ಮೈಸೂರು: (Mysuru) ಪಾಕಿಸ್ತಾನ, ಹಿಂದೂಸ್ತಾನ ಒಡೆದವರು ಕಾಂಗ್ರೆಸ್ಸಿಗರು. ಆದರೆ ಪಾಕಿಸ್ತಾನ (Pakistan), ಹಿಂದೂಸ್ತಾನ (Hidustan) ಒಂದಾಗಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (K.S.Eshwarappa) ಅಭಿಪ್ರಾಯಪಟ್ಟಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಖಂಡ ಭಾರತವನ್ನು ತುಂಡು ಮಾಡಿದವರು ಕಾಂಗ್ರೆಸ್ಸಿಗರು (Congress). ಪಾಕಿಸ್ತಾನ, ಹಿಂದೂಸ್ತಾನ ಬೇರೆ ಬೇರೆಯಾಗಿರಬಾರದು. ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದವರ ಆತ್ಮಕ್ಮೆ ಶಾಂತಿ ಸಿಗಬೇಕಾದರೆ, ಪಾಕಿಸ್ತಾನ – ಹಿಂದೂಸ್ತಾನ ಒಂದಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಇಂದು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಾಂಕೇತಿಕ ಚುನಾವಣೆ
ದೇಶಭಕ್ತ ಮುಸ್ಲಿಮರ ಬಗ್ಗೆ ನಮಗೆ ಯಾವ ಅಸಮಾಧಾನವೂ ಇಲ್ಲ. ನಮ್ಮ ದೇಶದಲ್ಲೇ ಇದ್ದು, ನಮ್ಮ ವಿರುದ್ಧವೇ ಸಂಚು ರೂಪಿಸುವ ರಾಷ್ಟ್ರದ್ರೋಹಿಗಳ ಮೇಲೆ ಮಾತ್ರ ನಮಗೆ ಅಸಮಾಧಾನವಿದೆ ಎಂದು ತಿಳಿಸಿದರು.
ಮತಾಂತರ ನಿಷೇಧ ವಿಧೇಯಕದ ಅಂಗೀಕಾರ ವಿಚಾರವಾಗಿ ಮಾತನಾಡಿ, ಆಸೆ, ಆಮಿಷವೊಡ್ಡಿ ಮತಾಂತರ ನಡೆಯುತ್ತಿದೆ. ಮತಾಂತರ ನಿಷೇಧ ವಿಧೇಯಕ ಚರಿತ್ರಾರ್ಹ ವಿಧೇಯಕವಾಗಿದೆ. ಬಹುಮತದಿಂದ ಅಂಗೀಕಾರವಾದ ವಿಧೇಯಕವನ್ನು ಕಾಂಗ್ರೆಸ್ ಹರಿದುಹಾಕಿ ಅವಮಾನ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಿವಿಲ್ ವರ್ಕ್‍ಗೆ ಇನ್ಮುಂದೆ ಕ್ವಾಲಿಟಿ ಚೆಕ್ ಕಡ್ಡಾಯ – ಆದೇಶ ಹೊರಡಿಸಿದ BBMP
ಅಧಿವೇಶನಕ್ಕೆ ಗೈರಾಗಿರುವ ಬಗ್ಗೆ ಪ್ರತಿಕ್ರಿಯಿಸಿ, ಕಾಲು ನೋವು ಇದೆ. ಅದಕ್ಕಾಗಿ ವಿಧಾನಮಂಡಲ ಅಧಿವೇಶನಕ್ಕೆ ಹೋಗಿಲ್ಲ. ಮಂತ್ರಿ ಆಗಲಿಲ್ಲ ಎಂಬ ಬೇಸರದಲ್ಲಿ ಅಧಿವೇಶನಕ್ಕೆ ಹೋಗಿಲ್ಲ ಎಂಬ ಮಾತಿನಲ್ಲಿ ಅರ್ಥವಿಲ್ಲ. ವರಿಷ್ಠರು ಮಂತ್ರಿ ಮಾಡಿದರೆ ಸ್ವೀಕರಿಸುತ್ತೇನೆ. ಮಾಡದೆ ಇದ್ದರೂ ಪಕ್ಷಕ್ಕಾಗಿ ದುಡಿಯುತ್ತೇನೆ. ಆರೋಪ ಬಂದ ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಆರೋಪ ಮುಕ್ತವಾಗಿ ಕ್ಲೀನ್‌ಚಿಟ್ ಸಿಕ್ಕಿದೆ. ಕ್ಲೀನ್‌ಚಿಟ್ ಸಿಕ್ಕರೂ ಮಂತ್ರಿ ಆಗಲಿಲ್ಲ ಎಂಬ ಬೇಸರ ಖಂಡಿತ ಇದೆ. ಮಂತ್ರಿ ಮಾಡುತ್ತಾರೆ ಅಂದುಕೊಂಡಿದ್ದೆ, ಮಾಡಿಲ್ಲ. ಹೀಗಾಗಿ ಬೇಸರ ಇರೋದು ಸತ್ಯ ಎಂದು ಹೇಳಿದರು.