Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಜನರ ಮನಸ್ಸಿನಲ್ಲಿ ಒಂದು ಕಡೆ ರಾಮ ಇದ್ರೆ ಮತ್ತೊಂದೆಡೆ ಮೋದಿ ಇದ್ದಾರೆ: ಈಶ್ವರಪ್ಪ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಜನರ ಮನಸ್ಸಿನಲ್ಲಿ ಒಂದು ಕಡೆ ರಾಮ ಇದ್ರೆ ಮತ್ತೊಂದೆಡೆ ಮೋದಿ ಇದ್ದಾರೆ: ಈಶ್ವರಪ್ಪ

Districts

ಜನರ ಮನಸ್ಸಿನಲ್ಲಿ ಒಂದು ಕಡೆ ರಾಮ ಇದ್ರೆ ಮತ್ತೊಂದೆಡೆ ಮೋದಿ ಇದ್ದಾರೆ: ಈಶ್ವರಪ್ಪ

Public TV
Last updated: February 2, 2024 11:54 am
Public TV
Share
3 Min Read
KS Eshwarappa
SHARE

ಶಿವಮೊಗ್ಗ: ದೇಶದ ಜನರ ಮನಸ್ಸಿನಲ್ಲಿ ಒಂದು ಕಡೆ ರಾಮ ಇದ್ದರೆ ಮತ್ತೊಂದು ಕಡೆ ಮೋದಿ (Narendra Modi)  ಇದ್ದಾರೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (K. S. Eshwarappa)  ಹೇಳಿದ್ದಾರೆ.

ಗುರುವಾರ ನಡೆದ ಮಧ್ಯಂತರ ಬಜೆಟ್ (Budget) ಕುರಿತು ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಜೆಟ್ ಅನ್ನು ಸಂತೋಷದಿಂದ ಸ್ವಾಗತ ಮಾಡುತ್ತೇನೆ. ಜನಸಾಮಾನ್ಯರಿಗೆ ಬೇಕಾದ ಮೂಲಸೌಕರ್ಯ ಕೊಟ್ಟಿದ್ದಾರೆ. ನಮ್ಮ ರಾಜ್ಯ ಇಡೀ ದೇಶಕ್ಕೆ ಹಾಗೂ ಪ್ರವಾಸೋದ್ಯಮಕ್ಕೆ ಹೆಸರುವಾಸಿ. ಪ್ರವಾಸೋದ್ಯಮಕ್ಕೆ ಬಡ್ಡಿ ರಹಿತ ಸಾಲ ಕೊಡುತ್ತಿದೆ. ಕಾಂಗ್ರೆಸ್ ಪಕ್ಷ ಹಿಂದೂಸ್ತಾನ, ಪಾಕಿಸ್ತಾನ ಒಡೆದು ಅಧಿಕಾರ ಪಡೆಯಲು ದೇಶ ಒಡೆದರು. ಪಾಕಿಸ್ತಾನದಲ್ಲಿ ಈ ವ್ಯವಸ್ಥೆ ಇದೆ. ನಮ್ಮ ದೇಶದ ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರು ಅಣ್ಣ-ತಮ್ಮಂದಿರ ರೀತಿ ಇದ್ದೇವೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ನಮ್ಮ ಭವ್ಯ ಭಾರತವನ್ನು ಒಡೆಯುವ ಮಾತು ಯಾರೂ ಆಡಬಾರದು: ಪರಮೇಶ್ವರ್ ತಿರುಗೇಟು

ಸಂಸದ ಡಿ.ಕೆ.ಸುರೇಶ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ದೇಶ ಒಡೆದು ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಜಿನ್ನಾ ಸಂಸ್ಕೃತಿಯನ್ನು ಸಂಸದ ಡಿ.ಕೆ.ಸುರೇಶ್ ಮಾತನಾಡಿದ್ದಾರೆ. ಡಿಕೆಶಿ ಇದನ್ನು ಸ್ವಾಗತ ಮಾಡಿದ್ದಾರೆ. ಎಲ್ಲಾ ಕಾಂಗ್ರೆಸ್‌ನವರು ಇದನ್ನು ಒಪ್ಪಿಲ್ಲ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಒಪ್ಪಿಲ್ಲ. ಸಿದ್ದರಾಮಯ್ಯ ಹೇಳಿಕೆಯನ್ನು ಸ್ವಾಗತ ಮಾಡುತ್ತೇನೆ. ಇನ್ನೂ ಪೂರ್ಣ ಸ್ವಾತಂತ್ರ್ಯ ಬಂದಿಲ್ಲ ಎನ್ನುವ ನೋವಲ್ಲಿ ಇದ್ದಾರೆ. ಕಾಂಗ್ರೆಸ್‌ನ ಎಐಸಿಸಿ ಅಧ್ಯಕ್ಷರ ಅಭಿಪ್ರಾಯ ಏನು?. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅಭಿಪ್ರಾಯ ಏನು?. ಈ ಹೇಳಿಕೆಯನ್ನು ದೇಶದ ಮುಂದೆ ಇಡಬೇಕು. ನಮ್ಮ ರಾಜ್ಯಕ್ಕೆ ಏನೇನು ಸೌಲಭ್ಯ ಕೊಡಬೇಕೋ ಅದನ್ನು ಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸ್ಕೂಟರ್‌ಗೆ ಬಿಎಂಟಿಸಿ ಬಸ್ ಡಿಕ್ಕಿ – ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು

ದೇಶದ ಮುಂದೆ ನಾನು ಒಬ್ಬ ದೊಡ್ಡ ರಾಜಕಾರಣಿ ಅಂತಾ ತೋರಿಸಲು ಅಣ್ಣ-ತಮ್ಮ ಮಾತನಾಡಿದ್ದಾರೆ. ತನ್ನ ವೈಯಕ್ತಿಕ ಅಸ್ತಿತ್ವ ತೋರಿಸಲು ಸುರೇಶ್ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಯಾರು ಏನು ಬೇಕಾದರೂ ಮಾತನಾಡಬಹುದು ಅದು ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ಪಕ್ಷದಲ್ಲಿ 40% ಅಂತಾ ಶಿವರಾಂ ಹೇಳಿದ್ದಾರೆ. ಕೆಂಪಣ್ಣ ಏನು ಮಾಡ್ತಿದ್ದಾರೆ. ಈಗ ಕಣ್ಣು ಮುಚ್ಚಿಕೊಂಡು ಕುಳಿತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕೆಂಪಣ್ಣನು ಒಬ್ಬ ಕಾರಣ. ನೀವು ಸಂಸದರು ಇದ್ದೀರಾ. ಬಜೆಟ್ ಚರ್ಚೆ ನಡೆಯುತ್ತದೆ ಅಲ್ಲಿ ಮಾತನಾಡಿ. ರಸ್ತೆಯಲ್ಲಿ ಹೋಗುವ ದಾಸಯ್ಯನ ರೀತಿ ಮಾತನಾಡಿದ್ರೆ? ಹಾಗಾದ್ರೆ ಮೊದಲು ನಿಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಿ. ಇಡೀ ದೇಶದಲ್ಲಿ ನಾನು ಒಬ್ಬ ಸಂಸದ ಬದುಕಿದ್ದೀನಿ ಅಂತಾ ತೋರಿಸಲು ಮಾತನಾಡಿದ್ದಾರೆ ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: 6 ವರ್ಷ ಪ್ರೀತಿ, ಮದುವೆ, ಮಗು ಕೊಟ್ಟು ಕೈಬಿಟ್ಟ- ಮತ್ತೊಂದು ಮದುವೆಯಾದ ಭೂಪ

ಸಿಎಂ ಸಿದ್ದರಾಮಯ್ಯ ಶ್ವೇತಪತ್ರ ಹೊರಡಿಸುವ ಬಗ್ಗೆ ಪ್ರತಿಕ್ರಿಯಿಸಿ, ಸಿಎಂ ಶ್ವೇತಪತ್ರ ಹೊರಡಿಸುತ್ತೇನೆ ಅಂದಿದ್ದಾರೆ ಅದು ಸುಳ್ಳು. ಸಿಎಂ ಸಿದ್ದರಾಮಯ್ಯ ಶ್ವೇತಪತ್ರ ಹೊರಡಿಸಿದರೆ ಅವರು ಬೆತ್ತಲೆ ಆಗುತ್ತಾರೆ. ಹಿಂದುಳಿದ ವರ್ಗದ ಆಯೋಗದ ವರದಿ ಬಿಡುಗಡೆ ಮಾಡ್ತೀನಿ ಅಂತಾ 9 ವರ್ಷದಿಂದ ಹೇಳ್ತಿದ್ದಾರೆ. ಕಾಂಗ್ರೆಸ್‌ನವರು ದೇಶ ಛಿದ್ರ ಮಾಡಲಿಲ್ಲ, ಸಮಾಜವನ್ನು ಛಿದ್ರ ಛಿದ್ರ ಮಾಡಿದರು. ಸುಳ್ಳು ಹೇಳುವುದರಲ್ಲಿ ಸಿದ್ದರಾಮಯ್ಯ ಅವರಿಗೆ ನೋಬೆಲ್ ಕೊಡಬೇಕು. ಲೋಕಸಭಾ ಚುನಾವಣೆ ನಂತರ ಈ ಸರ್ಕಾರ ಇರಲ್ಲ, ಗ್ಯಾರಂಟಿ ಯೋಜನೆಯೂ ಇರಲ್ಲ. ಆಕಸ್ಮಾತ್ ಉಳಿದರೆ ಗ್ಯಾರಂಟಿ ಉಳಿಸಿಕೊಳ್ಳಲ್ಲ. ಈ ಸರ್ಕಾರ ಪಾಪರ್ ಎದ್ದು ಹೋಗಿದೆ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಚಿಕ್ಕಪ್ಪನಿಂದಲೇ 11 ವರ್ಷದ ಬಾಲಕಿಯ ಶಿರಚ್ಛೇದ – ಪಶ್ಚಿಮ ಬಂಗಾಳದಲ್ಲಿ ಪರಿಸ್ಥಿತಿ ಉದ್ವಿಗ್ನ

ಕಾಂತೇಶ್ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಮಾತನಾಡಿ, ಕಾಂತೇಶ್ ಹಾವೇರಿಯಲ್ಲಿ ಸ್ಪರ್ಧೆ ಮಾಡಬೇಕು ಎಂಬುದು ಕಾರ್ಯಕರ್ತರು ಮತ್ತು ಹಿರಿಯರ ಅಪೇಕ್ಷೆ. ಟಿಕೆಟ್ ಸಿಕ್ಕರೆ ಸ್ಪರ್ಧೆ ಮಾಡುತ್ತಾರೆ. ಗೆಲುವು ನಿಶ್ಚಿತ. ಯಾರೇ ಸ್ಪರ್ಧೆ ಮಾಡಿದರೂ ಗೆಲ್ಲಿಸುತ್ತೇವೆ ಎಂಬುದು ನಾಯಕರ ಅಭಿಪ್ರಾಯ. ಇಡೀ ದೇಶದ ಜನರ ಮನಸಿನಲ್ಲಿ ಒಂದು ಕಡೆ ರಾಮ ಇದ್ದರೆ ಮತ್ತೊಂದು ಕಡೆ ಮೋದಿ ಇದ್ದಾರೆ. ಸರ್ವಾಧಿಕಾರಿ ಇಂದಿರಾಗಾಂಧಿ ಅವರಾ, ನರೇಂದ್ರ ಮೋದಿ ಅವರಾ ಎನ್ನುವುದನ್ನು ಖರ್ಗೆ ತೀರ್ಮಾನ ಮಾಡಲಿ. ಏನೋ ಟೀಕೆ ಮಾಡಬೇಕು, ಟೀಕೆ ಮಾಡ್ತಾರೆ. ಅಧಿಕೃತ ವಿಪಕ್ಷದ ನಾಯಕ ಆಗಲೂ ಸಹ ಅವರಿಂದ ಆಗಲಿಲ್ಲ. ಕಳೆದ ಬಾರಿ ಲೋಕಸಭೆ ಚುನಾವಣೆ ಇದ್ದಾಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಸಿದ್ದರಾಮಯ್ಯ ಸಿಎಂ ಆಗಿದ್ದರು. ಬಿಜೆಪಿ ಒಂದು ಸ್ಥಾನ ಗೆಲ್ಲುವುದಿಲ್ಲ ಅಂತಿದ್ದರು. 26 ಸ್ಥಾನ ಗೆದ್ದೆವು. ಈ ಬಾರಿ 28 ಕ್ಕೆ 28 ಗೆಲ್ಲುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚಿಕ್ಕಪ್ಪನಿಂದಲೇ 11 ವರ್ಷದ ಬಾಲಕಿಯ ಶಿರಚ್ಛೇದ – ಪಶ್ಚಿಮ ಬಂಗಾಳದಲ್ಲಿ ಪರಿಸ್ಥಿತಿ ಉದ್ವಿಗ್ನ

TAGGED:bjpcongressd k shivakumarD.K.Sureshk s eshwarappanarendra modishivamoggaಕಾಂಗ್ರೆಸ್ಕೆ.ಎಸ್.ಈಶ್ವರಪ್ಪಡಿ.ಕೆ.ಸುರೇಶ್ನರೇಂದ್ರ ಮೋದಿಬಜೆಟ್ಬಿಜೆಪಿಶಿವಮೊಗ್ಗಸಿದ್ದರಾಮಯ್ಯ
Share This Article
Facebook Whatsapp Whatsapp Telegram

Cinema news

Vijay Deverakonda Rashmika Mandanna
ಮದ್ವೆ ಬಳಿಕ ಬಳಿಕ ಒಟ್ಟಿಗೆ ಶೂಟಿಂಗ್‌ಗೆ ತೆರಳಿದ ವಿರೋಶ್ ಜೋಡಿಗೆ ಅದ್ಧೂರಿ ಸ್ವಾಗತ
Cinema Latest Sandalwood South cinema Top Stories
Amita Singh Tomar
ಕೌನ್ ಬನೇಗಾ ಕರೋಡ್ ಪತಿಯಲ್ಲಿ 50 ಲಕ್ಷ ಗೆದ್ದಿದ್ದ ತಹಶೀಲ್ದಾರ್ ಅರೆಸ್ಟ್‌!
Cinema Crime Latest National Top Stories TV Shows
Dhurandhar 2 2
ಒಂದೇ ವಾರದಲ್ಲಿ 1000 ಕೋಟಿ ಕ್ಲಬ್ ಸೇರಿದ `ಧುರಂಧರ್ 2′
Bollywood Cinema Latest Top Stories
Rashmika Vijay 5
ಹನಿಮೂನ್ ಅಲ್ಲ ಬಡ್ಡೀಮೂನ್ – ರಶ್ಮಿಕಾ, ವಿಜಯ್ ಹೊಸ ಟ್ರೆಂಡ್
Cinema Latest South cinema Top Stories

You Might Also Like

container ship
Latest

ಈಗ ಚೀನಾ ಹಡಗುಗಳಿಗೂ ಶಾಕ್‌ – ಅನುಮತಿ ನೀಡದ ಇರಾನ್‌

Public TV
By Public TV
7 hours ago
davanagere south by election local youth express anger against sadiq pailwan
Davanagere

ಕಾಂಗ್ರೆಸ್ ಜೊತೆ ಪೈಲ್ವಾನ್‌ಗೂ ಮಣ್ಣು ಮುಕ್ಕಿಸುತ್ತೇವೆ – ಬೀದಿಗಿಳಿದು ಆಕ್ರೋಶ ಹೊರಹಾಕಿದ ಮುಸ್ಲಿಂ ಯುವಕರು

Public TV
By Public TV
8 hours ago
PM Modi virtual meeting chief ministers and lieutenant governors
Latest

ಕೋವಿಡ್‌ ರೀತಿ ರಾಜ್ಯ, ಕೇಂದ್ರ ಒಗ್ಗಟ್ಟಾಗಿ ಇಂಧನ ಬಿಕ್ಕಟ್ಟನ್ನು ಎದುರಿಸೋಣ: ಮೋದಿ ಕರೆ

Public TV
By Public TV
8 hours ago
karwar demand for firewood increases due to cylinder shortage forest department grants permission to cut 3 lakh trees
Latest

ಸಿಲಿಂಡರ್ ಅಭಾವದಿಂದ ಕಟ್ಟಿಗೆಗೆ ಹೆಚ್ಚಿದ ಬೇಡಿಕೆ – ಅರಣ್ಯ ಇಲಾಖೆಯಿಂದ 3ಲಕ್ಷ ಮರಗಳ ಕಟಾವಿಗೆ ಅನುಮತಿ

Public TV
By Public TV
8 hours ago
man killed pet dog in honnali
Crime

ಸಾಕು ನಾಯಿ ಬೊಗಳಿದ್ದಕ್ಕೆ ಕುಡುಗೋಲಲ್ಲಿ ಕೊಚ್ಚಿ ಕೊಂದ ಪಾಪಿ

Public TV
By Public TV
9 hours ago
Basangouda Patil Yatnal
Kolar

ಐಪಿಎಲ್‌ ಟಿಕೆಟ್‌ ಬೇಕೆನ್ನುವ ಶಾಸಕರಿಗೆ ನಾಚಿಕೆಯಾಗಬೇಕು: ಯತ್ನಾಳ್‌ ಕಿಡಿ

Public TV
By Public TV
9 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?