ಇಸ್ಲಾಮಾಬಾದ್: ಅವಿಶ್ವಾಸ ನಿಲುವಳಿ ಫಲಿತಾಂಶ ಏನೇ ಇರಲಿ, ಮುಂದೆಯೂ ನಾನು ಇನ್ನೂ ಬಲಿಷ್ಠನಾಗಿ ಮರಳುತ್ತೇನೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅವರು, ಅಲ್ಲಾಹು ನನಗೆ ಕೀರ್ತಿ, ಸಂಪತ್ತು ಸೇರಿದಂತೆ ಎಲ್ಲವನ್ನೂ ಅನುಗ್ರಹಿಸಿದ್ದಾನೆ. ನಾನು ಈ ಸ್ವತಂತ್ರ್ಯ ದೇಶದಲ್ಲಿ ಜನಿಸಿದ ಮೊದಲ ತಲೆಮಾರಿನವನು. ನನಗಿಂತ 5 ವರ್ಷ ಮೊದಲೇ ಪಾಕಿಸ್ತಾನ ಹುಟ್ಟಿಕೊಂಡಿತ್ತು. ನನ್ನ ಹೆತ್ತವರು ಗುಲಾಮಗಿರಿ ಸಮಯದಲ್ಲಿ ಜನಿಸಿದವರು. ನಾನು ಈ ಸ್ವತಂತ್ರ್ಯ ದೇಶದಲ್ಲಿ ಹುಟ್ಟಿದ ಅದೃಷ್ಟಶಾಲಿ. ಗುಲಾಮಗಿರಿಯಿಂದ ಮೇಲೆ ಏಳುವುದು ಎಷ್ಟು ಕಷ್ಟ ಎಂಬುದು ನನಗೆ ತಿಳಿದಿದೆ ಎಂದು ಹೇಳಿದರು. ಇದನ್ನೂ ಓದಿ: ರಾಜ್ಯದ ಕೋಮು ಸಂಘರ್ಷ ದೇಶದ ಐಟಿ ಹಬ್‍ಗೆ ಮಾರಕ ಬೊಮ್ಮಾಯಿ ಬಗೆಹರಿಸುವ ಭರವಸೆ ನೀಡಿದ್ದಾರೆ: ಕಿರಣ್ ಮಜುಂದಾರ್
Advertisement
Advertisement
ನಾನು ರಾಜಕೀಯ ಸೇರಿದಾಗ ಯಾರ ಮುಂದೆಯೂ ತಲೆ ಬಾಗುವುದಿಲ್ಲ ಹಾಗೂ ನನ್ನ ದೇಶವನ್ನು ಯಾರ ಮುಂದೆಯೂ ತಲೆ ಬಾಗಲು ಬಿಡುವುದಿಲ್ಲ ಎಂದು ಶಪಥ ಮಾಡಿದ್ದೇನೆ. ಇದರ ಅರ್ಥ ನನ್ನ ದೇಶವನ್ನು ಎಂದಿಗೂ ಇನ್ನೊಬ್ಬರ ಗುಲಾಮನಾಗಲು ಬಿಡುವುದಿಲ್ಲ. ಈ ನಿಲುವಿನಿಂದ ನಾನು ಎಂದಿಗೂ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ರತನ್ ಟಾಟಾಗೆ ಭಾರತ ರತ್ನ ನೀಡುವಂತೆ ಮನವಿ ಮಾಡಿದ್ದ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್
Advertisement
ಭಾಷಣದ ವೇಳೆ ಭಾರತವನ್ನು ಹೊಗಳಿದ ಅವರು, ಭಾರತದಲ್ಲಿ ನನ್ನ ಅನೇಕ ಸ್ನೇಹಿತರಿದ್ದಾರೆ. ನಾನು ಎಂದಿಗೂ ಭಾರತವನ್ನು ವಿರೋಧಿಸುವುದಿಲ್ಲ ಎಂದು ಹೇಳಿದರು.