ಬೆಂಗಳೂರು: ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ಪೈಲ್ವಾನ್ ತೆರೆಗಾಣಲು ದಿನಗಳಷ್ಟೇ ಬಾಕಿ ಉಳಿದಿವೆ. ಬಿಡುಗಡೆಯ ದಿನಾಂಕ ಮುಂದಕ್ಕೆ ಹೋದಷ್ಟೂ ನಿರೀಕ್ಷೆಗಳ ಕಾವೇರಿಕೊಳ್ಳುವಂತೆಯೇ ನೋಡಿಕೊಂಡಿದ್ದ ನಿರ್ದೇಶಕ ಕೃಷ್ಣ ಪಾಲಿಗಿದು ಮಹತ್ವಾಕಾಂಕ್ಷೆಯ ಚಿತ್ರ. ಈ ಹಿಂದೆ ಕನ್ನಡಕ್ಕೆ ಮಾತ್ರವೇ ಸೀಮಿತವಾಗಿದ್ದ ಹೆಬ್ಬುಲಿ ಮೂಲಕ ದೊಡ್ಡ ಗೆಲುವು ಕಂಡಿದ್ದ ಕೃಷ್ಣ ಮತ್ತು ಸುದೀಪ್ ಜೋಡಿಯ ಪೈಲ್ವಾನ್ ದೇಶಾದ್ಯಂತ ಸಂಚಲನವನ್ನೇ ಸೃಷ್ಟಿಸಿದೆ.
ಆರಂಭ ಕಾಲದಿಂದಲೂ ಪೋಸ್ಟರ್ ಗಳ ಮೂಲಕವೇ ಅಭಿಮಾನಿಗಳನ್ನು ಹುಚ್ಚೆಬ್ಬಿಸುತ್ತಾ ಸಾಗಿ ಬಂದಿದ್ದ ಚಿತ್ರ ಪೈಲ್ವಾನ್. ಇಂಥಾ ಸ್ಟಾರ್ ಸಿನಿಮಾಗಳು ಅಭಿಮಾನಿ ವಲಯಕ್ಕಷ್ಟೇ ಸೀಮಿತವಾಗೋದಿದೆ. ಆದರೆ ಪೈಲ್ವಾನ್ ಬಗೆಗಿನ ನಿರೀಕ್ಷೆಯೀಗ ಸಾರ್ವತ್ರಿಕವಾಗಿ ಬಿಟ್ಟಿದೆ. ಸುದೀಪ್ ಈ ಸಿನಿಮಾದಲ್ಲಿ ಪೈಲ್ವಾನ್ ಲುಕ್ಕಿನಲ್ಲಿ ಅಖಾಡಕ್ಕಿಳಿದಿರೋ ರೀತಿಯೇ ಅಂಥಾದ್ದಿದೆ. ಹೀಗೆ ಸಾಗಿ ಬಂದಿರೋ ಈ ಸಿನಿಮಾದ ಬಗ್ಗೆ ಪ್ರೇಕ್ಷಕರಲ್ಲಿ ಎಂಥಾ ಕಾತರ ಇದೆ ಎಂಬುದಕ್ಕೆ ಮುಂಗಡ ಟಿಕೆಟ್ ಬುಕ್ಕಿಂಗ್‍ಗಾಗಿ ಜನ ಮುಗಿಬಿದ್ದಿರೋ ರೀತಿಯೇ ಸಾಕ್ಷಿಯಂತಿದೆ.
Advertisement
Advertisement
ನಿನ್ನೆಯಿಂದಷ್ಟೇ ಸಿಂಗಲ್ ಸ್ಕ್ರೀನ್‍ಗಳಲ್ಲಿ ಪೈಲ್ವಾನ್ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. ಆದರೆ ಈಗಾಗಲೇ ಕೆಲವೆಡೆಗಳಲ್ಲಿ ಟಿಕೆಟ್ ಸೋಲ್ಡೌಟ್ ಆಗೋ ಹಂತದಲ್ಲಿದೆ!
Advertisement
ಕಿಚ್ಚ ಸುದೀಪ್ ಅವರಿಗೆ ಬಾಹುಬಲಿ ಮುಂತಾದ ಚಿತ್ರಗಳ ಮೂಲಕ ದೇಶಾದ್ಯಂತ ಅಭಿಮಾನಿ ಬಳಗ ಸೃಷ್ಟಿಯಾಗಿದೆ. ಆದರೆ ಇದುವರೆಗೂ ಕನ್ನಡ ಚಿತ್ರದ ಮೂಲಕ ಅಂಥಾ ಅಭಿಮಾನಿಗಳನ್ನು ಮುಟ್ಟುವ ಅವಕಾಶ ಕಿಚ್ಚನಿಗೆ ಸಿಕ್ಕಿರಲಿಲ್ಲ. ಇದೀಗ ಕೃಷ್ಣ ಸಾರಥ್ಯದಲ್ಲಿ ಪೈಲ್ವಾನ್ ಚಿತ್ರದ ಮೂಲಕ ಅದು ಸಾಧ್ಯವಾಗಿದೆ. ಈವತ್ತಿಗೆ ಕರ್ನಾಟಕದಲ್ಲಿ ಪೈಲ್ವಾನ್ ಬಗ್ಗೆ ಕ್ರೇಜ್ ಸೃಷ್ಟಿಯಾಗಿದೆಯಲ್ಲಾ? ಅಂಥಾದ್ದೇ ಕ್ರೇಜ್ ದೇಶಾದ್ಯಂತ ಹಬ್ಬಿಕೊಂಡಿದೆ. ಬಿಡುಗಡೆ ವಿಚಾರದಲ್ಲಿಯೂ ಪೈಲ್ವಾನ್ ಈಗಾಗಲೇ ದಾಖಲೆ ಬರೆದಿದೆ. ಮೂರು ಸಾವಿರದಷ್ಟು ಚಿತ್ರ ಮಂದಿರಗಳಲ್ಲಿ ತೆರೆಗಾಣುತ್ತಿರೋ ಈ ಚಿತ್ರ ಅದ್ಧೂರಿ ಗೆಲುವಿನ ರೂವಾರಿಯಾಗೋ ಲಕ್ಷಣಗಳೇ ದಟ್ಟವಾಗಿವೆ.