ನವದೆಹಲಿ: ಲೋಕಸಭೆಯಲ್ಲಿ (Lok Sabha) ಅವಿಶ್ವಾಸ ನಿರ್ಣಯದ ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi) ಭಾಷಣ ಮಾಡುತ್ತಿದ್ದ ಮಧ್ಯೆಯೇ ವಿಪಕ್ಷಗಳ ಸಂಸದರು ಸಭಾತ್ಯಾಗ ಮಾಡಿದರು.
ವಿಪಕ್ಷಗಳ ಅವಿಶ್ವಾಸ ನಿರ್ಣಯ ಕುರಿತು ಕಳೆದ ಮೂರು ದಿನಗಳಿಂದ ಚರ್ಚೆ ನಡೆಯಿತು. ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿ, ತಮ್ಮ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡರು. ಮೋದಿ ಭಾಷಣದ ಮಧ್ಯೆ ವಿಪಕ್ಷಗಳ ಹತ್ತಾರು ಸಂಸದರು ಲೋಕಸಭೆಯಿಂದ ಹೊರನಡೆದರು. ಇದನ್ನೂ ಓದಿ: ವಿಪಕ್ಷಗಳ ನೋ ಬಾಲ್‌ಗೆ ನಮ್ಮವರಿಂದ ಸಿಕ್ಸರ್, ಬೌಂಡರಿ, ಕೊನೆಗೆ ಸೆಂಚುರಿ: ನರೇಂದ್ರ ಮೋದಿ
Advertisement
Advertisement
ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ವಿಪಕ್ಷಗಳ ಒಕ್ಕೂಟ, ಕಾಂಗ್ರೆಸ್, ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು. 2028 ರಲ್ಲಿ ಅವಿಶ್ವಾಸ ನಿರ್ಣಯ ಮಂಡಿಸುವಾಗ ಸ್ವಲ್ಪ ತಯಾರಾಗಿ ಬನ್ನಿ ಎಂದು ವಿಪಕ್ಷಗಳಿಗೆ ಮೋದಿ ವ್ಯಂಗ್ಯ ಮಾಡಿದರು. ಆ ಮೂಲಕ ಮುಂದಿನ ಬಾರಿಯೂ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಅಧಿಕಾರಕ್ಕೆ ಬರುತ್ತೆ ಆಶಯವನ್ನು ವ್ಯಕ್ತಪಡಿಸಿದರು.
Advertisement
Advertisement
ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯ ಬಗ್ಗೆ ಬುಧವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡುವಾಗ, ಮೋದಿ ಸರ್ಕಾರವು ಇಡೀ ದೇಶವನ್ನು ಸುಡಲು ಸಜ್ಜಾಗಿದೆ ಎಂದು ವಾಗ್ದಾಳಿ ನಡೆಸಿದ್ದರು. ಇದನ್ನೂ ಓದಿ: ಪ್ರಧಾನಿ ಪರಮಾತ್ಮನಲ್ಲ, ಮೋದಿ ದೇವರಲ್ಲ, ಸದನಕ್ಕೆ ಬಂದು ಮಾತನಾಡಲಿ: ಖರ್ಗೆ ಕೆಂಡ
Web Stories