Bengaluru CityKarnatakaLatestMain Post

ಸಿವಿಲ್ ವರ್ಕ್‍ಗೆ ಇನ್ಮುಂದೆ ಕ್ವಾಲಿಟಿ ಚೆಕ್ ಕಡ್ಡಾಯ – ಆದೇಶ ಹೊರಡಿಸಿದ BBMP

ಬೆಂಗಳೂರು: ಕೆಟ್ಟ ಮೇಲೆ ಬಿಬಿಎಂಪಿ (BBMP) ಬುದ್ಧಿ ಕಲಿತಿದೆ. ಸಿವಿಲ್ ವರ್ಕ್‍ಗೆ (Civil Work) ಇನ್ಮುಂದೆ ಕ್ವಾಲಿಟಿ ಚೆಕ್ (Quality check) ಕಡ್ಡಾಯ ಮಾಡಿ ಆದೇಶ ಹೊರಡಿಸಿದೆ.

ಯಾಕಂದ್ರೆ ಮಹಾನಗರ ಪಾಲಿಕೆ ಕೈಗೊಳ್ಳುವ ಕಾಮಗಾರಿಗಳ ಮೊತ್ತ ಕೋಟಿ ಕೋಟಿ ರೂಪಾಯಿ ಇರುತ್ತೆ. ಆದರೆ ಕೆಲಸ ಮಾತ್ರ ಕಳಪೆ ಇರುತ್ತೆ. ಇದಕ್ಕೆ ಸ್ಪಷ್ಟ ಉದಾಹರಣೆ ಮೊನ್ನೆ ಪ್ರಧಾನಿಗಳು ಬೆಂಗಳೂರಿಗೆ ಬಂದಾಗ ನೂತನವಾಗಿ ಹಾಕಿದ್ದ ಡಾಂಬಾರು ಎರಡೇ ದಿನಕ್ಕೆ ಕಿತ್ತು ಬಂದಿತ್ತು. ಹೀಗಾಗಿ ಪಾಲಿಕೆ ವತಿಯಿಂದ ಕೈಗೊಳ್ಳುವ ಪ್ರತಿ ಕಾಮಗಾರಿಗಳ ಗುಣಮಟ್ಟ ಮತ್ತು ಅದಕ್ಕೆ ಬಳಸಿರುವ ಮಿಶ್ರಣಗಳ ಪ್ರಮಾಣ ಜೊತೆಗೆ ಕ್ವಾಲಿಟಿ ಹೇಗಿದೆ ಎಂಬುದನ್ನು ಬಿಬಿಎಂಪಿಯ ಟಿವಿಸಿಸಿ (BBMPTVCC) ಅಧಿಕಾರಿಗಳು ಕಡ್ಡಾಯವಾಗಿ ಕ್ವಾಲಿಟಿ ಚೆಕ್ ಮಾಡಬೇಕು ಎಂದು ಆದೇಶ ಮಾಡಿದೆ. ಇದನ್ನೂ ಓದಿ: ಜಂಬೂ ಸವಾರಿಗೆ ಮೋದಿ ಬರುತ್ತಾರೋ ಇಲ್ಲವೋ ನಿಖರವಾಗಿ ಗೊತ್ತಿಲ್ಲ: ಪ್ರತಾಪ್‌ ಸಿಂಹ

ಕಾಮಗಾರಿಗಳ ಬಿಲ್ ಪಾಸ್ ಮಾಡುವುದಕ್ಕೂ ಮುಂಚೆ ವಲಯದ ಜಂಟಿ ಆಯುಕ್ತರು ಬಿಲ್‍ಗಳನ್ನು ಆಯ್ಕೆ ಮಾಡಿ ಸ್ಥಳ ಪರಿಶೀಲನೆಗೆ ಟಿವಿಸಿಸಿ ಅಧಿಕಾರಿಗಳಿಗೆ ನೀಡಬೇಕು. ಬಳಿಕ ಟಿವಿಸಿಸಿ ಅಧಿಕಾರಿಗಳು ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮತ್ತು ಗುಣಮಟ್ಟ ಜೊತೆಗೆ ಕ್ವಾಲಿಟಿ ಚೆಕ್ ಮಾಡಲಿದ್ದಾರೆ. ಇದನ್ನೂ ಓದಿ: ಶಿಕ್ಷಕಿ, ಸಹಾಯಕಿಯ ನಿರ್ಲಕ್ಷ್ಯ- ಪುಟ್ಟ ಮಗುವನ್ನ ಶೌಚಾಲಯದಲ್ಲಿ ಬಿಟ್ಟು ಅಂಗನವಾಡಿಗೆ ಬೀಗ

Live Tv

Leave a Reply

Your email address will not be published.

Back to top button