ನವದೆಹಲಿ: ಕೊರೊನಾ ವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕು ಈಗಾಗಲೇ ಭಾರತದ ಕೆಲವು ರಾಜ್ಯಗಳಲ್ಲಿ ಕಾಣಿಸಿಕೊಂಡಿದ್ದು, ಫೆಬ್ರವರಿ ತಿಂಗಳಿಂದ ಮೂರನೇ ಅಲೆ ಭಾರತದಲ್ಲಿ ಆರಂಭವಾಗುವ ಸಾಧ್ಯತೆ ಇದೆ ಎಂದು ಐಐಟಿ ವಿಜ್ಞಾನಿ ಪ್ರೊ. ಮಣೀಂದ್ರ ಅಗರವಾಲ್ ತಿಳಿಸಿದ್ದಾರೆ.
Advertisement
ಗಣಿತಶಾಸ್ತ್ರೀಯ ಆಧಾರದ ಮೇಲೆ ಅವರು ಈ ಅಂದಾಜು ಮಾಡಿದ್ದಾರೆ. ಹೊಸ ರೂಪಾಂತರಿ ಓಮಿಕ್ರಾನ್ ಫೆಬ್ರವರಿ ತಿಂಗಳ ವೇಳೆಗೆ ದೇಶದಲ್ಲಿ ಮೂರನೇ ಅಲೆ ಪರಿಣಾಮವನ್ನು ನೋಡಬಹುದಾಗಿದೆ. ಆದರೆ ಇದು ಎರಡನೇ ಅಲೆಗಿಂತ ಸೌಮ್ಯವಾಗಿರುತ್ತದೆ. ಓಮಿಕ್ರಾನ್ ತೀವ್ರತೆಯು ಡೆಲ್ಟಾ ರೂಪಾಂತರದಂತೆ ಕಂಡುಬರುವುದಿಲ್ಲ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಕೇರಳದಿಂದ ಬಂದವರ ಮೇಲೆ ತೀವ್ರ ನಿಗಾ: ಮಾಧುಸ್ವಾಮಿ
Advertisement
Advertisement
ಓಮಿಕ್ರಾನ್‌ನ ಹೆಚ್ಚು ಪ್ರಕರಣಗಳು ವರದಿಯಾಗಿರುವ ದಕ್ಷಿಣ ಆಫ್ರಿಕಾದ ಬೆಳವಣಿಗೆಯನ್ನು ನಾವು ಗಮನಿಸಬಹುದು. ಅಲ್ಲಿ ಈವರೆಗೆ ಯಾರೂ ಆಸ್ಪತ್ರೆಗೆ ಸೇರುವಷ್ಟು ಸಮಸ್ಯೆ ಕಂಡುಬಂದಿಲ್ಲ ಎಂದು ಅಗರವಲ್ ವಿವರಿಸಿದ್ದಾರೆ.
Advertisement
ಓಮಿಕ್ರಾನ್ ಕುರಿತ ಅಂಕಿ-ಅಂಶ ಹಾಗೂ ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ಸೇರುವವರ ಸಂಖ್ಯೆಯು ವೈರಸ್ ಹರಡುವಿಕೆಯ ಸ್ಪಷ್ಟ ಚಿತ್ರಣವನ್ನು ನೀಡಲಿದೆ. ಓಮಿಕ್ರಾನ್ ಅತಿ ವೇಗವಾಗಿ ಹರಡುತ್ತದೆ ಎಂದು ಹೇಳಲಾಗಿದ್ದರೂ, ಅದರ ಪರಿಣಾಮ ಅಷ್ಟಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ವಸತಿ ಶಾಲೆಯಲ್ಲಿ ಕೊರೊನಾ ಸ್ಫೋಟ- 93 ವಿದ್ಯಾರ್ಥಿಗಳು ಸೇರಿ 107 ಮಂದಿಗೆ ಪಾಸಿಟಿವ್
ದೇಶದಲ್ಲಿ ಈಗಾಗಲೇ ಕೆಲವು ರಾಜ್ಯಗಳಲ್ಲಿ ಓಮಿಕ್ರಾನ್ ಪ್ರಕರಣಗಳು ದೃಢಪಟ್ಟಿವೆ. ರಾಜಸ್ಥಾನ್‌ನಲ್ಲಿ 9, ಮಹಾರಾಷ್ಟ್ರದಲ್ಲಿ 10, ಕರ್ನಾಟಕದಲ್ಲಿ 2, ಗುಜರಾತ್ ಮತ್ತು ನವದೆಹಲಿಯಲ್ಲಿ ತಲಾ 1 ಪ್ರಕರಣ ದೃಢಪಟ್ಟಿದೆ.