ದುಬೈ: ಈ ಬಾರಿ ವಿಶ್ವಕಪ್ (ODI World Cup) ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಪಾಲ್ಗೊಳ್ಳದಿದ್ದರೆ ಅದಕ್ಕೆ ಪರ್ಯಾಯವಾಗಿ ಮತ್ತೊಂದು ತಂಡವನ್ನು ಕಣಕ್ಕಿಳಿಸಲು ಐಸಿಸಿ (ICC) ಮಾಸ್ಟರ್ ಪ್ಲ್ಯಾನ್ ಮಾಡಿದೆ.
ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ಟೂರ್ನಿ ವೇಳಾಪಟ್ಟಿ ಬಿಡುಗಡೆಗೊಂಡಿದೆ. ಭಾರತದ ಐದು ಪ್ರಮುಖ ನಗರಗಳಲ್ಲಿ ಪಾಕಿಸ್ತಾನದ (Pakistan) 9 ಪಂದ್ಯಗಳು ನಡೆಯಲಿವೆ. ಇದೇ ಮೊದಲ ಬಾರಿಗೆ ಭಾರತ ಏಕಾಂಗಿಯಾಗಿ ಆತಿಥ್ಯ ವಹಿಸಿಕೊಂಡಿದ್ದು, ಅಕ್ಟೋಬರ್ 5 ರಿಂದ ನವೆಂಬರ್ 19ರ ವರೆಗೆ ಒಟ್ಟು 48 ಪಂದ್ಯಗಳು ಆಯೋಜನೆಗೊಂಡಿವೆ. ವಿಶ್ವಕಪ್‌ನ ಉದ್ಘಾಟನಾ ಪಂದ್ಯ ಹಾಗೂ ಫೈನಲ್ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲೇ (Narendra Modi Stadium) ನಡೆಯಲಿದೆ.
ಏಕದಿನ ಏಷ್ಯಾಕಪ್ ಟೂರ್ನಿಗೆ (ODI Stadium) ಟೀಂ ಇಂಡಿಯಾವನ್ನ ಪಾಕಿಸ್ತಾನಕ್ಕೆ ಕಳುಹಿಸಲು ಬಿಸಿಸಿಐ (BCCI) ತಿರಸ್ಕರಿಸಿತು. ಈ ಹಿನ್ನೆಲೆಯಲ್ಲಿ ಐಸಿಸಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜನೆ ಮಾಡಲು ನಿರ್ಧರಿಸಿತು. ಹಾಗಾಗಿ ಪಾಕಿಸ್ತಾನ ಕೂಡ ಭಾರತದಲ್ಲಿ ವಿಶ್ವಕಪ್ ಪಂದ್ಯವನ್ನಾಡಲು ಆಕ್ಷೇಪ ವ್ಯಕ್ತಪಡಿಸಿದೆ. ಒಂದು ವೇಳೆ ಪಾಕಿಸ್ತಾನ ವಿಶ್ವಕಪ್ ಟೂರ್ನಿಯನ್ನ ಬಾಯ್‌ಕಾಟ್ ಮಾಡಿದರೆ ಅದಕ್ಕೆ ಪರ್ಯಾಯವಾಗಿ ಐಸಿಸಿ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಇದನ್ನೂ ಓದಿ: ICC ODI World Cup: ಪಾಕ್ ಪಂದ್ಯಗಳಿಗೆ ಬಿಗಿ ಭದ್ರತೆ ನೀಡ್ತೇವೆ – ಬಂಗಾಳ ಕ್ರಿಕೆಟ್
ಪಾಕ್ ತಂಡ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು ಅಲ್ಲಿನ ಸರ್ಕಾರವಾಗಲಿ, ಪಿಸಿಬಿಯಾಗಲಿ ಇನ್ನೂ ಅನುಮತಿ ನೀಡಿಲ್ಲ. ಆದ್ದರಿಂದ ಪಾಕಿಸ್ತಾನ ತಂಡ ಭಾಗವಹಿಸದಿದ್ದರೆ, ಕ್ವಾಲಿಫೈಯರ್‌ನಲ್ಲಿ 3ನೇ ರ‍್ಯಾಂಕ್ ಪಡೆದ ತಂಡವನ್ನ ಆಯ್ಕೆ ಮಾಡಲು ನಿರ್ಧರಿಸಿದೆ. ಈಗಾಗಲೇ 8 ತಂಡಗಳು ವಿಶ್ವಕಪ್ ಟೂರ್ನಿಗೆ ನೇರವಾಗಿ ಪ್ರವೇಶ ಪಡೆದುಕೊಂಡಿದ್ದು, ಉಳಿದ 2 ತಂಡಗಳಿಗಾಗಿ ಸೆಣಸಾಟ ನಡೆಯುತ್ತಿದೆ. ಇದನ್ನೂ ಓದಿ: Asian Games 2023 – ಶಿಖರ್ ಧವನ್‌ಗೆ ಟೀಂ ಇಂಡಿಯಾ ನಾಯಕತ್ವ?
ಈಗಾಗಲೇ ಗ್ರೂಪ್ ಹಂತದ ಪಂದ್ಯಗಳು ಮುಕ್ತಾಯಗೊಂಡಿದ್ದು, ಶ್ರೀಲಂಕಾ, ಜಿಂಬಾಬ್ವೆ, ಸ್ಕಾಟ್ಲೆಂಡ್, ನೆದರ್ಲ್ಯಾಂಡ್ಸ್, ವೆಸ್ಟ್ ಇಂಡೀಸ್ ಮತ್ತು ಒಮನ್ ಸೂಪರ್ ಸಿಕ್ಸ್ ಹಂತದಲ್ಲಿ ಸೆಣಸುತ್ತಿವೆ. ವೆಸ್ಟ್ ಇಂಡೀಸ್ ಈಗಾಗಲೇ 2 ಪಂದ್ಯಗಳನ್ನ ಸೋತಿರುವುದರಿಂದ ವಿಶ್ವಕಪ್ ಟೂರ್ನಿಯಲ್ಲಿ ಅರ್ಹತೆ ಪಡೆಯುವುದಿಲ್ಲವೆನ್ನುವುದು ಖಚಿತವಾಗಿದೆ. ಜಿಂಬಾಬ್ವೆ, ಶ್ರೀಲಂಕಾ ವಿಶ್ವಕಪ್ ಟೂರ್ನಿಯಲ್ಲಿ ಅರ್ಹತೆ ಪಡೆಯುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಪಾಕ್ ತಂಡ ಗೈರಾದರೆ, ಮತ್ತೊಂದು ತಂಡಕ್ಕೆ ಅವಕಾಶ ನೀಡಲು ಐಸಿಸಿ ನಿರ್ಧರಿಸಿದೆ. ಇದನ್ನೂ ಓದಿ: ಭಾರತ Vs ಐರ್ಲೆಂಡ್ T20 ಸರಣಿಗೆ ವೇಳಾಪಟ್ಟಿ ಪ್ರಕಟ – ಇಲ್ಲಿದೆ ಡಿಟೇಲ್ಸ್
ಭಾರತದಲ್ಲಿ ಪಾಕ್ ತಂಡದ ವೇಳಾಪಟ್ಟಿ ಹೀಗಿದೆ…
ಪಾಕಿಸ್ತಾನ vs ಕ್ವಾಲಿಫೈಯರ್ 1, ಅಕ್ಟೋಬರ್ 6 – ಹೈದರಾಬಾದ್
ಪಾಕಿಸ್ತಾನ vs ಕ್ವಾಲಿಫೈಯರ್ 2, ಅಕ್ಟೋಬರ್ 12 – ಹೈದರಾಬಾದ್
ಪಾಕಿಸ್ತಾನ vs ಭಾರತ, ಅಕ್ಟೋಬರ್ 15 – ಅಹಮದಾಬಾದ್
ಪಾಕಿಸ್ತಾನ vs ಆಸ್ಟ್ರೇಲಿಯಾ, ಅಕ್ಟೋಬರ್ 20 – ಬೆಂಗಳೂರು
ಪಾಕಿಸ್ತಾನ vs ಅಫ್ಘಾನಿಸ್ತಾನ, ಅಕ್ಟೋಬರ್ 23- ಚೆನ್ನೈ
ಪಾಕಿಸ್ತಾನ vs ದಕ್ಷಿಣ ಆಫ್ರಿಕಾ, ಅಕ್ಟೋಬರ್ 27- ಚೆನ್ನೈ
ಪಾಕಿಸ್ತಾನ vs ಬಾಂಗ್ಲಾದೇಶ, ಅಕ್ಟೋಬರ್ 31 – ಕೋಲ್ಕತ್ತಾ
ಪಾಕಿಸ್ತಾನ vs ನ್ಯೂಜಿಲೆಂಡ್, ನವೆಂಬರ್ 4 – ಬೆಂಗಳೂರು
ಪಾಕಿಸ್ತಾನ vs ಇಂಗ್ಲೆಂಡ್, ನವೆಂಬರ್ 12- ಕೋಲ್ಕತ್ತಾ
Web Stories