– 1,319 ಎಕರೆ ಮುಸ್ಲಿಂ ಸಮುದಾಯ ಸಂಘಟನೆಗಳ ಹೆಸರಲ್ಲಿದೆ ಎಂದ ಸಚಿವ
ಬೆಂಗಳೂರು: 14,201 ಎಕರೆಯಲ್ಲಿ 773 ಎಕರೆ ಮಾತ್ರ ವಕ್ಫ್‌ಗೆ ನೋಟಿಫಿಕೇಶನ್ ಆಗಿದೆ. 1,319 ಎಕರೆ ಮುಸ್ಲಿಂ ಸಮುದಾಯ ಸಂಘಟನೆಗಳ ಹೆಸರಲ್ಲಿದೆ ಎಂದು ಸಚಿವ ಕೃಷ್ಣಭೈರೇಗೌಡ ( Krishna Byre Gowda) ಹೇಳಿದ್ದಾರೆ.
Advertisement
ರೈತರ ಜಮೀನಿಗೆ ವಕ್ಫ್ ಬೋರ್ಡ್‌ನಿಂದ (Waqf Board) ನೊಟೀಸ್ ವಿಚಾರದ ಕುರಿತು ವಿಧಾನಸೌಧದಲ್ಲಿ ಎಂ ಬಿ ಪಾಟೀಲ್, ಕೃಷ್ಣಭೈರೇಗೌಡ, ಜಮೀರ್ ಅಹಮದ್‌ರಿಂದ ಸುದ್ದಿಗೋಷ್ಠಿ ನಡೆಯಿತು. ಇದನ್ನೂ ಓದಿ: ನಟ ವಿಜಯ್ ಬಿಜೆಪಿಯ ʻಸಿʼ ಟೀಂ – ತಮಿಳುನಾಡು ಡಿಎಂಕೆ ಸಚಿವ ಟೀಕೆ
Advertisement
Advertisement
ಈ ಕುರಿತು ಕೃಷ್ಣಭೈರೇಗೌಡ ಮಾತನಾಡಿ, ಡಿಸಿ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ರಚನೆ ಆಗಿದೆ. ದಾಖಲಾತಿ ಇರುವ ರೈತರು ತಂದು ಡಿಸಿಗೆ ಕೊಡಬಹುದು. ದಾಖಲಾತಿ ಇದ್ದರೆ ಅವರಿಗೆ ಜಮೀನು ಸಿಕ್ಕೇ ಸಿಗುತ್ತದೆ. ಮಂಜೂರು ಆಗಿರೋ ಜಮೀನು ಯಾರಿಂದಲೂ ವಾಪಸ್ ಪಡೆಯುವುದಿಲ್ಲ ಎಂದರು. ಇದನ್ನೂ ಓದಿ: 1974 ಮುಂಚಿನ ದಾಖಲೆ ಇದ್ದರೆ ರೈತರು ಟಾಸ್ಕ್ ಫೋರ್ಸ್‌ಗೆ ತಂದುಕೊಡಿ – ಎಂ.ಬಿ ಪಾಟೀಲ್
Advertisement
ವಿಜಯಪುರದಲ್ಲಿ (Vijayapura) ವಕ್ಫ್ ಸಂಸ್ಥೆಗೆ ಸೇರಿದ ಜಮೀನು ಮತ್ತೊಂದು ಕಡೆ ರೈತರ ಜಮೀನು ಇದರ ಬಗ್ಗೆ ಸ್ಪಷ್ಟನೆ ಕೊಡುತ್ತಿದ್ದೇವೆ. ಈಗಾಗಲೇ ಎಂ ಬಿ ಪಾಟೀಲ್ ಹೇಳಿದ್ದಾರೆ. ಆದರೆ ವ್ಯವಸ್ಥಿತವಾಗಿ ವಿವಾದ ಮಾಡೋ ಕೆಲಸ ಆಗುತ್ತಿದೆ. 1973-74ರಲ್ಲಿ ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಆಸ್ತಿ ಎಂದು ನೋಂದಣಿ ಆಗಿದೆ. 14,201 ಎಕರೆ ನೋಟಿಫಿಕೇಶನ್ ಆಗಿದೆ. ಇದರಲ್ಲಿ 773 ಎಕರೆ ಮಾತ್ರ ವಕ್ಫ್‌ಗೆ ನೋಟಿಫಿಕೇಶನ್ ಆಗಿದೆ. ಕೆಲವು ದರ್ಗಾ, ಮಸೀದಿ ಸೇರಿದ ಜಾಗ ಇದೆ. 1,319 ಎಕರೆ ವಯಕ್ತಿಕ ಅನುಭೋಗದಲ್ಲಿ ಇಲ್ಲ. ಯಾರಿಗೂ ಮಂಜೂರು ಆಗಿಲ್ಲ. ಅವು ಮುಸ್ಲಿಂ ಸಮುದಾಯದ ಸಂಘಟನೆಗಳ ಹೆಸರಿನಲ್ಲಿ ಇವೆ. 11,835 ಎಕರೆ ರೈತರಿಗೆ ಉಳುವವನೇ ಭೂಮಿಯ ಒಡೆಯ ಅಡಿ ಮಂಜೂರು ಆಗಿದೆ ಎಂದು ತಿಳಿಸಿದರು. ಇದನ್ನೂ ಓದಿ: 13 ವರ್ಷ ಪ್ರೀತಿಸಿದ ಹುಡುಗಿ ಮತ್ತೊಬ್ಬನ ಜೊತೆ ಮದುವೆ – ಡೆತ್ ನೋಟ್ ಬರೆದಿಟ್ಟು ಪ್ರಿಯಕರ ಆತ್ಮಹತ್ಯೆ
ಯಾರಿಗೆ ನೊಟೀಸ್ ಕೊಡಬೇಕು ಎಂದು ವಕ್ಫ್ ಸಚಿವರು ಹೇಳಲಿಲ್ಲ. ರೈತರಿಗೆ ಮಂಜೂರಾಗಿರೋ ಜಮೀನು ವಾಪಸ್ ಪಡೆಯೋದು ಸರ್ಕಾರದ ಮುಂದೆ ಇಲ್ಲ. 121 ನೋಟಿಸ್ ಹೋಗಿದೆ. ಇಂಡಿ ತಾಲೂಕಿನಲ್ಲಿ 41 ಜನರಿಗೆ ನೋಟಿಸ್ ಕೊಡಬೇಕಿತ್ತು. ಆದರೆ ನೋಟಿಸ್ ಕೊಡದೇ ಆಗಿದೆ. ಆದರೆ ತಹಶಿಲ್ದಾರರು ನೋಟಿಸ್ ಕೊಟ್ಟಿಲ್ಲ. ಹೀಗಾಗಿ ಎ ಸಿ ಅವರು ಅದನ್ನು ತಹಶಿಲ್ದಾರರಿಗೆ ವಾಪಸ್ ಕಳಿಸುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ದಾನಿಗಳು 1.12 ಲಕ್ಷ ಎಕರೆ ಭೂಮಿಯನ್ನ ವಕ್ಫ್‌ಗೆ ದಾನ ಮಾಡಿದ್ದಾರೆ: ಜಮೀರ್
ಹೊನವಾಡದಲ್ಲಿ ವಕ್ಫ್ ಆಸ್ತಿ ಎಂದು ಉದ್ದೇಶಪೂರ್ವಕ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಅದು ಸುಳ್ಳು, 1977ರಲ್ಲಿ ಹೊನವಾಡ ಆಸ್ತಿ ಸರ್ಕಾರಕ್ಕೆ ಬಂದಿದೆ. ಹೊನವಾಡದಲ್ಲಿ 1,200 ಎಕರೆ ವಕ್ಫ್ ಆಸ್ತಿ ಇಲ್ಲ. 11 ಎಕರೆ ಜಾಗ ಮಾತ್ರ ವಕ್ಫ್ ಆಸ್ತಿ ಆಗಿದೆ. ಹೊನವಾಡದಲ್ಲಿ ಯಾವ ರೈತರಿಗೂ ನೋಟಿಸ್ ಕೊಡಲಿಲ್ಲ. ಉದ್ದೇಶ ಪೂರ್ವಕವಾಗಿ ರಾಷ್ಟ್ರೀಯ ಮಟ್ಟದಲ್ಲಿ ವಿಪಕ್ಷಗಳು ಸುದ್ದಿ ಮಾಡುತ್ತಿವೆ. ಇದು ಯತ್ನಾಳ್. ವಿಜಯೇಂದ್ರ ನಡುವೆ ಇರುವ ಸಂಘರ್ಷ. ಅವರ ರಾಜಕೀಯ ಬೇಳೆ ಬೇಯಿಸಿಕೊಳ್ಳೋಕೆ ಹೀಗೆ ಮಾಡುತ್ತಿದ್ದಾರೆ. ಇಬ್ಬರ ನಡುವಿನ ಜಗಳ ಮರೆ ಮಾಚುವುದಕ್ಕೆ ಇದನ್ನ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು. ಇದನ್ನೂ ಓದಿ: ಭರ್ತಿಯಾದ ಕೆರೆಕಟ್ಟೆಗಳಿಂದ ಅವಾಂತರ – ಕೈಗೆಬಂದ ತುತ್ತು ಬಾಯಿಗೆ ಬಾರದ ಸ್ಥಿತಿಯಲ್ಲಿ ಚಿತ್ರದುರ್ಗ ರೈತರು