ಪಾಕ್ ವಿರುದ್ಧ ವಿದೇಶಗಳಿಗೆ ಸರ್ವಪಕ್ಷ ನಿಯೋಗ – ಯಾವ ದೇಶಕ್ಕೆ ಯಾರು ಹೋಗ್ತಾರೆ?

Public TV
3 Min Read
Shashi Tharoor Ravi Shankar Prasad Kanimozhi Karunanidhi Supriya Sule

ನವದೆಹಲಿ: ಪಹಲ್ಗಾಮ್ ದಾಳಿ ಪ್ರತೀಕಾರವಾಗಿ ಭಾರತ ನಡೆಸಿದ್ದ ಆಪರೇಷನ್ ಸಿಂಧೂರದಿಂದ (Operation Sindoor) ಉಗ್ರಸ್ತಾನ ಪಾಕ್‌ನ (Pakistan) ಜಂಘಾಬಲವೇ ಕುಸಿದು ಹೋಗಿದೆ. ಇದೀಗ ಭಾರತ (India) ಭಯೋತ್ಪಾದನೆ ನಿರ್ಮೂಲನೆಗೆ ಹೊಸ ಅಸ್ತ್ರ ಪ್ರಯೋಗಿಸಿದೆ. ಈ ಸಲ ಉಗ್ರ ಪೋಷಕ ಪಾಕಿಸ್ತಾನ ಹಾಗೂ ಭಯೋತ್ಪಾದನಾ ಕೃತ್ಯಕ್ಕೆ ಪೂರ್ಣವಿರಾಮ ಹಾಕಲು ಭಾರತ ಪ್ರಮುಖ ರಾಜತಾಂತ್ರಿಕ ಹೆಜ್ಜೆ ಇಟ್ಟಿದೆ.

ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿ ತೋರಿಸಲು ಕೇಂದ್ರ ಸರ್ಕಾರ 7 ಸರ್ವ ಪಕ್ಷ ನಿಯೋಗ ರಚಿಸಿದೆ. ಈ ಬಗ್ಗೆ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು (Kiren Rijiju) ಮಾಹಿತಿ ನೀಡಿ ಜಾಗತಿಕ ಮಟ್ಟದಲ್ಲಿ ಪಾಕ್ ಉಗ್ರ ಮುಖವಾಡ ಬಯಲು ಮಾಡಲು ಸರ್ವಪಕ್ಷ ನಿಯೋಗ ವಿವಿಧ ದೇಶಗಳಿಗೆ ಭೇಟಿ ನೀಡಲಿದೆ ಎಂದು ತಿಳಿಸಿದ್ದಾರೆ.

ಪ್ರಾದೇಶಿಕ ಬಣಗಳಾಗಿ ವಿಂಗಡಿಸಲಾದ ನಿಯೋಗಗಳು ಮೇ 22 ಅಥವಾ 23ರ ವೇಳೆಗೆ 10 ದಿನಗಳ ಕಾಲ ಪ್ರಯಾಣಿಸಲಿವೆ. ಸಂಸದರ ಜೊತೆ ವಿದೇಶಾಂಗ ಇಲಾಖೆಯ ಅಧಿಕಾರಿಗಳು ಪ್ರಯಾಣಿಸಿ ವಿಶ್ವದ ಮುಂದೆ ಪಾಕ್‌ನ ಮುಖವಾಡವನ್ನು ಕಳಚಲಿದ್ದಾರೆ. ಇದನ್ನೂ ಓದಿ: ಪಾಕ್‌ ಪ್ರಧಾನಿ ನಿದ್ದೆಗೆಡಿಸಿದ ʻಆಪರೇಷನ್‌ ಸಿಂಧೂರʼ – ಶೆಹಬಾಜ್‌ಗೆ ಮಧ್ಯರಾತ್ರಿ ಕರೆ ಮಾಡಿದ್ಯಾರು?


ಸರ್ವಪಕ್ಷ ಸಂಸದರ ನಿಯೋಗದಲ್ಲಿ ಯಾರಿದ್ದಾರೆ?
ತಂಡ 1 : ಶಶಿ ತರೂರ್, ಕಾಂಗ್ರೆಸ್
ತಂಡ 2 : ರವಿಶಂಕರ್ ಪ್ರಸಾದ್, ಬಿಜೆಪಿ
ತಂಡ 3 : ಸಂಜಯ್ ಕುಮಾರ್ ಝಾ, ಜೆಡಿಯು
ತಂಡ 4 : ಬೈಜಯಂತ್ ಪಾಂಡಾ, ಬಿಜೆಪಿ
ತಂಡ 5 : ಕನಿಮೋಳಿ ಕರುಣಾನಿಧಿ, ಡಿಎಂಕೆ
ತಂಡ 6 : ಸುಪ್ರಿಯಾ ಸುಳೆ, ಎನ್‌ಸಿಪಿ
ತಂಡ 7 : ಶ್ರೀಕಾಂತ್ ಏಕನಾಥ್ ಶಿಂಧೆ, ಶಿವಸೇನೆ

 

ರವಿಶಂಕರ್ ಪ್ರಸಾದ್ ನೇತೃತ್ವದ ನಿಯೋಗವು ಸೌದಿ ಅರೇಬಿಯಾ, ಕುವೈತ್, ಬಹರೇನ್‌ ಮತ್ತು ಅಲ್ಜೀರಿಯಾಕ್ಕೆ ಭೇಟಿ ನೀಡುವ ನಿರೀಕ್ಷೆಯಿದ್ದರೆ, ಸುಪ್ರಿಯಾ ಸುಳೆ ಅವರ ತಂಡ ಓಮನ್, ಕೀನ್ಯಾ, ದಕ್ಷಿಣ ಆಫ್ರಿಕಾ ಮತ್ತು ಈಜಿಪ್ಟ್‌ಗೆ ಪ್ರಯಾಣಿಸಲಿದೆ. ಇದನ್ನೂ ಓದಿ: ಪಾಕ್‌, ಉಗ್ರರ ಮೇಲೆ ಕಣ್ಣು – ನಾಳೆ ಭಾರತದ ಬೇಹುಗಾರಿಕಾ ಉಪಗ್ರಹ ಉಡಾವಣೆ!

ಸಂಜಯ್ ಝಾ ನೇತೃತ್ವದ ನಿಯೋಗವು ಜಪಾನ್, ಸಿಂಗಾಪುರ, ದಕ್ಷಿಣ ಕೊರಿಯಾ, ಮಲೇಷ್ಯಾ ಮತ್ತು ಇಂಡೋನೇಷ್ಯಾಕ್ಕೆ ಭೇಟಿ ನೀಡಲಿದೆ. ಆರರಿಂದ ಏಳು ಸಂಸದರನ್ನು ಒಳಗೊಂಡಿರುವ ಪ್ರತಿಯೊಂದು ನಿಯೋಗವು ಸುಮಾರು ನಾಲ್ಕರಿಂದ ಐದು ದೇಶಗಳಿಗೆ ಭೇಟಿ ನೀಡುವ ನಿರೀಕ್ಷೆಯಿದೆ.

ಈ ನಿಯೋಗದ ಸದಸ್ಯರಲ್ಲಿ ಅನುರಾಗ್ ಠಾಕೂರ್, ಅಪರಾಜಿತ ಸಾರಂಗಿ, ಮನೀಶ್ ತಿವಾರಿ, ಅಸಾದುದ್ದೀನ್ ಓವೈಸಿ, ಅಮರ್ ಸಿಂಗ್, ರಾಜೀವ್ ಪ್ರತಾಪ್ ರೂಡಿ, ಸಮಿಕ್ ಭಟ್ಟಾಚಾರ್ಯ, ಬ್ರಿಜ್ ಲಾಲ್, ಸರ್ಫರಾಜ್ ಅಹ್ಮದ್, ಪ್ರಿಯಾಂಕಾ ಚತುರ್ವೇದಿ, ವಿಕ್ರಮಜಿತ್ ಸಾಹ್ನಿ, ಸಸ್ಮಿತ್ ಪಾತ್ರ ಮತ್ತು ಭುವನೇಶ್ವರ ಕಲಿತಾ ಮುಂತಾದ ಸಂಸದರು ಭಾಗಿಯಾಗಲಿದ್ದಾರೆ.

ಮಾಜಿ ಕೇಂದ್ರ ಸಚಿವ ಮತ್ತು ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್, ಸಂಸದರಲ್ಲದಿದ್ದರೂ, ಝಾ ನೇತೃತ್ವದ ನಿಯೋಗದಲ್ಲಿ ಸೇರಿದ್ದಾರೆ. ಸರ್ಕಾರವು ತೃಣಮೂಲ ಕಾಂಗ್ರೆಸ್ ಸಂಸದ ಸುದೀಪ್ ಬಂಡೋಪಾಧ್ಯಾಯ ಅವರನ್ನು ಸಹ ಈ ಕಾರ್ಯಕ್ರಮಕ್ಕೆ ಆಹ್ವಾನಿಸಿತ್ತು ಆದರೆ ಆರೋಗ್ಯ ಕಾರಣಗಳಿಂದ ಹಿಂದೆ ಸರಿದಿದ್ದಾರೆ. ಒಟ್ಟು 45 ಸಂಸದರು ವಿದೇಶಗಳಿಗೆ ಭೇಟಿ ನೀಡಿ ಪಾಕ್‌ ವಿರುದ್ಧ ಮಾತನಾಡಲಿದ್ದಾರೆ.

Share This Article