ಟೀಚರ್ ಕೆಲಸಕ್ಕೆಂದು ಯುವತಿಯನ್ನು ಕರೆದೊಯ್ದು ನಿರಂತರ ಅತ್ಯಾಚಾರ – ಮೌಲ್ವಿ ಅರೆಸ್ಟ್

Public TV
1 Min Read
HUBBALLI CRIME

ಹುಬ್ಬಳ್ಳಿ: ಟೀಚರ್ ಕೆಲಸಕ್ಕೆಂದು ಯುವತಿಯೊಬ್ಬಳನ್ನು ನಂಬಿಸಿ ಮಧ್ಯಪ್ರದೇಶಕ್ಕೆ (Madhya Pradesh) ಕರೆದೊಯ್ದು ನಿರಂತರ ಅತ್ಯಾಚಾರ ಎಸಗಿದ್ದ ಮೌಲ್ವಿಯೊಬ್ಬನನ್ನು ಹುಬ್ಬಳ್ಳಿ ಪೊಲೀಸರು (Police) ಖಂಡ್ವಾ ಎಂಬಲ್ಲಿ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಗುಲಾಮ ಜಿಲಾನಿ ಅಜಹರಿ ಎಂದು ಗುರುತಿಸಲಾಗಿದೆ. ಈತ ದೇಶದ ಖ್ಯಾತ ಮೌಲ್ವಿ ಎನ್ನಲಾಗಿದೆ. ಆರೋಪಿಯನ್ನು ಮಧ್ಯಪ್ರದೇಶದ ಖಂಡ್ವಾ ಎಂಬಲ್ಲಿ ಬಂಧಿಸಲಾಗಿದ್ದು, ಪೊಲೀಸರು ಹುಬ್ಬಳ್ಳಿಗೆ ಕರೆದುಕೊಂಡು ಬರುತ್ತಿದ್ದಾರೆ. ಇದನ್ನೂ ಓದಿ: ಐವರ ಅಸ್ಥಿಪಂಜರ ಪತ್ತೆ ಕೇಸ್‍ಗೆ ಟ್ವಿಸ್ಟ್- ಪಾಳು ಬಿದ್ದ ಮನೆಯಲ್ಲಿ ಸಿಕ್ಕ ಡೆತ್‍ನೋಟ್‍ನಲ್ಲೇನಿದೆ?

ಬಂಧಿತ ಆರೋಪಿ ಆತನ ಮದರಸಾದಲ್ಲಿ ಶಿಕ್ಷಕಿಯಾಗಿದ್ದ ಹುಬ್ಬಳ್ಳಿ (Hubballi) ಮೂಲದ ಯುವತಿಗೆ ಮತ್ತು ಬರುವ ಔಷಧಿ ಕೊಟ್ಟು ಬಲಾತ್ಕಾರ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಎರಡು ವರ್ಷಗಳ ಕಾಲ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ. ಅಲ್ಲದೇ ಗುಲಾಮ ಜಿಲಾನಿ ಅಜಹರಿ, ಒಟ್ಟು ನಾಲ್ಕು ಬಾರಿ ಆಕೆಗೆ ಗರ್ಭಪಾತ ಮಾಡಿಸಿದ್ದಾನೆ ಎನ್ನಲಾಗಿದೆ. ಆಕೆ ಮತ್ತೆ ಐದನೇ ಬಾರಿಗೆ ಗರ್ಭಿಣಿಯಾದ ಬಳಿಕ ಆಕೆಯನ್ನು ಹುಬ್ಬಳ್ಳಿಯಲ್ಲಿರುವ ಯುವತಿಯ ಮನೆಯಲ್ಲಿ ಬಿಟ್ಟು, ನನ್ನ ನಿನ್ನ ನಡುವೆ ಯಾವ ಸಂಬಂಧ ಉಳಿದಿಲ್ಲ. ಈ ವಿಷಯ ಬಹಿರಂಗಪಡಿಸಿದರೆ ನಿನ್ನನ್ನು ಮತ್ತು ನಿನ್ನ ಕುಟುಂಬವನ್ನು ಸುಮ್ಮನೇ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

ಆರೋಪಿ, ಯುವತಿಯ ತಂದೆಯ ಪರಿಚಯಸ್ಥನಾಗಿದ್ದು, ನಿಮ್ಮ ಮಗಳಿಗೆ ನಮ್ಮಲ್ಲಿ ಕೆಲಸ ಇದೆ ಎಂದು ಹೇಳಿ ಮಧ್ಯಪ್ರದೇಶಕ್ಕೆ ಕರೆದೊಯ್ದಿದ್ದ. ಬಳಿಕ ನನಗೆ ಮೊದಲ ಹೆಂಡತಿಯಿಂದ ಡಿವೋರ್ಸ್ ಆಗಿದ್ದು, ನಾನು ನಿನ್ನನ್ನು ಮದುವೆಯಾಗುತ್ತೇನೆ ಎಂದು ಹೇಳಿ ನಿರಂತರ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ಹೇಳಿಕೊಂಡಿದ್ದಾಳೆ.

ಈ ಸಂಬಂಧ ಯುವತಿ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಮೌಲ್ವಿ, ಆಸೀಫ್, ಶಕೀಲ್, ವೈದ್ಯ ಸೇರಿ ಒಟ್ಟು ಎಂಟು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಚಿತ್ರದುರ್ಗ; ಪಾಳುಬಿದ್ದ ಮನೆಯಲ್ಲಿ 5 ಅಸ್ಥಿಪಂಜರ ಪತ್ತೆ – ಮನೆಯಲ್ಲಿ ಸಿಕ್ತು 2019 ರ ಕ್ಯಾಲೆಂಡರ್‌

Share This Article