ಇಂಪಾಲ: ಮಣಿಪುರದ (Manipur) ಸೆರೌ ಪ್ರದೇಶದಲ್ಲಿ ಮಂಗಳವಾರ ಮುಂಜಾನೆ ಕುಕಿ ದಂಗೆಕೋರರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ (Encounter) ಗಡಿ ಭದ್ರತಾ ಪಡೆ (BSF) ಯೋಧರೊಬ್ಬರು ಹುತಾತ್ಮರಾಗಿದ್ದು, ಇಬ್ಬರು ಅಸ್ಸಾಂ ರೈಫಲ್ಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಕಾಕ್ಚಿಂಗ್ (Kakching) ಜಿಲ್ಲೆಯ ಸುಗ್ನುವಿನ ಸೆರೌ (Serou) ಪ್ರದೇಶದ ಶಾಲೆಯೊಂದರಲ್ಲಿ ದಂಗೆಕೋರರು ಮತ್ತು ಭದ್ರತಾ ಪಡೆಯ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಕಾನ್‌ಸ್ಟೇಬಲ್ ರಂಜಿತ್ ಯಾದವ್ ಎಂಬ ಯೋಧನಿಗೆ ಗುಂಡು ತಗುಲಿತ್ತು. ತಕ್ಷಣ ಅವರನ್ನು ಕಾಕ್ಚಿಂಗ್ ಜೀವನ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಸ್ಪತ್ರೆಯಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದರು. ಇದನ್ನೂ ಓದಿ: ಅಮರನಾಥ ಯಾತ್ರೆಗೆ ಭಯೋತ್ಪಾದಕರ ಭೀತಿ- ಭದ್ರತಾ ಪಡೆಗಳೇ ಟಾರ್ಗೆಟ್
Advertisement
Advertisement
ಮಂಗಳವಾರ ಮುಂಜಾನೆ 4:15ರ ಸುಮಾರಿಗೆ ಸೆರೌ ಪ್ರಾಕ್ಟಿಕಲ್ ಹೈಸ್ಕೂಲ್‌ನಲ್ಲಿ ನಿಯೋಜಿಸಲಾಗಿದ್ದ ಬಿಎಸ್‌ಎಫ್ ಪಡೆಗಳನ್ನು ಗುರಿಯಾಗಿಸಿಕೊಂಡು ಕುಕಿ ದಂಗೆಕೋರರು (Kuki Miscreants) ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಅಲ್ಲದೇ ಗಾಯಗೊಂಡಿರುವ ಇಬ್ಬರು ಅಸ್ಸಾಂ ರೈಫಲ್ಸ್ ಸಿಬ್ಬಂದಿಯನ್ನು ಮಂತ್ರಿಪುಖ್ರಿಗೆ ವಾಯು ಸ್ಥಳಾಂತರಿಸಲಾಗಿದೆ. ಶೋಧ ಕಾರ್ಯಾಚರಣೆಗಳು ಪ್ರಗತಿಯಲ್ಲಿವೆ ಎಂದು ದಿಮಾಪುರದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಭಾರತೀಯ ಸೇನೆಯ ಸ್ಪಿಯರ್‌ಕಾರ್ಪ್ಸ್ ಟ್ವಿಟ್ಟರ್‌ನಲ್ಲಿ ಹೇಳಿದೆ. ಇದನ್ನೂ ಓದಿ: ಬಾಲಸೋರ್ ರೈಲು ಅಪಘಾತ – ತನಿಖೆ ಆರಂಭಿಸಿದ ಸಿಬಿಐ
Advertisement
ಸರ್ಕಾರದೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಯುನೈಟೆಡ್ ಕುಕಿ ಲಿಬರೇಶನ್ ಫ್ರಂಟ್ (UKLF) ದಂಗೆಕೋರರು ಮಣಿಪುರದ ಕಕ್ಚಿಂಗ್ ಜಿಲ್ಲೆಯ ಸುಗ್ನು ಎಂಬಲ್ಲಿ ತಂಗಿದ್ದರು. ಶನಿವಾರ ಮಧ್ಯರಾತ್ರಿ ಸೆರೌನಲ್ಲಿ ಕಾಂಗ್ರೆಸ್ ಶಾಸಕ ರಂಜಿತ್ ಮನೆ ಸೇರಿದಂತೆ 100ಕ್ಕೂ ಹೆಚ್ಚು ಮನೆಗಳನ್ನು ದಂಗೆಕೋರರು ಸುಟ್ಟುಹಾಕಿದ್ದರು. ಈ ಘಟನೆಯ ಬಳಿಕ ದಂಗೆಕೋರರು ತಂಗಿದ್ದ ಶಿಬಿರಕ್ಕೆ ಗ್ರಾಮಸ್ಥರು ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಇದನ್ನೂ ಓದಿ: ಸತ್ತಿದ್ದಾನೆಂದು ಹೆಣಗಳ ರಾಶಿಯಲ್ಲಿ ಇಟ್ಟಿದ್ದ ಮಗನನ್ನು ಜೀವಂತವಾಗಿ ಹೊರ ತೆಗೆದ ತಂದೆ!
Advertisement
ಮಣಿಪುರ ರಾಜಧಾನಿ ಇಂಪಾಲ್‌ನಲ್ಲಿ ಭಾರತೀಯ ಸಂವಿಧಾನದಡಿಯಲ್ಲಿ ಮೀಟಿ ಸಮುದಾಯವನ್ನು ಪರಿಶಿಷ್ಟ ಪಂಗಡಗಳಲ್ಲಿ ಸೇರಿಸುವ ಕುರಿತು ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಮೇ 3ರಂದು ಹಿಂಸಾತ್ಮಕ ಘರ್ಷಣೆಗಳು ಭುಗಿಲೆದ್ದಿದ್ದವು. ಇದನ್ನೂ ಓದಿ: ಒಡಿಶಾ ರೈಲು ದುರಂತವಾಗಿ 4 ದಿನ ಕಳೆದರೂ 101 ಮೃತದೇಹಗಳ ಗುರುತು ಇನ್ನೂ ಪತ್ತೆಯಾಗಿಲ್ಲ