ನವದೆಹಲಿ: ಟೀ ಇಂಡಿಯಾದ (Team India) ಆಲ್‌ರೌಂಡರ್ ಆಟಗಾರ ಹಾರ್ದಿಕ್ ಪಾಂಡ್ಯ (Hardik Pandya) ವಿರಾಟ್ ಕೊಹ್ಲಿ ಹೆಸರಿನಲ್ಲಿದ ಸೋಶಿಯಲ್ ಮೀಡಿಯಾ (Social Media) ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಅತಿ ಕಡಿಮೆ ಅವಧಿಯಲ್ಲಿ 10 ಲಕ್ಷ ಲೈಕ್ ಪಡೆದ ಆಟಗಾರ ಎಂಬ ಹೆಗ್ಗಳಿಕೆಗೆ ಪಾಂಡ್ಯ ಪಾತ್ರವಾಗಿದ್ದಾರೆ.
HARDIK PANDYA – THE FASTEST INDIAN TO HIT 1M LIKE ON INSTRAGRAM. 🤯
– 1M Like In just 6 minutes….!!!! 🔥 pic.twitter.com/llCQGK8XJ4
— Mufaddal Vohra (@mufaddal_vohra) March 12, 2025
ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು (ICC Champions Trophy) ಗೆದ್ದ ಬಳಿಕ ಪಾಂಡ್ಯ ಕ್ರಿಕೆಟ್ ಪಿಚ್‌ನಲ್ಲಿ ಟ್ರೋಫಿಯನ್ನು ಇರಿಸಿ ಪೋಸ್ ನೀಡಿದ್ದರು. ಈ ಫೋಟೋಗೆ ಕೇವಲ 6 ನಿಮಿಷದಲ್ಲೇ 10 ಲಕ್ಷ ಜನ ಲೈಕ್ ಮಾಡಿದ್ದರು. ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ ಗೆದ್ದ ಬಳಿಕ ಮೊಹಮ್ಮದ್ ಶಮಿ ತಾಯಿಯ ಕಾಲು ಮುಟ್ಟಿ ಆಶೀರ್ವಾದ ಪಡೆದ ಕೊಹ್ಲಿ
ಈ ಹಿಂದೆ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ ಗೆದ್ದ ಬಳಿಕ ಅಪ್ಲೋಡ್ ಮಾಡಿದ ಫೋಟೋಗೆ 7 ನಿಮಿಷದಲ್ಲಿ 10 ಲಕ್ಷ ಲೈಕ್ ಸಿಕ್ಕಿತ್ತು.
The best thing about time is, it changes 🇮🇳 pic.twitter.com/vHvSvG74qu
— hardik pandya (@hardikpandya7) March 10, 2025
ಇನ್‌ಸ್ಟಾಗ್ರಾಮ್‌ನಲ್ಲಿ ವಿರಾಟ್ ಕೊಹ್ಲಿ ಅವರನ್ನು 27 ಕೋಟಿ ಮಂದಿ ಫಾಲೋ ಮಾಡುತ್ತಿದ್ದರೆ ಹಾರ್ದಿಕ್ ಪಾಂಡ್ಯ ಅವರನ್ನು 3.9 ಕೋಟಿ ಮಂದಿ ಫಾಲೋ ಮಾಡುತ್ತಿದ್ದಾರೆ.