಿವಾರ ಮಧ್ಯರಾತ್ರಿ ಭಾರತ-ಪಾಕಿಸ್ತಾನದ ಗಡಿಯಲ್ಲಿ ಭದ್ರತಾ ಪಡೆಗಳು ಗಡಿ ಒಳಗೆ ಬಂದ ಪಾಕಿಸ್ತಾನದ ಡ್ರೋನ್ ಓಡಿಸಿದ್ದು, ಪಠಾಣ್‍ಕೋಟ್‍ನ ಬಮಿಯಾಲ್ ಗಡಿಯಲ್ಲಿ ಈ ಘಟನೆ ನಡೆದಿದೆ. ಈ ಕುರಿತು ಬಿಎಸ್‍ಎಫ್ ಅಧಿಕಾರಿಗಳು ಪ್ರತಿಕ್ರಿಯಿಸಿ ಮಧ್ಯರಾತ್ರಿಯ ವೇಳೆಗೆ ಪಾಕಿಸ್ತಾನದಿಂದ ಡ್ರೋನ್ ಬಂದಿತ್ತು ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಸಿನ್ಹಾ ಧ್ವನಿ ಕೇಳಿದ್ದೇವೆ, ಆದರೆ ಮುರ್ಮು ಧ್ವನಿಯನ್ನು ಇಲ್ಲಿವರೆಗೂ ಕೇಳಿಲ್ಲ: ತೇಜಸ್ವಿ ಯಾದವ್ ಕಿಡಿ
Advertisement
Advertisement
ದಿಂಡಾ ಪೋಸ್ಟ್ ಬಳಿ ಪಾಕಿಸ್ತಾನಿ ಡ್ರೋನ್ ಅನ್ನು ಬಿಎಸ್‍ಎಫ್ ಸಿಬ್ಬಂದಿ ನೋಡಿದ್ದಾರೆ. ನಾವು ಡ್ರೋನ್‍ಗೆ 46 ಸುತ್ತು ಗುಂಡು ಹಾರಿಸಿದ್ದೇವೆ. ಅದು ಪಾಕಿಸ್ತಾನಕ್ಕೆ ಪಲಾಯನ ಮಾಡುವಂತೆ ಮಾಡಿದ್ದೇವೆ. ಇನ್ನು ಮುಂದೆ ಇಂತಹ ಯಾವುದೇ ಬೆದರಿಕೆಗಳನ್ನು ಪತ್ತೆಹಚ್ಚಲು ಪೊಲೀಸರು ಗಡಿಯಲ್ಲಿ ಶೋಧ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
Advertisement
ಕಳೆದ ತಿಂಗಳು, ಜಮ್ಮುವಿನ ಅಂತರಾಷ್ಟ್ರೀಯ ಗಡಿಯ ಬಳಿ ಪಾಕಿಸ್ತಾನದಿಂದ ಬರುತ್ತಿದ್ದ ಡ್ರೋನ್‍ಗೆ ಬಿಎಸ್‍ಎಫ್ ಪಡೆಗಳು ಗುಂಡು ಹಾರಿಸಿ ಓಡಿ ಹೋಗುವಂತೆ ಮಾಡಿದ್ದರು. ಮತ್ತೆ ಇದೇ ರೀತಿಯ ಘಟನೆ ಸಂಭವಿಸಿದೆ. ಇದನ್ನೂ ಓದಿ: ಭಾರೀ ಮಳೆಗೆ ಬೆಳಗಾವಿಯ 13 ಸೇತುವೆಗಳು ಜಲಾವೃತ – ಮತ್ತೆ ಪ್ರವಾಹ ಭೀತಿ