ಇಸ್ಲಾಮಾಬಾದ್: ನೆರೆಯ ಪಾಕಿಸ್ತಾನದಲ್ಲಿ ಭಾರೀ ಪ್ರವಾಹ ಉಂಟಾಗಿದ್ದು, ಇಡೀ ದೇಶ ನಲುಗಿ ಹೋಗಿದೆ. ಸಾವಿನ ಸಂಖ್ಯೆಯೂ ವ್ಯಾಪಕವಾಗಿ ಏರಿಕೆ ಕಾಣುತ್ತಿರುವುದರಿಂದ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಪಾಕಿಸ್ತಾನ ಸರ್ಕಾರಕ್ಕೆ 1.17 ಶತಕೋಟಿ ಡಾಲರ್ ನಿಧಿ ಬಿಡುಗಡೆಗೆ ಒಪ್ಪಿಕೊಂಡಿದೆ.
Advertisement
ಈ ಹಣ ಮೂಲತಃ 2019ರಿಂದ ತಡೆಹಿಡಿಯಲಾದ ಬೇಲ್ಔಟ್ ಸಾಲದ ಭಾಗವಾಗಿದೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಸರ್ಕಾರದ ಸಮಯ ಇಂಧನ ಸಬ್ಸಿಡಿಗಳನ್ನು ಕಡಿತಗೊಳಿಸುವಂತೆ ಕೇಳಿಕೊಂಡಿದ್ದ ಐಎಂಎಫ್ನ ಬೇಡಿಕೆಯನ್ನು ಪೂರೈಸದ್ದಕ್ಕೆ ಈ ಪಾವತಿಯನ್ನು ತಡೆಹಿಡಿಯಲಾಗಿತ್ತು.
Advertisement
ಇದೀಗ ಐಎಂಎಫ್ ತಡೆಹಿಡಿಯಲಾದ ಪಾವತಿಯನ್ನು ಸರ್ಕಾರಕ್ಕೆ ನೀಡಲು ಒಪ್ಪಿಕೊಂಡಿದೆ. ಅದರೊಂದಿಗೆ ಹೆಚ್ಚುವರಿ 1 ಶತಕೋಟಿ ಡಾಲರ್ ಅನ್ನು ನೀಡಲು ಐಎಂಎಫ್ ಮುಂದಾಗಿದೆ ಎಂದು ಪಾಕಿಸ್ತಾನದ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್ ತಿಳಿಸಿದ್ದಾರೆ. ಇದನ್ನೂ ಓದಿ: ಗೌತಮ್ ಅದಾನಿ ಈಗ ವಿಶ್ವದ 3ನೇ ಶ್ರೀಮಂತ – ಏಷ್ಯಾಗೆ ಇದು ಫಸ್ಟ್ ಟೈಂ
Advertisement
Advertisement
ಭಾರೀ ಪ್ರವಾಹದಿಂದಾಗಿ ಪಾಕಿಸ್ತಾನದಲ್ಲಿ ಸುಮಾರು 1,100 ಜನರು ಸಾವನ್ನಪ್ಪಿದ್ದಾರೆ. ಲಕ್ಷಾಂತರ ಜನರನ್ನು ಸ್ಥಳಾಂತರಗೊಳಿಸಲಾಗಿದೆ. ಈ ಹಿನ್ನೆಲೆ ಪಾಕಿಸ್ತಾನದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದ್ದು, ಪ್ರಧಾನಿ ಶೆಹಬಾಜ್ ಷರೀಫ್ ಅಂತಾರಾಷ್ಟ್ರೀಯ ನೆರವಿಗೆ ಬೇಡಿಕೆಯಿಟ್ಟಿದ್ದರು. ಇದನ್ನೂ ಓದಿ: ಚಿರಯುವಕರಂತೆ ವಾಲಿಬಾಲ್ ಆಡಿದ ಭಗವಂತ್ ಮಾನ್ – ವೀಡಿಯೋ ವೈರಲ್