– ಪೂಂಚ್, ರಜೌರಿ ಜಿಲ್ಲೆಗಳಲ್ಲೂ ಸ್ಫೋಟದ ಸದ್ದು
ನವದೆಹಲಿ: ಜಮ್ಮುವಿನ ಮೇಲೆ ಪಾಕ್ 100 ಕ್ಷಿಪಣಿ ದಾಳಿ ನಡೆಸಿದ ಬೆನ್ನಲ್ಲೇ ಕೌಂಟರ್ ಅಟ್ಯಾಕ್ ಮಾಡಿರುವ ಭಾರತ ಲಾಹೋರ್ (Lahore) ಮೇಲೆ ಮಿಸೈಲ್‌ಗಳ ಸುರಿಮಳೆ ಗರೆದಿದೆ. ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಪಾಕ್ ಮತ್ತು ಅಲ್ಲಿನ ಜನತೆ ತತ್ತರಿಸಿದೆ. ಇಷ್ಟಾಗಿಯೂ ಕಿತಾಪತಿ ಬಿಡದ ಪಾಕಿಸ್ತಾನ ಮತ್ತೆ ಭಾರತದ ಜಮ್ಮುವಿನ ಮೇಲೆ ದಾಳಿಗೆ ವಿಫಲಯತ್ನ ನಡೆಸಿದೆ.
ಜಮ್ಮುವಿನಲ್ಲಿ ಇದುವರೆಗೆ ಪಾಕಿಸ್ತಾನದ 50ಕ್ಕೂ ಹೆಚ್ಚು ಡ್ರೋನ್ ದಾಳಿಯನ್ನು ಭಾರತೀಯ ವಿಫಲಗೊಳಿಸಿದೆ. ಭಾರತೀಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಹಾಗೂ ವಿವಿಧ ಪ್ರದೇಶಗಳನ್ನು ಗುರಿಯಾಗಿಸಿ ಪಾಕಿಸ್ತಾನ ಡ್ರೋನ್ ದಾಳಿ ನಡೆಸಿತ್ತು. ಅವಂತಿಪುರ, ಶ್ರೀನಗರ, ಜಮ್ಮು, ಪಠಾಣ್‌ಕೋಟ್, ಅಮೃತಸರ, ಕಪುರ್ತಲ, ಜಲಂಧರ್, ಲುಧಿಯಾನ, ಆದಂಪುರ, ಬಟಿಂಡಾ, ಚಂಡೀಗಢ, ನಾಲ್, ಫಲೋಡಿ, ಉತ್ತರಲೈ, ಭುಜ್ ಸೇರಿ ಒಟ್ಟು 15 ನಗರಗಳ ಮೇಲೂ ದಾಳಿಗೆ ಸಂಚುಮಾಡಿತ್ತು. ಆದ್ರೆ ಭಾರತೀಯ ಸೇನೆ ಎಲ್ಲಾ ದಾಳಿಯನ್ನ ವಿಫಲಗೊಳಿಸಿದೆ. ಇದನ್ನೂ ಓದಿ: ಕರಾಚಿಯ 15 ಕಡೆ ಭಾರೀ ಸ್ಫೋಟ – INS ವಿಕ್ರಾಂತ್ ನೌಕೆಯಿಂದ ಅಟ್ಯಾಕ್
ಮೇ 7 ರಂದು ಭಾರತ ಪಾಕಿಸ್ತಾನ ಹಾಗೂ ಪಿಒಕೆಯಲ್ಲಿದ್ದ 9 ಭಯೋತ್ಪಾದಕರ ಶಿಬಿರಗಳ ಮೇಲೆ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿ ಉಗ್ರರನ್ನು ಧ್ವಂಸಮಾಡಿದೆ, ಇದಕ್ಕೆ ಪ್ರತಿಯಾಗಿ ಪಾಕ್ ಭಾರತದ ಅಮಾಯಕ ನಾಗರಿಕರ ಮೇಲೆ ದಾಳಿ ಮಾಡಿ 16 ಜನರನ್ನು ಕೊಂದಿದೆ. ಅಲ್ಲದೆ ಉದ್ಧಟತನ ತೋರಿರುವ ಪಾಕಿಸ್ತಾನ ಸೈನ್ಯ ಗುರುವಾರ ಸಂಜೆಯಿಂದ ಕ್ಷಿಪಣಿ ದಾಳಿ ಮಾಡಿದೆ. ಜಮ್ಮುವಿನ ಮೇಲೆ ದಾಳಿ ಮುಂದುವರಿಸಿದೆ. ಭಾರತ ಪ್ರತಿದಾಳಿ ಮಾಡಿ, ಪಾಕಿಸ್ತಾನದ ಕ್ಷಿಪಣಿಗಳನ್ನು ಹೊಡೆದುರುಳಿಸಿದೆ. ಇದನ್ನೂ ಓದಿ: ಗಡಿ, ಏರ್‌ಪೋರ್ಟ್‌ಗಳ ಭದ್ರತೆ ಪರಿಶೀಲನೆ – ಉನ್ನತ ಅಧಿಕಾರಿಗಳೊಂದಿಗೆ ಅಮಿತ್ ಶಾ ಚರ್ಚೆ
ಪೂಂಚ್ ಹಾಗೂ ರಜೌರಿಯಲ್ಲಿ ಸ್ಫೋಟಗಳ ಸದ್ದು:
ಇನ್ನೂ ಲೈನ್ ಆಫ್ ಕಂಟ್ರೋಲ್ ಬಳಿ ಉದ್ವಿಗ್ನತೆ ಹೆಚ್ಚಾಗಿದೆ, ಜಮ್ಮುವಿನ ಪೂಂಚ್ ಹಾಗೂ ರಜೌರಿ ಜಿಲ್ಲೆಗಳಲ್ಲಿ ಸ್ಫೋಟದ ಸದ್ದು ಕೇಳಿಬಂದಿದೆ. ಆದರೆ ಭಯಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಜನರಿಗೆ ಧೈರ್ಯ ತುಂಬಿದ್ದು, ಜನರು ಮನೆಯಲ್ಲಿಯೇ ಇರಲು ಸೂಚಿಸಲಾಗಿದೆ. ಲೈಟ್ ಆಫ್ ಮಾಡಿ, ಕಿಟಕಿಗಳಿಗೆ ಪರದೆ ಹಾಕಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಾಂಬಾದಲ್ಲಿ ಹಲವು ಪಾಕ್ ಉಗ್ರರ ಹತ್ಯೆ
ಅಮೃತಸರ DPRO ಮಾತನಾಡಿ, ಯಾವುದೇ ಕಾರಣಕ್ಕೂ ಭಯಪಡಬೇಡಿ. ಸೈರನ್ ಮೊಳಗುತ್ತದೆ. ಪರಿಸ್ಥಿತಿ ತಿಳಿಯಾದ ನಂತರ ಮತ್ತೆ ಸಂದೇಶ ರವಾನಿಸುತ್ತೇವೆ. ನಮ್ಮ ಸೈನಿಕರು ಕಾರ್ಯಪ್ರವೃತ್ತರಾಗಿದ್ದಾರೆ. ನಾವೆಲ್ಲರೂ ಮನೆಯಲ್ಲಿಯೇ ಇದ್ದು ಅವರಿಗೆ ಬೆಂಬಲ ನೀಡಬೇಕು. ಭಯಪಡುವ ಅಗತ್ಯವಿಲ್ಲ,” ಎಂದು ಅವರು ಹೇಳಿದ್ದಾರೆ. ಈ ಮಾತನ್ನು ಅವರು ನೇರವಾಗಿ ಹೇಳಿದ್ದಾರೆ. ಇದನ್ನೂ ಓದಿ: ಪಾಕ್‌ನ ಪ್ರಮುಖ ಎಫ್-16 ಹೊಡೆದುರುಳಿಸಿದ ಭಾರತೀಯ ವಾಯು ಸೇನೆ