ದುಬೈ: ಆಸ್ಟ್ರೇಲಿಯಾ ವಿರುದ್ಧದ ರಾಂಚಿ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ವಿಶೇಷ ಆರ್ಮಿ ಕ್ಯಾಪ್ ಧರಿಸಿ ಆಡಿರುವುದರ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಅಧಿಕೃತವಾಗಿ ಪತ್ರ ಬರೆದು ಕಠಿಣ ಕ್ರಮಕ್ಕೆ ಆಗ್ರಹಿಸಿದೆ.
ಪಾಕಿಸ್ತಾನ ನಿಲುವಿಗೆ ಸ್ಪಷ್ಟನೆ ನೀಡಿರುವ ಬಿಸಿಸಿಐ ವಕ್ತಾರರು, ನಾವು ಐಸಿಸಿ ನಿಂದ ಅನುಮತಿ ಪಡೆದೆ ಆಟಗಾರರಿಗೆ ಕ್ಯಾಪ್ ಧರಿಸಲು ಅವಕಾಶ ನೀಡಿದ್ದೇವೆ. ಅಲ್ಲದೇ ಐಸಿಸಿ ಕೂಡ ಸಹಾಯ ದೇಣಿಗೆ ಸಂಗ್ರಹ ಮಾಡಲು ಕೂಡ ಅನುಮತಿ ನೀಡಿತ್ತು ಎಂದು ಸ್ಪಷ್ಟಪಡಿಸಿದ್ದಾರೆ. ಬಿಸಿಸಿಐ ಮೊದಲೇ ಅನುಮತಿ ಪಡೆದಿರುವ ಪರಿಣಾಮ ಐಸಿಸಿ ದೂರು ಸಲ್ಲಿಸಿದ ಪಾಕಿಸ್ತಾನಕ್ಕೆ ಮುಖಭಂಗ ಉಂಟಾಗಿದೆ.
Advertisement
Watch how @msdhoni and a bunch of men in yellow jerseys wrote one of India's greatest comeback stories. #HotstarSpecials is proud to present #RoarOfTheLion. Trailer out. pic.twitter.com/nkWpV1EPnl
— Disney+ Hotstar VIP (@DisneyplusHSVIP) March 10, 2019
Advertisement
ಇತ್ತ ಪಿಸಿಬಿ ಅಧ್ಯಕ್ಷ ಎಹಶಾನ್ ಮಣಿ ತಮ್ಮ ಮೊಂಡು ವಾದವನ್ನು ಮುಂದುವರಿಸಿ, ಕ್ರೀಡೆ ಹಾಗೂ ಕ್ರಿಕೆಟ್ ಎಂದು ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದಿದ್ದಾರೆ. ಅಲ್ಲದೇ ಬಿಸಿಸಿಐ ಈ ನಡೆಯಿಂದ ವಿಶ್ವ ಕ್ರಿಕೆಟಿನಲ್ಲಿ ಭಾರತ ವಿಶ್ವಾಸರ್ಹತೆಯನ್ನು ಕಳೆದುಕೊಂಡಿದೆ ಎಂದು ಹೇಳಿದ್ದಾರೆ.
Advertisement
ಭಾರತ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಆಗ್ರಹಿಸಿರುವ ಪಾಕಿಸ್ತಾನ ಕೆಲ ಉದಾಹರಣೆಗಳನ್ನು ನೀಡಿದ್ದರು, ಈ ಹಿಂದೆ ಕ್ರಿಕೆಟ್‍ನಲ್ಲಿ ರಾಜಕೀಯ ಹೇಳಿಕೆಗಳನ್ನು ನೀಡಿದ್ದ ಇಂಗ್ಲೆಂಡ್ ಆಟಗಾರ ಮೊಯಿನ್ ಅಲಿ ಹಾಗು ದಕ್ಷಿಣ ಆಫ್ರಿಕಾ ಆಟಗಾರ ಇಮ್ರಾನ್ ತಹೀರ್ ವಿರುದ್ಧ ಐಸಿಸಿ ಕೈಗೊಂಡಿದ್ದ ಕ್ರಮವನ್ನು ಉದಾಹರಣೆಯನ್ನಾಗಿ ನೀಡಿದ್ದಾರೆ. ಇದರಂತೆ ಬಿಸಿಸಿಐ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಆಗ್ರಹಿಸುತ್ತೇವೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
Advertisement
ವಿಶೇಷ ಆರ್ಮಿ ಕ್ಯಾಪ್ ಧರಿಸಿ ಮಾತನಾಡಿದ್ದ ನಾಯಕ ಕೊಹ್ಲಿ, ಈ ಮೂಲಕ ನಮ್ಮ ಸೇನೆಗೆ ನಾವು ಗೌರವ ನೀಡುಲು ಅವಕಾಶ ಲಭಿಸಿದೆ. ಅಲ್ಲದೇ ಎಲ್ಲಾ ಆಟಗಾರರು ಪಂದ್ಯದ ಸಂಭಾವನೆಯನ್ನು ಯೊಧರ ಪರಿಹಾರ ನಿಧಿಗೆ ನೀಡುತ್ತೇವೆ ಎಂದು ಹೇಳಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv