ನವದೆಹಲಿ: ಸ್ಪೈಸ್‍ಜೆಟ್ ವಿಮಾನದೊಳಗೆ ವ್ಯಕ್ತಿಯೋರ್ವ ಸಿಗರೇಟ್ ಸೇದಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇದೀಗ ಆತನ ವಿರುದ್ಧ ಪೊಲೀಸರಿಗೆ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಇನ್‍ಸ್ಟಾಗ್ರಾಮ್‍ನಲ್ಲಿ 6.30 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‍ಗಳನ್ನು ಹೊಂದಿರುವ ಗುಗಾರ್ಂವ್ ನಿವಾಸಿ ಬಾಬಿ ಕಟಾರಿಯಾ ವಿಮಾನದ ಸೀಟಿನ ಮೇಲೆ ಶೂನಲ್ಲಿಯೇ ಮಲಗಿಕೊಂಡು ಆರಾಮದಾಯಕವಾಗಿ, ಲೈಟರ್‌ನಲ್ಲಿ ಸಿಗರೇಟ್ ಅನ್ನು ಹೊತ್ತಿಸಿಕೊಂಡು, ನಿಟ್ಟುಸಿರು ಬಿಡುತ್ತಾ ಸಿಗರೇಟ್ ಸೇದುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ಭೇಟಿಗೆಂದು ಕಬ್ಬನ್ ಪಾರ್ಕ್‍ಗೆ ಕರೆಸಿ ಸಂಬಂಧಿ ಯುವತಿ ಮೇಲೆ ಅತ್ಯಾಚಾರ!
New rule for Bobby kataria ? @JM_Scindia @DGCAIndia @CISFHQrs pic.twitter.com/OQn5WturKb
— Nitish Bhardwaj (@Nitish_nicks) August 11, 2022
ಈ ವೀಡಿಯೋವನ್ನು ಜನರು ಟ್ವಿಟ್ಟರ್‍ನಲ್ಲಿ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಟ್ಯಾಗ್ ಮಾಡಿ ಟೀಕೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಜ್ಯೋತಿರಾದಿತ್ಯ ಸಿಂಧಿಯಾ ಅವರು ಪ್ರತಿಕ್ರಿಯೆ ಸಹ ನೀಡಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮೂಲಗಳ ಪ್ರಕಾರ ಈ ವೀಡಿಯೋ 2022 ಜನವರಿ 23ರದ್ದಾಗಿದೆ. ವಿಮಾನದೊಳಗೆ ಸಿಗರೇಟ್ ಸೇದುಕೊಂಡಿದ್ದ ವ್ಯಕ್ತಿಯ ಹೆಸರು ಬಲ್ವಿಂದರ್ ಕಟಾರಿಯಾ ಅಲಿಯಾಸ್ ಬಾಬಿ ಕಟಾರಿಯಾ. ಗುರುವಾರದಿಂದ ಈ ವೀಡಿಯೋ ಸೊಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 2022ರ ಜನವರಿ 23 ರಂದು, ಬಲ್ವಿಂದರ್ ಕಟಾರಿಯಾ ಅವರು ಸ್ಪೈಸ್ ಜೆಟ್ ವಿಮಾನದಲ್ಲಿ ದುಬೈನಿಂದ ದೆಹಲಿಗೆ ಪ್ರಯಾಣಿಸಿದ್ದ ವೇಳೆ ಈ ವಿಡಿಯೋ ಮಾಡಲಾಗಿದೆ ಎಂದು ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.
ಇದೀಗ ವ್ಯಕ್ತಿ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದ್ದು, ಈ ಪ್ರಕರಣ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಬಡವರಿಗೆ ತೆರಿಗೆ ಹೊರೆ; ಶ್ರೀಮಂತರಿಗೆ ಮಾತ್ರ ವಿನಾಯಿತಿ – ಕೇಂದ್ರದ ವಿರುದ್ಧ ಕೇಜ್ರಿವಾಲ್ ಕಿಡಿ