ನವದೆಹಲಿ: ಬಾಲಕಿಯೊಬ್ಬಳು ಬೊಜ್ಜು ಬಂದಿದೆ ಎನ್ನುವ ಕಾರಣಕ್ಕೆ ಮನನೊಂದು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ತಿರುಚ್ಚಿ ನಗರದಲ್ಲಿ ನಡೆದಿದೆ.
13 ವರ್ಷದ ಬಾಲಕಿ ಮೃತಳಾಗಿದ್ದಾಳೆ. 8 ನೇ ತರಗತಿಯ ವಿದ್ಯಾರ್ಥಿನಿ ಅಪ್ರಾಪ್ತ ಬಾಲಕಿ ಅಲೆಕ್ಸಾಂಡ್ರಿಯಾ ರಸ್ತೆಯ, ಕಂಟೋನ್ಮೆಂಟ್ ಪ್ರದೇಶದಲ್ಲಿ ತನ್ನ ಮನೆಯ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ
Advertisement
Advertisement
ಬಾಲಕಿಯ ತಾಯಿ ಬ್ಯಾಂಕ್ ಉದ್ಯೋಗಿಯಾಗಿದ್ದರು, ಅವರು ಕೆಲಸಕ್ಕೆ ಹೋಗಿದ್ದರು. ಆಕೆಯ ಅಜ್ಜಿ ಮನೆಯಲ್ಲಿದ್ದಳು. ಬಾಲಕಿಯ ಅಜ್ಜಿ ಸಂಜೆ ತಿಂಡಿ ನೀಡಲು ಹೋದಾಗ ಬಾಗಿಲು ಹಾಕಿರುವುದು ಕಂಡು ಬಂದಿದದೆ. ಹಲವಾರು ಬಾರಿ ಬಾಗಿಲು ಬಡಿದ ನಂತರ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ನಂತರ ಮನೆಯವರು ಬಾಗಿಲು ಒಡೆದು ನೋಡಿದಾಗ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ಇದನ್ನೂ ಓದಿ: ಆರೋಗ್ಯ ಸೂಚ್ಯಂಕದಲ್ಲಿ ರಾಜ್ಯವನ್ನು ಮುಂಚೂಣಿಗೆ ತರಲು ಅಗತ್ಯ ಕ್ರಮ: ಡಾ.ಕೆ.ಸುಧಾಕರ್
Advertisement
Advertisement
ಬೊಜ್ಜು ಬಂದಿರುವ ಬಗ್ಗೆ ಬೇಸರಗೊಂಡಿದ್ದಳು. ಅವಳು ಬೊಜ್ಜು ಕರಗಿಸಲು ಪ್ರಯತ್ನಿಸಿದಳು. ಆದರೆ ಸಾಧ್ಯವಾಗಲಿಲ್ಲ. ತೂಕ ಹೆಚ್ಚಾಗಿರುವುದರಿಂದ ಬೇಸರಗೊಂಡು ಸಾಯುವ ನಿರ್ಧಾರ ಮಾಡಿದ್ದಾಳೆ ಎಂದು ಬಾಲಕಿ ತಾಯಿ, ಅಜ್ಜಿ ಹೇಳಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.