ಪೈಲ್ವಾನ್ ಟ್ರೈಲರ್ ಔಟ್- ರಣಾಂಗಣದಲ್ಲಿ ಕಿಚ್ಚನ ಅಬ್ಬರಕ್ಕೆ ಎದುರಾಳಿಗಳು ಉಡೀಸ್

Public TV
2 Min Read
Pailwan F

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಟ್ರೈಲರ್ ನಲ್ಲಿ ಕಿಚ್ಚ ಸುದೀಪ್ ಅಬ್ಬರಿಸಿದ್ದು, ನೋಡುಗರನ್ನು ಚಕಿತರನ್ನಾಗಿ ಮಾಡುತ್ತಿದೆ. ಮೊದಲ ಬಾರಿಗೆ ಪೈಲ್ವಾನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅಭಿಮಾನಿಗಳಲ್ಲಿ ಕುತೂಹಲವನ್ನು ಹುಟ್ಟು ಹಾಕಿದೆ. ದೇಶದೆಲ್ಲಡೆ ಪೈಲ್ವಾನ್ ಹಾಡುಗಳು, ಪೋಸ್ಟರ್ ಗಳು ಅಬ್ಬರಿಸುತ್ತಿವೆ. ಇಂದು ಟ್ರೈಲರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಅಭಿಮಾನಿಗಳಿಗೆ ಮತ್ತೊಂದು ಉಡುಗೊರೆಯನ್ನು ನೀಡಿದೆ.

ಬಲ ಇದೆ ಎಂದು ಹೊಡೆದಾಡುವವನ್ನು ರೌಡಿ, ಬಲವಾದ ಕಾರಣಕ್ಕೆ ಹೊಡೆದಾಡುವವನು ಯೋಧ ಎಂಬ ಹಿನ್ನೆಲೆ ಧ್ವನಿಯಿಂದ ಟ್ರೈಲರ್ ಆರಂಭಗೊಳ್ಳುತ್ತದೆ. ಪಕ್ಕಾ ಪೈಲ್ವಾನ್ ನಾಗಿ ಕಾಣಿಸಿಕೊಂಡಿರುವ ಕಿಚ್ಚ ಗ್ರಾಮೀಣ ಪ್ರತಿಭೆಯಲ್ಲಿ ಮಿಂಚಿದ್ದಾರೆ. ಮುಂದೆ ಕಿಚ್ಚ ಹೇಗೆ ತನ್ನ ಎಲ್ಲ ಕಷ್ಟಗಳನ್ನು, ಬಡತನವನ್ನ ಎದುರಿಸಿ ಹೇಗೆ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುತ್ತಾನೆ? ಸುನಿಲ್ ಶೆಟ್ಟಿಯವರ ಪಾತ್ರ ಟ್ರೈಲರ್ ನಲ್ಲಿ ಎಲ್ಲರನ್ನು ಸೆಳೆಯುತ್ತದೆ. ಪೈಲ್ವಾನ್ ಕೇವಲ ಹೊಡೆದಾಟದ ಸಿನಿಮಾ ಮಾತ್ರ ಅಲ್ಲ, ಇಲ್ಲೊಂದು ಸೆಂಟಿಮೆಂಟ್ ಕಥೆ ಇದೆ ಎಂಬ ಝಲಕ್ ಸಹ ಟ್ರೈಲರ್ ನಲ್ಲಿದೆ.

Pailwan

ಸೆಪ್ಟೆಂಬರ್ 12ರಂದು ಪೈಲ್ವಾನ್ ಬಿಡುಗಡೆಯಾಗಲಿದ್ದು, ಕಿಚ್ಚನಿಗೆ ಜೋಡಿಯಾಗಿ ಆಕಾಂಕ್ಷ ಸಿಂಗ್ ನಟಿಸಿದ್ದಾರೆ. ಗಜಕೇಸರಿ ಖ್ಯಾತಿಯ ಕೃಷ್ಣ ನಿರ್ದೇಶನದಲ್ಲಿ ಪೈಲ್ವಾನ್ ಮೂಡಿಬಂದಿದ್ದು, ಬಾಲಿವುಡ್ ನಟ ಸುನೀಲ್ ಶೆಟ್ಟಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಹಿಂದೆ ಬಿಡುಗಡೆಯಾದ ಟೀಸರ್ ನಲ್ಲಿ ಹಿನ್ನೆಲೆಯ ಧ್ವನಿ ಮೂಲಕ ಇಬ್ಬರು ಪೈಲ್ವಾನ್ ರ ಕಥೆಯೊಂದಿಗೆ ಆರಂಭವಾಗಿತ್ತು. ಮೈಸೂರು ಅರಮನೆಯ ಗರಡಿ ಮನೆಯಿಂದ ಆರಂಭವಾಗುವ ದೃಶ್ಯಗಳು ಎರಡು ಜಟ್ಟಿಗಳು ಕುಸ್ತಿಗೆ ತಯಾರಾಗುವ ದೃಶ್ಯಗಳು. ಧರ್ಮದ ಪರವಾದ ಕೃಷ್ಣ ಪಾತ್ರದಲ್ಲಿ ಸುದೀಪ್ ಕಾಣಿಸಿದ್ದು, ಅಧರ್ಮದ ಕಂಸನ ವಿರುದ್ಧ ಹೋರಾಟವೇ ಚಿತ್ರದ ಕಥೆ ಎಂಬುದನ್ನು ಟೀಸರ್ ಹೇಳಿತ್ತು. ಆದ್ರೆ ಚಿತ್ರತಂಡ ಎಲ್ಲಿಯೂ ಚಿತ್ರಕಥೆಯ ಸುಳಿವನ್ನು ಬಿಟ್ಟುಕೊಟ್ಟಿರಲಿಲ್ಲ. ಇದೀಗ ಟ್ರೈಲರ್ ಸಹ ಕಥೆಯ ಪಾತ್ರಗಳನ್ನು ಪರಿಚಯಿಸಿದೆ.

Pailwan 1

ಸಿನಿಮಾ ಸೆಟ್ಟೇರಿದಾಗಿನಿಂದಲೂ ಹಲವು ವಿಚಾರಗಳಿಂದಲೂ ಸುದ್ದಿಯಾಗುತ್ತಲೇ ಬಂದಿವೆ. ಶೂಟಿಂಗ್ ಸೆಟ್‍ನಲ್ಲಿ ಸುದೀಪ್ ಸಹ ಕಲಾವಿದರೊಂದಿಗೆ ತೆಗೆಸಿಕೊಂಡಿದ್ದ ಒಂದು ಫೋಟೋ ಸಿನಿಮಾದ ಬಗ್ಗೆ ಹಲವು ವಿಷಯಗಳನ್ನು ಹೊರಹಾಕಿತ್ತು. ಸುದೀಪ್ ಸೇರಿದಂತೆ ಇತರೆ ಕಲಾವಿದರು ಪೈಲ್ವಾನ್ ಪೋಸ್ ಕೊಟ್ಟಿದ್ದರೆ, ಹಿಂದೆ ಚಂದನವನದ ಹಳೆಯ ಸ್ಟಾರ್ ಗಳ ಫೋಟೋಗಳು ಕಂಡು ಬಂದಿದ್ದವು. ಇಲ್ಲಿ ಸುದೀಪ್ ಯಾವ ನಟನ ಅಭಿಮಾನಿಯ ಪಾತ್ರದಲ್ಲಿ ಮಿಂಚಲಿದ್ದಾರೆ ಎಂಬ ವಿಚಾರ ಇದೂವರೆಗೂ ಹೊರ ಬಂದಿಲ್ಲ.

Share This Article
Leave a Comment

Leave a Reply

Your email address will not be published. Required fields are marked *