ಬಾಲಿವುಡ್ ಸಿನಿಮಾಗಳು ಮಾತ್ರ ಹಿಂದಿ ಚಿತ್ರಗಳು, ಉಳಿದ ಸಿನಿಮಾಗಳು ಪ್ಯಾನ್ ಇಂಡಿಯಾ ಚಿತ್ರಗಳು ಯಾಕಾಗಬೇಕು? ಹಾಗಂತ ಕರೆಯುವುದನ್ನು ನಿಲ್ಲಿಸಿ, ಕನ್ನಡ ಚಿತ್ರಗಳು ಎಂದು ಕರೆದು ಸ್ವಾಭಿಮಾನ ತೋರಿಸಬೇಕು ಎಂದಿದ್ದಾರೆ ನಟ ಕಿಚ್ಚ ಸುದೀಪ್. ನಮ್ಮದೂ ಹಿಂದಿ ಚಿತ್ರಗಳಂತೆಯೇ ಒಂದು ಭಾಷೆಯ ಚಿತ್ರ. ಹಾಗಾಗಿ ಹಿಂದಿ ಚಿತ್ರಗಳು ಎಂದು ಕರೆಯುವಂತೆ ಕನ್ನಡ ಚಿತ್ರಗಳು ಎಂದೇ ಹೆಮ್ಮೆಯಿಂದ ಕರೆಯೋಣ ಅಂದಿದ್ದಾರೆ ಕಿಚ್ಚ. ಇದನ್ನೂ ಓದಿ : ಮಂದಣ್ಣಗಾಗಿ ಮುಂಬೈನಲ್ಲಿ ಮುಗಿಬಿದ್ದ ಫ್ಯಾನ್ಸ್ : ಬಾಲಿವುಡ್ ನಲ್ಲೂ ರಶ್ಮಿಕಾ ಹವಾ
ಇತ್ತೀಚಿನ ದಿನಗಳಲ್ಲಿ ದಕ್ಷಿಣದ ಬಹುತೇಕ ಚಿತ್ರಗಳನ್ನು ಪ್ಯಾನ್ ಇಂಡಿಯಾ ಚಿತ್ರ ಎಂದು ಕರೆಯಲಾಗುತ್ತದೆ. ಆದರೆ ಹಿಂದಿಯವರು ಪ್ಯಾನ್ ಇಂಡಿಯಾ ಅನ್ನುವ ಶಬ್ದವನ್ನೇ ಬಳಸುವುದಿಲ್ಲ. ಅದನ್ನು ಭಾರತೀಯ ಸಿನಿಮಾ ಎನ್ನುವಂತೆ ಬಿಂಬಿಸಲಾಗುತ್ತಿದೆ. ಹಾಗಾಗಿ ಕಿಚ್ಚ ಸುದೀಪ್ ಪ್ಯಾನ್ ಇಂಡಿಯಾ ಶಬ್ದವನ್ನೇ ಕಿತ್ತು ಹಾಕುವಂತೆ ಕರೆ ನೀಡಿದ್ದಾರೆ. ಇದನ್ನೂ ಓದಿ : ಬಾಲಿವುಡ್ ಎಂದರೆ ಭಾರತೀಯ ಸಿನಿಮಾರಂಗವಲ್ಲ: ಮೆಗಾಸ್ಟಾರ್ ಚಿರಂಜೀವಿಗೂ ಆಗಿತ್ತು ಅವಮಾನ
ಹಿಂದಿ ಸಿನಿಮಾಗಳು ದಕ್ಷಿಣದಲ್ಲಿ ಡಬ್ ಆಗಿ ಬಿಡುಗಡೆ ಆಗಲು ಕಷ್ಟ ಪಡುತ್ತಿವೆ. ದಕ್ಷಿಣದ ಸಿನಿಮಾಗಳು ಹಿಂದಿಗೆ ಡಬ್ ಆಗಿ ಗೆಲುವು ಸಾಧಿಸುತ್ತಿವೆ. ಹಾಗಾಗಿ ಪ್ಯಾನ್ ಇಂಡಿಯಾ ಸಿನಿಮಾ ಯಾವುದು? ಭಾರತೀಯ ಸಿನಿಮಾ ಯಾವುದು ಎನ್ನುವುದನ್ನು ಯೋಚಿಸಬೇಕಿದೆ ಎಂದಿದ್ದಾರೆ ಸುದೀಪ್. ಇದನ್ನೂ ಓದಿ : ಕೆಜಿಎಫ್ 2 : ಗೋವಾದಲ್ಲಿ ಸಕ್ಸಸ್ ಪಾರ್ಟಿ
ಕನ್ನಡ ಸಿನಿಮಾಗಳನ್ನು ಎಲ್ಲ ಭಾಷಿಗರು ನೋಡುತ್ತಿದ್ದಾರೆ. ಇಲ್ಲಿಂದ ಅನೇಕ ಭಾಷೆಗಳಿಗೆ ಕನ್ನಡದ ಚಿತ್ರಗಳು ಡಬ್ ಆಗುತ್ತಿವೆ. ಕಿಚ್ಚ ಸುದೀಪ್ ನಟನೆಯ ವಿಕ್ರಾಂತ ರೋಣ ಸಿನಿಮಾ ಕೂಡ ಹತ್ತಕ್ಕೂ ಹೆಚ್ಚು ಭಾಷೆಗೆ ಡಬ್ ಆಗಿ ಬಿಡುಗಡೆ ಆಗಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಹೊತ್ತಿನಲ್ಲಿ ಕಿಚ್ಚ ಆಡಿರುವ ಮಾತುಗಳು ಸಿನಿಮಾ ರಂಗದಲ್ಲಿ ಸಂಚಲನ ಮೂಡಿಸಿವೆ.