ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ (Pakistan) ಚುನಾವಣೆ (Elections) ನಡೆಸುವುದಕ್ಕೂ ಹಣವಿಲ್ಲದ ಪರಿಸ್ಥಿತಿ ಎದುರಾಗಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ (Khawaja Asif ) ಬೇಸರ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಮ್ರಾನ್ ಖಾನ್ (Imran Khan) ಹತ್ಯೆ ಯತ್ನ ಸುಳ್ಳು ಆರೋಪವಾಗಿದೆ. ಇಮ್ರಾನ್ ಖಾನ್ ಪ್ರಾಂತೀಯ ಅಸೆಂಬ್ಲಿಗಳನ್ನು ಅಸಂವಿಧಾನಿಕವಾಗಿ ವಿಸರ್ಜಿಸಿದರು. ಆದರೆ ಅವರು ಅವಿಶ್ವಾಸ ಮತದ ಮೂಲಕ ಸಾಂವಿಧಾನಿಕವಾಗಿ ತಮ್ಮ ಸ್ಥಾನದಿಂದ ಹೊರಹಾಕಲ್ಪಟ್ಟರು. ಈಗ ಅವರು ನ್ಯಾಯಾಲಯದ ಮುಂದೆ ಹಾಜರಾಗುತ್ತಿಲ್ಲ ಎಂದು ಕಿಡಿಕಾರಿದರು.
Advertisement
Advertisement
ಇಮ್ರಾನ್ ಖಾನ್ ಪ್ರತಿದಿನ ಬಿಕ್ಕಟ್ಟುಗಳನ್ನು ಸೃಷ್ಟಿಸುತ್ತಿದ್ದಾರೆ. ಆದರೆ ಸರ್ಕಾರವು ಅವುಗಳನ್ನು ನಿಭಾಯಿಸುತ್ತಿದೆ. ಜೊತೆಗೆ ಪಾಕಿಸ್ತಾನವು ಈ ಎಲ್ಲಾ ಬಿಕ್ಕಟ್ಟುಗಳಿಂದ ಶೀಘ್ರದಲ್ಲೇ ಹೊರಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: Congress First List: 6 ಮಹಿಳೆಯರಿಗೆ ಟಿಕೆಟ್
Advertisement
Advertisement
ಈ ಹಿಂದೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮಾತನಾಡಿ, ಸಾರ್ವತ್ರಿಕ ಚುನಾವಣೆಗಳನ್ನು ಪಾಕಿಸ್ತಾನ ಸರ್ಕಾರ ಮುಂದೂಡುತ್ತಿದೆ. ಇದರಿಂದ ನಡೆಯುತ್ತಿರುವ ಸಾಂವಿಧಾನಿಕ ಉಲ್ಲಂಘನೆಗಳ ಬಗ್ಗೆ ಗಮನ ಹರಿಸುವಂತೆ ನ್ಯಾಯಾಧೀಶರನ್ನು ಒತ್ತಾಯಿಸಿದ್ದರು. ಇದನ್ನೂ ಓದಿ: ದಶಪಥ ಹೆದ್ದಾರಿ ಟೋಲ್‍ನಲ್ಲಿ ತಾಂತ್ರಿಕ ಸಮಸ್ಯೆ, ಫಾಸ್ಟ್ ಟ್ಯಾಗ್ ನಲ್ಲಿ ಪದೇ ಪದೆ ಹಣ ಕಡಿತ