ಭುವನೇಶ್ವರ: ಗುಂಡಿನ ದಾಳಿಗೊಳಗಾಗಿ ತೀವ್ರವಾಗಿ ಗಾಯಗೊಂಡಿದ್ದ ಒಡಿಶಾದ ಆರೋಗ್ಯ ಸಚಿವ (Odisha Health Minister) ಹಾಗೂ ಬಿಜೆಡಿ (BJD) ಹಿರಿಯ ನಾಯಕ ನಬಾ ದಾಸ್ (Naba Das) (61) ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಭಾನುವಾರ ಜಾರ್ಸುಗುಡ ಜಿಲ್ಲೆಯ ಬ್ರಜರಾಜನಗರ ಬಳಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ದಾಸ್ ಮೇಲೆ ಸಹಾಯಕ ಸಬ್ ಇನ್ಸ್ಪೆಕ್ಟರ್ (ASI) ಒಬ್ಬ ಗುಂಡು ಹಾರಿಸಿದ್ದ. ಇದನ್ನೂ ಓದಿ: ಭಾರತದ ಮಹಿಳೆಯರಿಗೆ ಚೊಚ್ಚಲ ಅಂಡರ್ 19 ವಿಶ್ವಕಪ್
ತಕ್ಷಣವೇ ಅವರನ್ನು ವಿಮಾನದಲ್ಲಿ ಭುವನೇಶ್ವರಕ್ಕೆ ಚಿಕಿತ್ಸೆಗೆಂದು ಏರ್ ಲಿಫ್ಟ್ ಮಾಡಲಾಗಿತ್ತು. ಅವರ ಎದೆಯ ಭಾಗಕ್ಕೆ ಬುಲೆಟ್ ತಗುಲಿದ್ದರಿಂದ ತೀವ್ರವಾಗಿ ಗಾಯವಾಗಿತ್ತು. ಅವರು ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.
ಗುಂಡಿನ ದಾಳಿಯ ಹಿಂದಿನ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಘಟನೆಯ ಕುರಿತು ಅಧಿಕಾರಿಗಳು ತನಿಖೆಗೆ ಆರಂಭಿಸಿದ್ದಾರೆ. ಇದನ್ನೂ ಓದಿ: ಸ್ಕೂಲ್‌ಡೇಯಲ್ಲಿ ರೇಣುಕಾಚಾರ್ಯ ರಾಜಕೀಯ ಭಾಷಣ – ಫುಲ್ ಕ್ಲಾಸ್, ವೇದಿಕೆಯಿಂದ ಕೆಳಗಿಳಿಸಿದ ಗ್ರಾಮಸ್ಥರು
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k