ಬೆಂಗಳೂರು: ಕಾಂತರಾಜು ಕಮಿಟಿ (Kantharaju Report) ವರದಿಯ ಮೂಲ ಪ್ರತಿ ಕಾಣೆಯಾಗಿದೆ ಎಂಬ ಆರೋಪಕ್ಕೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜೈ ಪ್ರಕಾಶ್ ಹೆಗ್ಡೆ (Jaiprakash Hegde) ಆ ರೀತಿ ಆಗಿಲ್ಲ ಎಂಬ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂತರಾಜು ಕಮಿಟಿ ವರದಿಯ ವರ್ಕ್ ಶೀಟ್ ನ ಮೂಲ ಪ್ರತಿ ಇಲ್ಲಾ ಅಷ್ಟೆ. ಯಾವುದೇ ದಾಖಲೆ ಕಳೆದು ಹೋಗಿಲ್ಲ. ಡೆಟಾ ಎಲ್ಲವೂ ಇದೆ, ಯಾವುದು ಮಿಸ್ ಅಗಿಲ್ಲ. ಸಾಫ್ಟ್‍ವೇರ್‍ನಲ್ಲೂ ಇದೆ. ಪ್ರತಿ ಜಿಲ್ಲಾಧಿಕಾರಿಗಳ ಬಳಿಯೂ ಡೇಟಾ ಇದೆ. ಹಿಂದೆ ಸಿದ್ಧಪಡಿಸಿದ್ದ ವರದಿಯ ವರ್ಕ್ ಶೀಟ್ ಮೂಲ ಪ್ರತಿ ಇಲ್ಲಾ ಅಷ್ಟೆ. ಅದು ವಿಷಯನೇ ಅಲ್ಲಾ, ವಿವಾದವೂ ಅಲ್ಲಾ ಎಂದಿದ್ದಾರೆ.
ಡೇಟಾ ಆಧರಿಸಿ ನಾವು ವರದಿ ಸಿದ್ಧಪಡಿಸುತ್ತೇವೆ. ಸಿದ್ಧಪಡಿಸುವ ಪ್ರಕ್ರಿಯೆ ಈಗಲೂ ನಡೆಯುತ್ತಿದೆ. ಕಾಂತರಾಜು ಕಮಿಟಿ ವರದಿ ಸಿದ್ಧಪಡಿಸಿದ ವರ್ಕ್ ಶೀಟ್ ಇಲ್ಲಾ ಹಾಗೂ ಮೆಂಬರ್ ಸೆಕ್ರೆಟರಿ ಸಹಿ ಇಲ್ಲ ಎಂಬುದರ ಬಗ್ಗೆ 2021 ರಲ್ಲಿ ಪತ್ರ ಬರೆದಿದ್ದ ಬಗ್ಗೆಯೂ ಸ್ಪಷ್ಟನೆ ನೀಡಿರುವ ಅವರು, 2021ರ ಅಕ್ಟೋಬರ್ ಸರ್ಕಾರಕ್ಕೆ ಮಾಹಿತಿ ನೀಡಿ ಪತ್ರ ಬರೆಯಲಾಗಿದೆ. ಹಿಂದೆ ಸಿದ್ಧಪಡಿಸಿದ್ದ ವರದಿಯ ವರ್ಕ್ ಶೀಟ್ ಮೂಲ ಪ್ರತಿ ಇಲ್ಲಾ ಎಂಬುದನ್ನು ಪತ್ರದಲ್ಲಿ ತಳಿಸಿಲಾಗಿದೆ. ಅಂದಿನ ಮೆಂಬರ್ ಸೆಕ್ರೆಟರಿ ಸಹಿ ಇರಲಿಲ್ಲ. ಈಗಿನ ಮೆಂಬರ್ ಸೆಕ್ರೆಟರಿ ಇರುವುದರಿಂದ ಈಗ ವರದಿ ಕೊಡಲು ಯಾವುದೇ ಸಮಸ್ಯೆ ಇಲ್ಲಾ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: 2025 ರೊಳಗೆ ರಕ್ತಹೀನತೆ ಮುಕ್ತ ಆರೋಗ್ಯ ಕರ್ನಾಟಕ ರೂಪಿಸುವ ಗುರಿ: ದಿನೇಶ್ ಗುಂಡೂರಾವ್