ಮುಂಬೈ: ಕೊರೊನಾ ವೈರಸ್ ಉಪ ತಳಿ ಓಮಿಕ್ರಾನ್‍ನಿಂದ ಈಗ ಮತ್ತಷ್ಟು ಉಪ ತಳಿಗಳು ಪತ್ತೆಯಾಗಿದ್ದು, BA.2 ಗಿಂತ BA.2.12 ಹೆಚ್ಚು ವೇಗವಾಗಿ ಹರಡುತ್ತಿದೆ ಎಂದು ಉನ್ನತ ಸಾರ್ವಜನಿಕ ಆರೋಗ್ಯ ತಜ್ಞರು ತಿಳಿಸಿದ್ದಾರೆ. ಈ ಹೊಸ ತಳಿ ಸೋಂಕಿಗೆ ತುತ್ತಾಗಿ ಆಸ್ಪತ್ರೆ ದಾಖಲಾಗುವ ರೋಗಿಗಳ ಮೇಲೆ ವಿಶೇಷ ನಿಗಾ ವಹಿಸುವ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ.
Advertisement
INSACOG ಮೂಲಗಳ ಪ್ರಕಾರ ಭಾರತದಲ್ಲಿ ಪತ್ತೆಯಾಗುತ್ತಿರುವ ಸೋಂಕಿತರಲ್ಲಿ ಹೆಚ್ಚು BA.2.12 ತಳಿ ಪತ್ತೆಯಾಗುತ್ತಿದ್ದು ಈ ಪ್ರಮಾಣ ದೆಹಲಿಯಲ್ಲಿ ಹೆಚ್ಚಿದೆ. ಇನ್ನೂ ಅಧ್ಯಯನಗಳು ನಡೆಯುತ್ತಿರುವ ಹಿನ್ನಲೆ ಇದರ ತೀವ್ರತೆ ಬಗ್ಗೆ ಈಗಲೇ ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ. ಇದನ್ನೂ ಓದಿ: ಧರ್ಮ ಸಂಸತ್‍ನಲ್ಲಿ ದ್ವೇಷ ಭಾಷಣ – ದೆಹಲಿ ಪೊಲೀಸ್ ಸಲ್ಲಿಸಿದ್ದ ಅಫಿಡವಿಟ್‍ಗೆ ಸುಪ್ರೀಂ ಅಸಮಾಧಾನ
Advertisement
Advertisement
ಈ ಬಗ್ಗೆ ಮಾತನಾಡಿರುವ ವೈರಲಾಜಿಸ್ಟ್ ಡಾ.ಶಾಹೀದ್ ಜಮೀಲ್, BA.2.12 ಓಮಿಕ್ರಾನ್ ಉಪ ತಳಿ BA.2 ನ ಉಪ ತಳಿಯಾಗಿದ್ದು ಅಮೇರಿಕಾದಲ್ಲಿ ಹೆಚ್ಚು ಹರಡುತ್ತಿದೆ ಎಂದು ತಿಳಿಸಿದ್ದಾರೆ. ಅದಾಗ್ಯೂ ಭಾರತದಲ್ಲಿ ಇದು ಹೆಚ್ಚು ಪ್ರಸರಿಸುತ್ತಿಲ್ಲ. BA.1ಗೆ ಹೋಲಿಸಿದರೆ 10%, BA.2ಗೆ ಹೋಲಿಸಿದರೆ 20% ಹೆಚ್ಚು ವೇಗವಾಗಿ ಹರಡುತ್ತಿದೆ. ಸೀಮಿತ ಡಾಟಾ ಇರುವ ಕಾರಣ ತೀವ್ರತೆ ಬಗ್ಗೆ ಸ್ಪಷ್ಟತೆ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ – ನವಾಬ್ ಮಲಿಕ್ ಜಾಮೀನು ಅರ್ಜಿ ತಿರಸ್ಕರಿಸಿದ ಸುಪ್ರೀಂ
Advertisement
ಹೊಸ ರೂಪಾಂತರ ವೈರಸ್‍ಗಳು ಮೂಲ ವೈರಸ್‍ಕ್ಕಿಂತ ಹೆಚ್ಚು ವೇಗವಾಗಿ ಹರಡಬಲ್ಲದು. ಆದರೆ BA.2.12 ತೀವ್ರತೆ ಬಗ್ಗೆ ಇನ್ನೂ ಮಾಹಿತಿ ಇಲ್ಲ. ಇದರ ಕ್ಲಿನಿಕಲ್ ಡಾಟಾ ಅಗತ್ಯ ಎಂದು ಮತ್ತೊರ್ವ ವೈರಲಾಜಿಸ್ಟ್ ಗಗನ್ ದೀಪ್ ಹೇಳಿದ್ದಾರೆ. ನ್ಯೂಯಾರ್ಕ್, ದಕ್ಷಿಣ ಆಫ್ರಿಕಾದಲ್ಲಿ ಈ ರೂಪಾಂತರಿ ವೇಗವಾಗಿ ಹರಡುತ್ತಿದ್ದು, ಇದು ಪರಿಣಾಮಕಾರಿಯಾಗಿರಬಹುದು ಎಂದು ಡಾ. ಸಂಜಯ್ ಪೂಜಾರಿ ಹೇಳಿದ್ದಾರೆ. ಇದನ್ನೂ ಓದಿ: ಮೇವು ಹಗರಣ – ಲಾಲೂ ಪ್ರಸಾದ್ ಯಾದವ್‌ಗೆ ಜಾಮೀನು
ಭಾರತದಲ್ಲಿ ಈ ನಡುವೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು ನಿತ್ಯ ಸಾವಿರಕ್ಕೂ ಅಧಿಕ ಮಂದಿಯಲ್ಲಿ ಕಾಣಿಸಿಕೊಳ್ಳುತ್ತಿದೆ. ಕೊರೊನಾ ಸೋಂಕು ಹೆಚ್ಚಿದ ಹಿನ್ನೆಲೆ ಪಂಜಾಬ್ ಹರಿಯಾಣ ದೆಹಲಿ ಸೇರಿದಂತೆ ಹಲವು ರಾಜ್ಯಗಳು ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಆದೇಶ ಹೊರಡಿಸಿವೆ.