ದುಬೈ: ಅಬುದಾಬಿಯ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಬಾಂಗ್ಲಾ, ಪಾಕ್ ನಡುವಿನ ಏಷ್ಯಾಕಪ್ ಸೂಪರ್ 4ರ ಹಂತದ ಮಹತ್ವದ ಪಂದ್ಯದಲ್ಲಿ ಸೋಲುಂಡ ಪಾಕಿಸ್ತಾನ ತಂಡದ ವಿರುದ್ಧ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಟೀಂ ಇಂಡಿಯಾ ವಿರುದ್ಧ ಹ್ಯಾಟ್ರಿಕ್ ಸೋಲು ತಪ್ಪಿಸಿಕೊಂಡಿದ್ದೇವೆ ಎಂದು ಹೇಳಿ ತಂಡಕ್ಕೆ ಶುಭಕೋರಿದ್ದಾರೆ.
How to escape for 3time defeat against INDIA..
Just by losing to kiddo team bangla..
Thatz how paki escaped and they have to enjoy this moment.
— Sardar R gowda (@Myself9845) September 26, 2018
ಪಾಕ್ ಕ್ರಿಕೆಟ್ ತಂಡದ ಅಭಿಮಾನಿಗಳು ಆಟಗಾರರ ಪ್ರದರ್ಶನದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಬಾಂಗ್ಲಾ ನೀಡಿದ 239 ಗುರಿ ಬೆನ್ನಟ್ಟಿದ್ದ ಪಂದ್ಯದ ಆರಂಭಿಕ 4 ಓವರ್ ಗಳಲ್ಲಿ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಸೋಲು ಖಚಿತ ಪಡಿಸಿತ್ತು. ಇದರ ಬೆನ್ನಲ್ಲೇ ಸೋಲು ಖಚಿತಪಡಿಸಿಕೊಂಡ ಅಭಿಮಾನಿಗಳು ಟ್ರೋಲ್ ಆರಂಭಿಸಿದ್ದರು. ಅಲ್ಲದೇ ತಂಡದ ನಾಯಕ ಸರ್ಫರಾಜ್ ಖಾನ್ ವಿರುದ್ಧವೂ ಅಸಮಾಧಾನ ವ್ಯಕ್ತವಾಗಿದ್ದು, ನಾಯಕತ್ವದಿಂದ ಕೆಳಗಿಳಿಸುವಂತೆ ಪಾಕ್ ಕ್ರಿಕೆಟ್ ಮಂಡಳಿಯನ್ನು ಆಗ್ರಹಿಸಿದ್ದಾರೆ. 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 202 ರನ್ ಗಳಿಸಿದ ಪಾಕ್ ಸೋಲುಂಡು ಟೂರ್ನಿಯಲ್ಲಿ ಫೈನಲ್ ಪ್ರವೇಶಿಸುವ ಅವಕಾಶವನ್ನು ಕಳೆದುಕೊಂಡಿತು.
If he can't bat at this position then why he is coming. Sarfaraz needs rest and send him for the rest.
— Zahid Noor Afridi (@zahidnoorafridi) September 26, 2018
ಏಷ್ಯಾಕಪ್ ಟೂರ್ನಿ ಜರ್ನಿಯನ್ನು ಭಾರತದ ವಿರುದ್ಧ ಆರಂಭಿಸಿದ್ದ ಪಾಕ್ ಗ್ರೂಪ್ ಹಂತದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ 8 ವಿಕೆಟ್ ಜಯಗಳಿಸಿತ್ತು. ಟೂರ್ನಿಯ ಸೂಪರ್ 4 ಹಂತದಲ್ಲಿ ನಡೆದ ಪಂದ್ಯದಲ್ಲೂ ಭಾರತ 9 ವಿಕೆಟ್ ಜಯಗಳಿಸಿತ್ತು. ಒಂದೊಮ್ಮೆ ಬಾಂಗ್ಲಾ ವಿರುದ್ಧ ಪಂದ್ಯದಲ್ಲಿ ಪಾಕ್ ಜಯಗಳಿಸಿದ್ದರೆ 3ನೇ ಬಾರಿ ಟೀಂ ಇಂಡಿಯಾ ವಿರುದ್ಧ ಸೋಲುತಿತ್ತು ಎಂದು ಅಭಿಮಾನಿಗಳು ಟ್ವೀಟ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಉಳಿದಂತೆ ಟೂರ್ನಿಯಲ್ಲಿ ಪಾಕ್ ತಂಡದ ಮಾಜಿ ಆಟಗಾರ ಶೋಯಿಬ್ ಮಲಿಕ್ ಮಾತ್ರ ಉತ್ತಮ ಪ್ರದರ್ಶನವನ್ನು ನೀಡಿದ್ದು, 70.33 ಸರಾಸರಿಯಲ್ಲಿ 211 ರನ್ ಸಿಡಿಸಿ ಪಾಕ್ ಪರ ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಪಾಕ್ ತಂಡ ಆರಂಭಿಕ ಬ್ಯಾಟ್ಸ್ ಮನ್‍ಗಳು ವಿಫಲವಾದ ವೇಳೆ ಮಲಿಕ್ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದರು. ಈ ಪಂದ್ಯದಲ್ಲಿ ಬಾಂಗ್ಲಾ ತಂಡದ ನಾಯಕ ಮುಷ್ರಫೆ ಮೊರ್ತಾಜಾ ಪಡೆದ ಅತ್ಯುತ್ತಮ ಕ್ಯಾಚ್ ನಿಂದ 30 ರನ್ ಗಳಿಸಿದ್ದ ಮಲಿಕ್ ಔಟಾದರು.
#AsiaCup2018 #AsiaCup
What A Catch By Mashrafe Mortaza ???????????? pic.twitter.com/1v47DJbptY
— Ussi (@Ussi499) September 26, 2018
ಏಷ್ಯಾಕಪ್ ಫೈನಲ್‍ಗೆ ಬಾಂಗ್ಲಾ ಲಗ್ಗೆ ಇಟ್ಟಿದ್ದು, ಶುಕ್ರವಾರ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯವ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಎದುರಿಸಲಿದೆ. ಏಷ್ಯಾಕಪ್ ನಲ್ಲಿ ಶ್ರೀಲಂಕಾ ವಿರುದ್ಧ ಗೆದ್ದರೂ ಅಫ್ಘಾನಿಸ್ತಾನ ವಿರುದ್ಧ ಸೋಲುಂಡ ಬಾಂಗ್ಲಾ, ಸೂಪರ್ 4 ಹಂತದಲ್ಲಿ ಭಾರತ ವಿರುದ್ಧ ಪಂದ್ಯದಲ್ಲೂ ಸೋಲುಂಡಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
????????????#AsiaCup2018#PAKvBAN#PCB pic.twitter.com/4ARNmmQSqo
— Muhammad Nabeel (@Muhamma59788173) September 26, 2018