LatestMain PostNational

ಧರ್ಮ ಸಂಸತ್‍ನಲ್ಲಿ ದ್ವೇಷ ಭಾಷಣ – ದೆಹಲಿ ಪೊಲೀಸ್ ಸಲ್ಲಿಸಿದ್ದ ಅಫಿಡವಿಟ್‍ಗೆ ಸುಪ್ರೀಂ ಅಸಮಾಧಾನ

ನವದೆಹಲಿ: 2021ರಲ್ಲಿ ನಡೆದ ಹಿಂದೂ ಯುವ ವಾಹಿನಿ ಸಭೆಯಲ್ಲಿ ಸುದರ್ಶನ ನ್ಯೂಸ್ ಟಿವಿ ಸಂಪಾದಕ ಸುರೇಶ್ ಚವ್ಹಾಂಕೆ ಮಾಡಿದ ಭಾಷಣ ಯಾವುದೇ ನಿರ್ದಿಷ್ಟ ಸಮುದಾಯದ ವಿರುದ್ಧ ದ್ವೇಷ ಭಾಷಣವಾಗಿರಲಿಲ್ಲ ಎಂದು ಅಫಿಡವಿಟ್ ಸಲ್ಲಿಸಿದ್ದ ದೆಹಲಿ ಪೊಲೀಸರ ವಿರುದ್ಧ ಸುಪ್ರೀಂಕೋರ್ಟ್ ಅಸಮಾಧಾನ ಹೊರಹಾಕಿದೆ.

ಧರ್ಮ ಸಂಸದ್ ಮತ್ತು ಧರ್ಮ ಸಂಸದ್‍ನಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಮಾಡಿದ ದ್ವೇಷ ಭಾಷಣಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುವಂತೆ ಪತ್ರಕರ್ತ ಕುರ್ಬಾನ್ ಅಲಿ ಮತ್ತು ಹಿರಿಯ ವಕೀಲ ಅಂಜನಾ ಪ್ರಕಾಶ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದರು. ಇದನ್ನೂ ಓದಿ: ಮೇವು ಹಗರಣ – ಲಾಲೂ ಪ್ರಸಾದ್‌ ಯಾದವ್‌ಗೆ ಜಾಮೀನು

ಈ ಅರ್ಜಿಯನ್ನು ವಿಚಾರಣೆ ನಡೆಸುತ್ತಿರುವ ನ್ಯಾ.ಎಂ.ಎಂ ಖಾನ್ವಿಲ್ಕರ್ ನೇತೃತ್ವದ ದ್ವಿ ಸದಸ್ಯ ಪೀಠ ಮಾಹಿತಿ ಕೋರಿ ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿತ್ತು. ಇದಕ್ಕೆ ಉತ್ತರಿಸಿದ್ದ ದೆಹಲಿ ಪೊಲೀಸರು ಯಾವುದೇ ದ್ವೇಷ ಭಾಷಣ ಮಾಡಿಲ್ಲ ಎಂದು ವರದಿ ನೀಡಿದ್ದರು. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ – ನವಾಬ್‌ ಮಲಿಕ್‌ ಜಾಮೀನು ಅರ್ಜಿ ತಿರಸ್ಕರಿಸಿದ ಸುಪ್ರೀಂ

ಇಂದು ವಿಚಾರಣೆ ವೇಳೆ ಅಫಿಡವಿಟ್ ಗಮನಿಸುತ್ತಿದ್ದಂತೆ ಗರಂ ಆದ ನ್ಯಾಯಮೂರ್ತಿ, ವಿಚಾರಣೆಯ ವರದಿಯನ್ನು ಕೋರ್ಟ್‍ಗೆ ನೀಡಿದ್ದೀರಾ ಅಥವಾ ಸೂಕ್ಷ್ಮ ವ್ಯತಾಸಗಳನ್ನು ಕಂಡುಕೊಂಡಿದ್ದೀರಾ ಎಂದು ಪ್ರಶ್ನಿಸಿತು. ಕೂಡಲೇ ಮಧ್ಯಪ್ರವೇಶ ಮಾಡಿದ ದೆಹಲಿ ಪೊಲೀಸರ ಪರ ವಕೀಲರು ಹೊಸ ಅಫಿಡವಿಟ್ ಸಲ್ಲಿಸುವ ಭರವಸೆ ನೀಡಿದರು. ಇದಕ್ಕೆ ಒಪ್ಪಿದ ಕೋರ್ಟ್ ಎರಡು ವಾರದಲ್ಲಿ ಉತ್ತಮ ಅಫಿಡವಿಟ್ ಸಲ್ಲಿಸಬೇಕು ಎಂದು ಸೂಚನೆ ನೀಡಿದೆ.

ಆರಂಭದಲ್ಲಿ ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಕಪಿಲ್ ಸಿಬಲ್ ಅವರು ಕೊಲ್ಲಲ್ಲು ಸಿದ್ದವಾಗಿದ್ದಾರೆ ಎಂದು ಸಮುದಾಯದ ವಿರುದ್ಧ ದ್ವೇಷ ಭಾಷಣ ಮಾಡಿದ್ದಾರೆ. ಇದರ ವೀಡಿಯೋ ಕ್ಲಿಪ್ ಲಭ್ಯವಿದೆ. ಆದರೆ ಪೊಲೀಸರು ದ್ವೇಷ ಭಾಷಣ ಮಾಡಿಲ್ಲ ಎಂದು ವರದಿ ನೀಡಿದ್ದಾರೆ ಎಂದು ಕುಟುಕಿದರು.

Leave a Reply

Your email address will not be published.

Back to top button