ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಎನ್‍ಡಿಎ ಸರ್ಕಾರದ ವಿರುದ್ಧ ನಟ ಪ್ರಕಾಶ್ ರೈ ಮತ್ತೊಮ್ಮೆ ಟ್ವೀಟ್ ಮಾಡಿದ್ದು, ಮೋದಿ ಅವರು ಭಾನುವಾರ ಪರಿವರ್ತನಾ ಯಾತ್ರೆಯಲ್ಲಿ ಮಾಡಿದ ಭಾಷಣವನ್ನು ಟೀಕಿಸಿ ವ್ಯಂಗ್ಯವಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು 2014 ರ ಚುನಾವಣೆಯಲ್ಲಿ ದೇಶದ ಜನರಿಗೆ `ಪ್ರಾಮಿಸ್ ಟೂತ್‍ಪೇಸ್ಟ್’ ಮಾರಾಟ ಮಾಡಿದ್ದರು, ಆದರೆ ಅದು ಹಲ್ಲು ಉಜ್ಜಲು ಮರೆತು ಹೋಗಿದೆ. ಅಲ್ಲದೇ ರೈತರ ಹಾಗೂ ನಿರುದ್ಯೋಗಿ ಯುವ ಜನರ ಮುಖದಲ್ಲಿ ನಗು ತರಲು ವಿಫಲವಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
Advertisement
ಅರಮನೆ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ಮೋದಿ ಕರ್ನಾಟಕದ ಜನರಿಗೆ ಮತ್ತೆ ಆಶ್ವಾಸನೆಗಳನ್ನು ನೀಡುವ ಮೂಲಕ ಮತ್ತೆ ಪ್ರಾಮಿಸ್ ಟೂತ್‍ಪೇಸ್ಟ್ ಮಾರಾಟ ಮಾಡುತ್ತಿದ್ದಾರೆ. ಇದು ಜನರ ಮುಖದಲ್ಲಿ ನಗು ಮೂಡಿಸುತ್ತದಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮೋದಿ ರ‍್ಯಾಲಿಯಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ಲಾಭ
Advertisement
PROMISE TOOTHPASTE sold in 2014 .. ( forget brushing the teeth ) could not bring a smile on distressed farmers or jobless youth of my country……..do you believe PROMISE TOOTHPASTE ….sold yesterday …in Karnataka rally …..will bring it…. #justasking
— Prakash Raj (@prakashraaj) February 5, 2018
Advertisement
ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ದೇಶವು ಪ್ರಗತಿಯ ಪಥದಲ್ಲಿ ಸಾಗುತ್ತಿದ್ದರೆ, ಕರ್ನಾಟಕ ಅಭಿವೃದ್ಧಿಯ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದೆ. ರಾಜ್ಯದಲ್ಲಿ ರಾಜಕೀಯ ಕೊಲೆಗಳ ಸಂಖ್ಯೆ ಹೆಚ್ಚಾಗಿದೆ. ಈ ಬಾರಿ ಬಿಜೆಪಿಗೆ ಮತ ಹಾಕುವ ಮೂಲಕ ಬಿಎಸ್ ಯಡಿಯೂರಪ್ಪ ಮುಂದಾಳತ್ವದಲ್ಲಿ ರಾಜ್ಯವನ್ನು ಅಭಿವೃದ್ಧಿಯ ಪರ ಸಾಗಬೇಕಿದೆ ಎಂದು ಹೇಳಿದ್ದರು. ಇದನ್ನೂ ಓದಿ: ಮೋದಿ ವಿರುದ್ಧದ ರಮ್ಯಾ ಟ್ವೀಟ್ ಗೆ ಶಾಸಕ ಜಮೀರ್ ಅಹಮದ್ ಅಸಮಾಧಾನ!
Advertisement
ಈ ಹಿಂದೆಯೂ ನಟ ಪ್ರಕಾಶ್ ರೈ ತಾನು ಮೋದಿ, ಅಮೀತ್ ಶಾ ಮತ್ತು ಅನಂತ್‍ಕುಮಾರ್ ಹೆಗ್ಡೆ ವಿರೋಧಿ. ನನ್ನ ಪ್ರಕಾರ ಇವರು ಹಿಂದೂಗಳಲ್ಲ ಎಂದು ಖಾಸಗಿ ಸುದ್ದಿ ವಾಹಿನಿಯ ಕಾರ್ಯಕ್ರಮದಲ್ಲಿ ಹೇಳಿದ್ದರು. ಇದನ್ನೂ ಓದಿ: ಈಕೆ ಯಾರು? ಸಾಧನೆ ಏನು? ಕನ್ನಡ ಬಾರದ ಕಾಡುಪಾಪ- ಮೋದಿ ಕಾಲೆಳೆದ ರಮ್ಯಾ ವಿರುದ್ಧ ಜಗ್ಗೇಶ್ ಕಿಡಿ