– ಆಪರೇಷನ್ ಸಿಂಧೂರ ಪಹಲ್ಗಾಮ್ ದಾಳಿಯ ಮೃತರಾದವರಿಗೆ ಅರ್ಪಣೆ
ಶಿವಮೊಗ್ಗ: ಪಹಲ್ಗಾಮ್‌ನಲ್ಲಿ ಉಗ್ರರರು ಪ್ರವಾಸಿಗರ ಮೇಲೆ ದಾಳಿ ಮಾಡಿ, ಮೋದಿಗೆ ಹೇಳಿ ಅಂದಿದ್ದರು. ನಾವು ಮೋದಿಗೆ ಹೇಳಿದ್ದೆವು. ಇಂದು ಉತ್ತರ ಸಿಕ್ಕಿದೆ. ಈಗ ಅವರು ಯಾರಿಗೆ ಹೇಳ್ತಾರೆ ಎಂದು ಪ್ರಶ್ನಿಸುವ ಮೂಲಕ ಪಹಲ್ಗಾಮ್ ಉಗ್ರರ ದಾಳಿಯಲ್ಲಿ(Pahalgam Terror Attack) ಮೃತಪಟ್ಟ ಮಂಜುನಾಥ್ ರಾವ್ ಅವರ ಸಂಬಂಧಿ ಡಾ.ರವಿಕಿರಣ್ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಭಾರತವು ಪಾಕಿಸ್ತಾನದ ಉಗ್ರರ ಅಡಗುತಾಣಗಳಿಗೆ ದಾಳಿ ನಡೆಸಿದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದರು. ಬೆಳಗ್ಗೆ ಏಳುವಾಗಲೇ ಒಳ್ಳೆಯ ಸುದ್ದಿ ಸಿಕ್ಕಿದೆ. `ಆಪರೇಷನ್ ಸಿಂಧೂರ'(Operation Sindoor) ಹೆಸರು ಕೇಳಿಯೇ ರೋಮಾಂಚನ ಆಯ್ತು. ನಾವು ಚಿಕ್ಕವರಿಂದಲೂ ಕಾಶ್ಮೀರ(Kashmir) ಭಾರತದ ಸಿಂಧೂರ ಎಂದು ಹೇಳುತ್ತಲೇ ಬಂದಿದ್ದೇವೆ. ಪಹಲ್ಗಾಮ್ ದಾಳಿಯಲ್ಲಿ ಉಗ್ರರು ಭಾರತೀಯ ಮಹಿಳೆಯರ ಸಿಂಧೂರ ಅಳಿಸುವ ಕೆಲಸ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಭಾರತ ಕೂಡ ಕೆಲಸ ಆರಂಭಿಸಿದೆ ಎಂದರು. ಇದನ್ನೂ ಓದಿ: ಉಗ್ರರ ಮೇಲಿನ ದಾಳಿಗೆ ಭಾರತದ ಪ್ರಜೆಗಳ ಮೇಲೆ ಗುಂಡು – 7 ಸಾವು
ಭಾರತೀಯ ಸೇನೆಯು ಉಗ್ರರ ಮೇಲೆ ದಾಳಿ ಮಾಡಿದೆಯೇ ಹೊರತು ನಾಗರೀಕರ ಮೇಲೆ ಮಾಡಿಲ್ಲ. ಆಪರೇಷನ್ ಸಿಂಧೂರವು ಪಹಲ್ಗಾಮ್ ದಾಳಿಯಲ್ಲಿ ಮೃತರಾದವರಿಗೆ ಸಲ್ಲಿಸಿದ ಗೌರವ. ಉಗ್ರರು ದಾಳಿ ಮಾಡುವಾಗ ಮೋದಿಗೆ ಹೇಳಿ ಅಂದಿದ್ದರು. ನಾವು ಮೋದಿಗೆ ಹೇಳಿದ್ದೆವು. ಇಂದು ನಮಗೆ ಉತ್ತರ ಸಿಕ್ಕಿದೆ. ಈಗ ಅವರು ಯಾರಿಗೆ ಹೇಳ್ತಾರೆ ಎಂದು ಕೇಳಲು ಬಯಸ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಕಸಬ್, ಡೇವಿಡ್ ಹೆಡ್ಲಿ ತರಬೇತಿ ಪಡೆದ ಕ್ಯಾಂಪ್ ಧ್ವಂಸ: ಭಾರತ
ಭಾರತೀಯ ಸೇನೆಗೆ(Indian Army) ಎಲ್ಲರೂ ಕೂಡ ಸಹಕಾರ ನೀಡಬೇಕು. ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಾಶ ಮಾಡುವ ಕೆಲಸ ಮುಂದುವರೆಯಲಿ ಎಂದರು. ಇದನ್ನೂ ಓದಿ: ಆಪರೇಷನ್ ಸಿಂಧೂರದ ಮೂಲಕ ನರಮೇಧಕ್ಕೆ ಉತ್ತರ: ಅಮಿತ್ ಶಾ ಶ್ಲಾಘನೆ
ಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಇಂದು ತಡರಾತ್ರಿ 1:44ರ ಸುಮಾರಿಗೆ ಭಾರತೀಯ ಸೇನೆಯು ಪಾಕಿಸ್ತಾನದ 9 ಉಗ್ರರ ಅಡಗುತಾಣಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಈ ಕಾರ್ಯಚರಣೆಗೆ `ಆಪರೇಷನ್ ಸಿಂಧೂರ’ ಎಂದು ಹೆಸರಿಡಲಾಗಿತ್ತು. ಪಹಲ್ಗಾಮ್ ದಾಳಿಯ ಮೂಲಕ ಭಾರತೀಯ ಮಹಿಳೆಯರ ಸಿಂಧೂರ ಅಳಿಸಿದ್ದ ಉಗ್ರರಿಗೆ ಭಾರತವು ಆಪರೇಷನ್ ಸಿಂಧೂರದ ಮೂಲಕ ತಕ್ಕ ಪ್ರತ್ಯುತ್ತರ ನೀಡಿದೆ.