ತಿರುವನಂತಪುರಂ: ದೈಹಿಕವಾಗಿ ಯಾವುದೇ ರೀತಿಯಿಂದ ಹಲ್ಲೆ ನಡೆಸದಿದ್ದರೂ ಆರೋಗ್ಯ ಕಾರ್ಯಕರ್ತರ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಅದು ಘೋರ ಹಾಗೂ ಜಾಮೀನು ರಹಿತ ಅಪರಾಧವಾಗುತ್ತದೆ ಎಂದು ಕೇರಳ ಹೈಕೋರ್ಟ್ ಹೇಳಿದೆ.
ಹಲ್ಲೆ ನಡೆಸದೇ ಇದ್ದರೂ ಕೇರಳ ಆರೋಗ್ಯ ಸೇವಾ ಸಿಬ್ಬಂದಿ ಮತ್ತು ಆರೋಗ್ಯ ಸೇವಾ ಸಂಸ್ಥೆಗಳ (ಹಿಂಸಾಚಾರ ಮತ್ತು ಆಸ್ತಿ ಹಾನಿ ತಡೆ) ಕಾಯ್ದೆ ಅಡಿಯಲ್ಲಿ ಗಂಭೀರ ಜಾಮೀನು ರಹಿತ ಅಪರಾಧವಾಗುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ಯುವತಿ ಸ್ನೇಹಿತೆಯಾದ ಮಾತ್ರಕ್ಕೆ ಲೈಂಗಿಕ ಸಂಬಂಧಕ್ಕೆ ಒಪ್ಪಿಗೆಯಿದೆ ಎಂದರ್ಥವಲ್ಲ – ಹೈಕೋರ್ಟ್
Advertisement
ವೈದ್ಯೆಯೊಬ್ಬರಿಗೆ ಬೆದರಿಕೆಯೊಡ್ಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಆರೋಪಿಯೊಬ್ಬ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರಿದ್ದ ಏಕ ಸದಸ್ಯ ಪೀಠವು ಈ ಆದೇಶ ನೀಡಿದ್ದು ಅರ್ಜಿದಾರರಿಗೆ ಜಾಮೀನು ನಿರಾಕರಿಸಿದೆ. ಆರೋಗ್ಯ ಸೇವೆ ಒದಗಿಸುವವರ ವಿರುದ್ಧದ ಎಲ್ಲಾ ರೀತಿಯ ಹಿಂಸಾಚಾರ ತಡೆಯುವುದು ಶಾಸನದ ಉದ್ದೇಶವಾಗಿದೆ ಎಂದು ಒತ್ತಿ ಹೇಳಿದೆ. ಇದನ್ನೂ ಓದಿ: ಪ್ರವಾದಿಗಾಗಿ ಒಂದು ಕೊಲೆ ಮಾಡೋಕಾಗಲ್ವೆ? – ಉದಯಪುರ ಹತ್ಯೆಯ ಮಾಸ್ಟರ್‌ಮೈಂಡ್ ವೀಡಿಯೋ ವೈರಲ್
Advertisement
ಕಾಯ್ದೆಯಲ್ಲಿರುವ ಹಿಂಸೆ ಪದಕ್ಕೆ ಸಾಕಷ್ಟು ವ್ಯಾಪಕತೆ ಇದೆ. ಕಾಯ್ದೆ ರೂಪಿಸಿರುವ ಶಾಸಕಾಂಗದ ಉದ್ದೇಶ ನಿಸ್ಸಂದೇಹವಾಗಿ ಆರೋಗ್ಯ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗೆ ಯಾವುದೇ ಬೆದರಿಕೆ ಅಥವಾ ಅಡ್ಡಿ ಉಂಟು ಮಾಡುವುದನ್ನು ತಡೆಯಬೇಕು ಎಂಬುದಾಗಿದೆ ಎಂದು ನ್ಯಾಯಾಲಯ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ.
Advertisement
Advertisement
ಆರೋಪಿ ವಿರುದ್ಧ IPC ಸೆಕ್ಷನ್ 341 (ಅಕ್ರಮ ಪ್ರತಿಬಂಧಕ್ಕಾಗಿ ದಂಡನೆ), ಸೆಕ್ಷನ್ 353 (ಸಾರ್ವಜನಿಕ ಸೇವಕರ ಕರ್ತವ್ಯವನ್ನು ತಡೆಯಲು ಹಲ್ಲೆ ಮಾಡುವುದು), ಸೆಕ್ಷನ್ 506 (ಕ್ರಿಮಿನಲ್ ಅಪರಾಧಕ್ಕಾಗಿ ದಂಡನೆ) ಹಾಗೂ ಸೆಕ್ಷನ್ 3 ಮತ್ತು 4(1) ಆರೋಗ್ಯ ಆರೈಕೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಅರ್ಜಿದಾರರ ಪರ ವಕೀಲ ಆರ್.ಶ್ರೀಹರಿ ವಾದ ಮಂಡಿಸಿದರು. ಸರ್ಕಾರದ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಎ.ನೌಶಾದ್ ಪ್ರತಿವಾದಿಯಾಗಿದ್ದರು.