ಬೀಜಿಂಗ್: ಐದನೇ ಮಹಡಿಯ ಫ್ಲಾಟ್ ಕಿಟಕಿಯಿಂದ ಕೆಳಗೆ ಬೀಳುತ್ತಿದ್ದ ಎರಡು ವರ್ಷದ ಮಗುವನ್ನು ಹಿಡಿದಿದ್ದಕ್ಕೆ ಚೀನಾದ ವ್ಯಕ್ತಿಯನ್ನು ಸೋಶಿಯಲ್ ಮೀಡಿಯಾದಲ್ಲಿ ‘ಹೀರೋ’ ಎಂದು ಪ್ರಶಂಸಿಸಲಾಗುತ್ತಿದೆ.
Advertisement
ಝೆಜಿಯಾಂಗ್ ಪ್ರಾಂತ್ಯದ ಟೊಂಗ್ ಕ್ಸಿಯಾಂಗ್‍ನಲ್ಲಿ ಈ ಘಟನೆ ನಡೆದಿದೆ. ಈ ವೀರೋಚಿತ ದೃಶ್ಯಗಳನ್ನು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ‘ನಮ್ಮ ಹೀರೋಗಳು’ ಎಂದು ಸರ್ಕಾರಿ ಅಧಿಕಾರಿ ಕಿರು ಕ್ಲಿಪ್ ಶೇರ್ ಮಾಡಿಕೊಳ್ಳುವಾಗ ಬರೆದುಕೊಂಡಿದ್ದಾರೆ.
Advertisement
Heroes among us. pic.twitter.com/PumEDocVvC
— Lijian Zhao 赵立坚 (@zlj517) July 22, 2022
Advertisement
ವೀಡಿಯೋದಲ್ಲಿ ಏನಿದೆ?
ವ್ಯಕ್ತಿಯೊಬ್ಬ ಫೋನ್‍ನಲ್ಲಿ ಮಾತನಾಡುತ್ತಾ ಮಹಿಳೆಯೊಂದಿಗೆ ಬರುತ್ತಿರುತ್ತಾನೆ. ಈ ವೇಳೆ ಕಟ್ಟಡದ ಕಡೆಗೆ ನೋಡಿದಾಗ ಮಗುವೊಂದು ಬೀಳುತ್ತಿರುವುದು ತಿಳಿದುಬರುತ್ತೆ. ಅದಕ್ಕೆ ಕಟ್ಟಡದ ಬಳಿ ಆತ ಮತ್ತು ಮಹಿಳೆ ಓಡಿ ಬರುತ್ತಾರೆ. ತನ್ನ ಫೋನ್ ಕೆಳಗೆ ಎಸೆದು ಮಗುವನ್ನು ಹಿಡಿಯಲು ತನ್ನ ಕೈಗಳನ್ನು ಮೇಲಕ್ಕೆ ಚಾಚುತ್ತಾನೆ. ಮಗುವನ್ನು ಹಿಡಿದುಕೊಳ್ಳಲು ಯಶಸ್ವಿಯಾಗುತ್ತಾನೆ. ಇದನ್ನೂ ಓದಿ: ಮೂರಂತಸ್ತಿನ ಕಟ್ಟಡದಲ್ಲಿ ನೇತಾಡುತ್ತಿದ್ದ ಮಕ್ಕಳ ಮುದ್ದಿನ ಬೆಕ್ಕು – ಯಶಸ್ವಿ ಕಾರ್ಯಾಚರಣೆ
Advertisement
ಪೋಸ್ಟ್ ಮಾಡಿದ ನಂತರ, ವೀಡಿಯೋ 1,39,000ಕ್ಕೂ ಹೆಚ್ಚು ಲೈಕ್ ಮತ್ತು ಕಾಮೆಂಟ್ ಬಂದಿದೆ. ವೀಡಿಯೋ ನೋಡಿದವರು, ನಿಜವಾದ ಹೀರೋಗಳು ಕೇವಲ ಸಿನಿಮಾಗಳಲ್ಲಿ ಅಲ್ಲ ಎಂದು ಬರೆದಿದ್ದಾರೆ. ಲೆಜೆಂಡರಿ ಕ್ಯಾಚ್! ಆ ಇಬ್ಬರಿಗೆ ಪದಕ ಕೊಡಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅವನ ಮನಸ್ಸು ಅದ್ಭುತ, ಅವರು ರಿಯಲ್ ಲೈಫ್ ಹೀರೋ, ರೀಲ್ ಲೈಫ್ ಅಲ್ಲ ಎಂದು ನೆಟ್ಟಿಗರು ಕಾಮೆಂಟ್ ಸುರಿಮಳೆಯನ್ನೆ ಸುರಿಸಿದ್ದಾರೆ.