ಬೆಂಗಳೂರು: ಫೇಕ್ ಅಕೌಂಟ್‌ನಿಂದ (Fake Account) ಅಶ್ಲೀಲ ಮೆಸೇಜ್, ಪೋಸ್ಟ್ ಹಾಕಿದರೆ ಶಿಕ್ಷೆ ತಪ್ಪಿದ್ದಲ್ಲ. 5 ವರ್ಷ ಜೈಲು, ದಂಡ ವಿಧಿಸುತ್ತಾರೆ ಎಂದು ಸೈಬರ್ ತಜ್ಞೆ ಡಾ. ಶುಭಾ ತಿಳಿಸಿದ್ದಾರೆ.
`ಪಬ್ಲಿಕ್ ಟಿವಿ’ ಜೊತೆ ಮಾತನಾಡಿ, ನಟಿ ರಮ್ಯಾಗೆ (Actree Ramya) ಅಶ್ಲೀಲ ಮೆಸೇಜ್ ಕಳುಹಿಸುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದರು. ಫೇಕ್ ಅಕೌಂಟ್‌ನಿಂದ ಅಶ್ಲೀಲ ಮೆಸೇಜ್, ಪೋಸ್ಟ್ ಹಾಕಿದ್ರೆ ಶಿಕ್ಷೆ ತಪ್ಪಿದ್ದಲ್ಲ. ಅಶ್ಲೀಲ ಮೆಸೇಜ್ ಹಾಕಿದವರು ಫೇಕ್ ಅಕೌಂಟ್ ಅಂತ ನೆಮ್ಮದಿಯಾಗಿದ್ದರೆ ನಡೆಯಲ್ಲ. ಶಿಕ್ಷೆಯಾಗೋದು ಪಕ್ಕಾ ಎಂದು ಎಚ್ಚರಿಕೆ ನೀಡಿದ್ದಾರೆ.ಇದನ್ನೂ ಓದಿ: ಪಾಕ್ ಭಯೋತ್ಪಾದನೆಗೆ ಶಾಶ್ವತ ಬೆಂಬಲ ತ್ಯಜಿಸುವವರೆಗೆ ಸಿಂಧೂ ಜಲ ಒಪ್ಪಂದ ಅಮಾನತು: ಜೈಶಂಕರ್
ಫೇಕ್ ಅಕೌಂಟ್‌ನಿಂದ ಅಶ್ಲೀಲ ಮೆಸೇಜ್ ಮಾಡಿದರೆ ಒಂದೇ ದಿನದಲ್ಲಿ ಟ್ರೇಸ್ ಔಟ್ ಮಾಡಬಹುದು. 43 ಅಕೌಂಟ್‌ಗಳನ್ನು ಒಂದೇ ದಿನದಲ್ಲಿ ಟ್ರೇಸ್ ಔಟ್ ಮಾಡೋದು ಕಷ್ಟವಲ್ಲ. ಹೊಸ ಟೆಕ್ನಾಲಜಿ ಬಳಕೆ ಮಾಡಿಕೊಂಡು ಐಪಿ ಅಡ್ರೆಸ್ ಮೂಲಕ ಪತ್ತೆ ಹಚ್ಚಬಹುದು. ಯಾರೇ ಬಳಕೆ ಮಾಡುತ್ತಿದ್ದರೂ, ಯಾವುದೇ ಬೇರೆ ಹೆಸರು ಹಾಕಿಕೊಂಡಿದ್ದರೂ ಪತ್ತೆ ಹಚ್ಚಬಹುದು. ಸೈಬರ್ ಕಾಯ್ದೆ ಪ್ರಕಾರ, ಐದು ವರ್ಷ ಶಿಕ್ಷೆ ಹಾಗೂ ದಂಡ ವಿಧಿಸುತ್ತಾರೆ ಎಂದಿದ್ದಾರೆ.
ಇನ್ನೂ ಮಹಿಳೆಯರು, ಯುವತಿಯರು ಕೂಡ ಇಂಟರ್‌ನೆಟ್‌ಲ್ಲಿ ತಮ್ಮ ದಿನಚರಿಯನ್ನು ಅಪ್ಲೋಡ್ ಮಾಡೋದನ್ನು ನಿಲ್ಲಿಸಬೇಕು. ಇದೆಲ್ಲ ಅಪಾಯಕ್ಕೆ, ಸೈಬರ್ ಹ್ಯಾಕ್‌ಗೆ ಕಾರಣ ಆಗುತ್ತದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ತೆಂಗು ಮತ್ತು ಮೆಕ್ಕೆಜೋಳಕ್ಕೆ ರೋಗ – ವಿಶೇಷ ಪ್ಯಾಕೇಜ್ ನೀಡಲು ಕೇಂದ್ರಕ್ಕೆ ಸಂಸದ ಶ್ರೇಯಸ್ ಪಟೇಲ್ ಒತ್ತಾಯ