ಬೆಂಗಳೂರು: ಒಂದ್ಕಡೆ ರಾಜ್ಯ ಸರ್ಕಾರ ಪ್ರಧಾನಿ ಮೋದಿ ಸಮಾವೇಶ ಮತ್ತು ಬಿಜೆಪಿಗೆ ಬೈಯುತ್ತಲೇ ಇದೆ. ಮತ್ತೊಂದ್ಕಡೆ ಮೋದಿ ಸಮಾವೇಶದಿಂದ ರಾಜ್ಯ ಸರ್ಕಾರ ಸದ್ದಿಲ್ಲದೇ ಕೋಟಿ ಕೋಟಿ ಲಾಭ ಮಾಡಿಕೊಂಡಿದೆ.
Advertisement
ರಾಜ್ಯಕ್ಕೆ ಪ್ರಧಾನಿ ಮೋದಿ ಬಂದು ಸಿದ್ದರಾಮಯ್ಯ ಸರ್ಕಾರಕ್ಕೆ ಭರ್ಜರಿ ಲಾಭ ತಂದುಕೊಟ್ಟಿದ್ದಾರೆ. ಬಿಜೆಪಿ ಪರಿವರ್ತನಾ ಸಮಾರೊಪ ಸಮಾರಂಭಕ್ಕೆಂದು ರಾಜ್ಯದ ವಿವಿಧ ಭಾಗಗಳಿಂದ ಮೂರು ಸಾವಿರಕ್ಕೂ ಹೆಚ್ಚು ಸರ್ಕಾರಿ ಬಸ್ ಗಳನ್ನು ಬುಕ್ ಮಾಡಲಾಗಿತ್ತು. ಇದ್ರಿಂದ ರಾಜ್ಯ ಸಾರಿಗೆ ಸಂಸ್ಥೆಗಳು ಬಂದ್‍ನಿಂದ ಆಗಿದ್ದ ನಷ್ಟವನ್ನು ತುಂಬಿಕೊಂಡಿವೆ.
Advertisement
Advertisement
ಒಂದೇ ದಿನದಲ್ಲಿ ಬಿಎಂಟಿಸಿ 1 ಕೋಟಿ ರೂಪಾಯಿ ಲಾಭ ಗಳಿಸಿದ್ರೆ, ಕೆಎಸ್‍ಆರ್‍ಟಿಸಿ 4 ಕೋಟಿ ರೂಪಾಯಿ ಲಾಭ ತಂದಿದೆ.