ನವದೆಹಲಿ: ಸ್ವಂತ ಕಂಪನಿ ತೆರೆದು ಬಿಲಿಯನೇರ್ ಆದ ಮಹಿಳೆಯರ ಪಟ್ಟಿ ಬಿಡುಗಡೆಯಾಗಿದ್ದು, ಭಾರತದ ನೈಕಾ ಕಂಪನಿಯ ಸಂಸ್ಥಾಪಕಿ ಫಲ್ಗುಣಿ ನಾಯರ್ ಸ್ಥಾನ ಪಡೆದಿದ್ದಾರೆ.
ನೈಕಾ ಭಾರತೀಯ ಇ-ಕಾಮರ್ಸ್ ಕಂಪನಿಯಾಗಿದ್ದು, ಇದನ್ನು 2012ರಲ್ಲಿ ಫಲ್ಗುಣಿ ನಾಯರ್ ಸ್ಥಾಪಿಸಿದ್ದರು. ಮುಂಬೈನಲ್ಲಿ ನೈಕಾದ ಪ್ರಧಾನ ಕಛೇರಿ ಇದ್ದು, ಇದು ವೆಬ್‌ಸೈಟ್, ಮೊಬೈಲ್ ಅಪ್ಲಿಕೇಶನ್ ಹಾಗೂ 84 ಆಫ್‌ಲೈನ್ ಸ್ಟೋರ್‌ಗಳಲ್ಲಿ ಸೌಂದರ್ಯ ವರ್ಧಕ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ.
Advertisement
ಹುರುನ್ ಸಂಶೋಧನಾ ಸಂಸ್ಥೆ ಈ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 58 ವರ್ಷದ ಫಲ್ಗುಣಿ ನಾಯರ್ 7.6 ಬಿಲಿಯನ್ ಡಾಲರ್(ಸುಮಾರು 57 ಸಾವಿರ ಕೋಟಿ ರೂ.)ನ ಒಡತಿಯಾಗಿದ್ದಾರೆ. ಇದನ್ನೂ ಓದಿ: ರಾಜ್ಯದ ಕೋಮು ಸಂಘರ್ಷ ದೇಶದ ಐಟಿ ಹಬ್‍ಗೆ ಮಾರಕ ಬೊಮ್ಮಾಯಿ ಬಗೆಹರಿಸುವ ಭರವಸೆ ನೀಡಿದ್ದಾರೆ: ಕಿರಣ್ ಮಜುಂದಾರ್
Advertisement
Advertisement
ವಿಶ್ವದ ಟಾಪ್ 10 ಮಹಿಳಾ ಸ್ವಯಂ ನಿರ್ಮಿತ ಬಿಲಿಯನೇರ್‌ಗಳಲ್ಲಿ ಭಾರತದ ಫಲ್ಗುಣಿ ನಾಯರ್ ಸೇರಿದಂತೆ ಚೀನಾದ 8 ಮಹಿಳೆಯರು ಹಾಗೂ ಅಮೆರಿಕಾ, ಬ್ರಿಟನ್‌ನ ತಲಾ ಇಬ್ಬರು ಮಹಿಳೆಯರು ಸೇರಿದ್ದಾರೆ. ಇದನ್ನೂ ಓದಿ: ಫಲಿತಾಂಶ ಏನೇ ಬರಲಿ, ಇನ್ನೂ ಬಲಿಷ್ಠವಾಗಿ ಮರಳುತ್ತೇನೆ: ಇಮ್ರಾನ್ ಖಾನ್
Advertisement
2022ರ ವರ್ಷದ ಮಹಿಳಾ ಸ್ವಯಂ ನಿರ್ಮಿತ ಬಿಲಿಯನೇರ್ ಪಟ್ಟಿಯಲ್ಲಿ 16 ದೇಶಗಳ 124 ಮಹಿಳೆಯರಿದ್ದಾರೆ. ಇದರಲ್ಲಿ 19 ಮಹಿಳೆಯರು ಹೊಸಬರಾಗಿದ್ದಾರೆ.