ಪಾಕಿಸ್ತಾನ ತಾಲಿಬಾನ್ ಮಧ್ಯೆ ಬೇಲಿಗಾಗಿ ಘರ್ಷಣೆ – ತಂತಿಯನ್ನೇ ಕದ್ದ ಉಗ್ರರು

Public TV
1 Min Read
PAK NEW ONE 11

ಇಸ್ಲಾಮಾಬಾದ್: ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರವನ್ನು ಸ್ವಾಗತಿಸಿದ್ದ ಪಾಕಿಸ್ತಾನಕ್ಕೆ ಈಗ ಅಲ್ಲಿನ ಉಗ್ರರು ಕಾಟ ನೀಡಲು ಆರಂಭಿಸಿದ್ದಾರೆ. ಗಡಿ ವಿಚಾರದಲ್ಲಿ ಅಫ್ಘಾನ್ ಉಗ್ರರು ಮತ್ತು ಪಾಕ್ ಸೇನೆಯ ಮಧ್ಯೆ ತಿಕ್ಕಾಟ ನಡೆದಿದೆ.

Taliban 2

ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಬಜೌರ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಬೇಲಿ ಹಾಕುವ ವಿಚಾರಕ್ಕೆ ತಾಲಿಬಾನ್ ಉಗ್ರರು ಮತ್ತು ಪಾಕ್ ಯೋಧರ ನಡುವೆ ಗಂಜ್ಗಾಲ್, ಸಾರ್ಕನೋ ಮತ್ತು ಕುನಾರ್ ಎಂಬಲ್ಲಿ ಅರ್ಧ ಗಂಟೆ ಗುಂಡಿನ ಚಕಮಕಿ ನಡೆದಿದೆ ಎಂದು ವರದಿಯಾಗಿದೆ

ತಾಲಿಬಾನ್ ಉಗ್ರರೊಬ್ಬರು ಗಡಿ ಬೇಲಿಯ ಬಳಿ ಇದ್ದ ಇಬ್ಬರು ಪಾಕ್ ಸೈನಿಕರನ್ನು ಹತ್ಯೆಗೈದಿದ್ದಾರೆ. ಆ ಹಿನ್ನೆಲೆಯಲ್ಲಿ ಪಾಕ್ ಸೇನೆ, ಆಫ್ಘಾನ್ ಭಾಗದ ಗ್ರಾಮಗಳತ್ತ ಗುಂಡು ಮತ್ತು ಶೆಲ್ ದಾಳಿ ನಡೆಸಿದ್ದಾರೆ. ಅದಕ್ಕೆ ಪ್ರತಿಯಾಗಿ ತಾಲಿಬಾನ್‌ರು ಪ್ರತಿದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸೋಮವಾರ ಯಾದಗಿರಿಯಲ್ಲಿ ಚುನಾವಣೆ – ಪೊಲೀಸ್ ಇಲಾಖೆ ಸಜ್ಜು

Taliban

ಗಡಿ ವಿಚಾರದಲ್ಲಿ ಉಭಯ ರಾಷ್ಟ್ರಗಳ ನಡುವೆ ಸಾಕಷ್ಟು ಗೊಂದಲಗಳಿವೆ. ಕೆಲವು ದಿನಗಳ ಹಿಂದೆ ಅಷ್ಟೇ ಅದರ ಬಗ್ಗೆ ಸಭೆ ನಡೆಸಿ ಪರಿಹಾರ ಮಾಡಿಕೊಂಡಿದ್ದೇವೆ ಎಂದು ಎರಡು  ರಾಷ್ಟ್ರಗಳು ಹೇಳಿಕೊಂಡಿದ್ದವು. ತೆಹ್ರೀಕ್-ಎ-ತಾಲಿಬಾನ್ ಉಗ್ರ ಸಂಘಟನೆ ಪಾಕಿಸ್ತಾನದೊಂದಿಗೆ ಮಾಡಿಕೊಂಡಿದ್ದ ಕದನ ವಿರಾಮವನ್ನು ಮುಂದುವರೆಸುವುದಾಗಿಯೂ ಹೇಳಿತ್ತು. ಆದರೆ ಅದರ ಬೆನ್ನಲ್ಲೇ ಈ ಘರ್ಷಣೆ ನಡೆದಿದೆ.

TALIBHAN NEW 1

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ 2,600 ಕಿಮೀ ದೂರದ ಅಂತಾರಾಷ್ಟ್ರೀಯ ಗಡಿ ಇದೆ. ಆಫ್ಘಾನ್‌ನ ಉಗ್ರರ ಒಳನುಸುಳುವಿಕೆ ತಪ್ಪಿಸುವ ನಿಟ್ಟಿನಲ್ಲಿ ಪಾಕಿಸ್ತಾನವು 2017ರ ರಿಂದ ತನ್ನ ಗಡಿಗೆ ಬೇಲಿ ಹಾಕಿಕೊಳ್ಳಲಾರಂಭಿಸಿದೆ. 90 ಶೇಕಡಾದಷ್ಟು ಕೆಲಸ ಮುಗಿದಿದೆ.

ಬೇಲಿ ಹಾಕುವ ಕೆಲಸಕ್ಕೆ ವಿರೋಧ ವ್ಯಕ್ತಪಡಿಸಿರುವ ತಾಲಿಬಾನ್ ಉಗ್ರರು ನಂಗರ ಹಾರ್‌ನ ಪೂರ್ವ ಭಾಗದಲ್ಲಿರುವ ಗುಷ್ಟಾ ಜಿಲ್ಲೆಯಲ್ಲಿ ಪಾಕಿಸ್ತಾನದ ಬೇಲಿಯನ್ನು ಹಾಳು ಮಾಡಿದ್ದಾರೆ. ಅಲ್ಲಿದ್ದ ತಂತಿಯನ್ನೆಲ್ಲಾ ತುಂಡರಿಸಿದ್ದು, ಬೇಲಿಗೆಂದು ಇಟ್ಟಿದ್ದ ತಂತಿಯನ್ನು ಎತ್ತಿಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಯೋಗಿ ಆದಿತ್ಯನಾಥ್‌ ಸರ್ಕಾರ ಜಾಹೀರಾತಿಗೆ ವಾರ್ಷಿಕ 2,000 ಕೋಟಿ ಖರ್ಚು ಮಾಡ್ತಿದೆ: ಎಎಪಿ

Share This Article