ಮುಂಬೈ: ತೈಲ ಹಾಗೂ ನೈಸರ್ಗಿಕ ಅನಿಲ ನಿಗಮದ(ಒಎನ್‌ಜಿಸಿ) ಹೆಲಿಕಾಪ್ಟರ್ ಮಂಗಳವಾರ ಅರಬ್ಬೀ ಸಮುದ್ರದ ತೈಲ ರಿಂಗ್ ಬಳಿ ತುರ್ತು ಲ್ಯಾಂಡಿಂಗ್ ಮಾಡಿದೆ. ಹೆಲಿಕಾಪ್ಟರ್‌ನಲ್ಲಿ 9 ಜನರಿದ್ದು ಸದ್ಯ ಎಲ್ಲರನ್ನು ರಕ್ಷಿಸಲಾಗಿದೆ ಎಂದು ಒಎನ್‌ಜಿಸಿ ತಿಳಿಸಿದೆ.
ಹೆಲಿಕಾಪ್ಟರ್ ಇಂದು ಬೆಳಗ್ಗೆ 11:50ರ ವೇಳೆ ಮುಂಬೈಯಿಂದ ಪಶ್ಚಿಮಕ್ಕೆ 60 ಮೈಲುಗಳಷ್ಟು ದೂರದಲ್ಲಿ ಒಎನ್‌ಜಿಸಿಯ ಸಾಗರ್ ಕಿರಣ್ ಆಫ್‌ಶೋರ್ ರಿಂಗ್ ಬಳಿ ತುರ್ತು ಭೂಸ್ಪರ್ಶ ಮಾಡಿದೆ. ಹೆಲಿಕಾಪ್ಟರ್‌ನಲ್ಲಿ 7 ಪ್ರಯಾಣಿಕರು ಹಾಗೂ ಇಬ್ಬರು ಪೈಲಟ್‌ಗಳು ಇದ್ದರು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಪಾಕಿಸ್ತಾನದ ರಾಯಭಾರಿ ಕಚೇರಿಗಳ ಟ್ವಿಟ್ಟರ್ ಖಾತೆಗಳನ್ನು ನಿಷೇಧಿಸಿದ ಭಾರತ
Advertisement
Advertisement
ಹೆಲಿಕಾಪ್ಟರ್ ತುರ್ತು ಭೂಸ್ಪರ್ಶದ ಬಳಿಕ ಮಾಲ್ವಿಯಾ 16 ಸರಬರಾಜು ಹಡಗನ್ನು ರಕ್ಷಣಾ ಕಾರ್ಯಾಚರಣೆಗೆ ಕಳುಹಿಸಲಾಗಿದೆ. ಸದ್ಯ ಎಲ್ಲರೂ ಪ್ರಾನಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಹಾಂಕಾಂಗ್ ತೇಲುವ ಜಂಬೋ ರೆಸ್ಟೋರೆಂಟ್ ಮಗುಚಿದೆ, ಮುಳುಗಿಲ್ಲ: ಸ್ಪಷ್ಟನೆ ಕೊಟ್ಟ ಮಾಲೀಕ