ಬೆಂಗಳೂರು: ತಮಿಳುನಾಡು ಮಾಜಿ ಸಿಎಂ ಜಯಲಲಿತಾ (Jayalalitha) ಗೆ ಸೇರಿದ್ದ ಲಕ್ಷ ಲಕ್ಷ ಬೆಲೆಬಾಳುವ ರೇಷ್ಮೆ ಸೀರೆ, ಜಯಲಲಿತಾ ಧರಿಸಿದ್ದ ಬಂಗಾರ ಡೈಮಂಡ್, ರಾಶಿ ರಾಶಿ ಚಪ್ಪಲಿಯನ್ನು ಶೀಘ್ರದಲ್ಲಿಯೇ ಹರಾಜಿಗೆ ಕೂಗುವ ಸಾಧ್ಯತೆ ಇದೆ.
ತಮಿಳುನಾಡು ಮಾಜಿ ಸಿಎಂ. ಜಯಲಲಿತಾ ಅಕ್ರಮ ಆಸ್ತಿ (Property) ಗಳಿಕೆ ಅಂತಾ ದಾಳಿ ವೇಳೆ ವಶಪಡಿಸಿಕೊಂಡ ಆಸ್ತಿ ಸುಮಾರು 26 ವರ್ಷದಿಂದ ವಿಧಾನಸೌಧ (Vidhanasoudha) ದಲ್ಲಿಯೇ ಕೊಳೆಯುತ್ತಿದೆ. 11 ಸಾವಿರಕ್ಕೂ ಅಧಿಕ ರೇಷ್ಮೆ ಸೀರೆ, ಕೋಟಿಗಟ್ಟಲೇ ಮೌಲ್ಯದ ಅಭರಣ, 400ಕ್ಕೂ ಹೆಚ್ಚು ಚಪ್ಪಲಿಗಳು, 20 ಸೆಟ್ ಸೋಫಾ ವೆರೈಟಿ ವಾಚ್ ಬಂಗಾರದ ಡಾಬು ಸೇರಿದಂತೆ ಅನೇಕ ವಸ್ತುಗಳನ್ನು ದಾಳಿ ವೇಳೆ ವಶಪಡಿಸಿಕೊಳ್ಳಲಾಗಿತ್ತು. ಜಯಲಲಿತಾ ಮೃತಪಟ್ಟ ಮೇಲೆ ವಾರಸುದಾರರು ಇಲ್ಲದ ಕಾರಣ ಈ ವಸ್ತುಗಳ ಹರಾಜು ಪ್ರಕ್ರಿಯೆ ಶುರುಮಾಡಬೇಕಾಗಿತ್ತು. ಆದರೆ ವಿಳಂಬವಾಗಿದ್ದು ಕೊನೆಗೂ ಕೋರ್ಟ್ ಚಾಟಿಯ ಬಳಿಕ ಈಗ ವಸ್ತುಗಳ ಹರಾಜಿಗೆ ರಾಜ್ಯಸರ್ಕಾರ ಸರ್ಕಾರಿ ಅಭಿಯೋಜಕರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಇದನ್ನೂ ಓದಿ: ರಣಬಿಸಿಲಿನ ಮಧ್ಯೆ ತಂಪೆರೆದ ವರುಣ- ಬೇಸಿಗೆ ಮಳೆಗೆ ಅಪಾರ ಬೆಳೆಗಳು ನಾಶ
ಜಯಲಲಿತಾ ಆಸ್ತಿ ಹರಾಜಿನ ವಿಚಾರದಲ್ಲಿ ಕಾನೂನು ಹೋರಾಟ ನಡೆಸಿದ್ದ ನರಸಿಂಹಮೂರ್ತಿ ಸರ್ಕಾರದ ಆದೇಶದ ಬಗ್ಗೆ ಖುಷಿಪಟ್ಟು ಅದೆಷ್ಟೋ ಮೌಲ್ಯದ ಆಸ್ತಿ ಹಾಳಾಗಿದ್ಯೋ ಗೊತ್ತಿಲ್ಲ. ಆದರೆ ಇಷ್ಟು ವರ್ಷಗಳ ನಂತ್ರವಾದ್ರೂ ಬುದ್ಧಿ ಕಲಿತಿದ್ಯಯಲ್ಲ ಸರ್ಕಾರ ಅಂತಾ ಖುಷಿಪಟ್ರು. ಜಯಲಲಿತಾ ವಸ್ತುಗಳ ಲಿಸ್ಟ್ ಕೇಳಿದ್ರೇ ಎಂತವರಿಗೂ ತಲೆತಿರುಗೋದು ಪಕ್ಕ. ಅಂತದ್ರಲ್ಲಿ 26 ವರ್ಷಗಳಿಂದ ಈ ವಸ್ತುಗಳೆಲ್ಲ ಹಾಗೆ ಕೊಳೆಯುತ್ತಿದ್ದಾವೆ ಅನ್ನೋದು ಇನ್ನೂ ದುರಂತ.