Connect with us

ಮೋದಿ ವಿರುದ್ಧದ ರಮ್ಯಾ ಟ್ವೀಟ್ ಗೆ ಶಾಸಕ ಜಮೀರ್ ಅಹಮದ್ ಅಸಮಾಧಾನ!

ಮೋದಿ ವಿರುದ್ಧದ ರಮ್ಯಾ ಟ್ವೀಟ್ ಗೆ ಶಾಸಕ ಜಮೀರ್ ಅಹಮದ್ ಅಸಮಾಧಾನ!

ಬೆಂಗಳೂರು: ಬಿಜೆಪಿ ಪರಿವರ್ತನಾ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಮೋದಿ ಭಾಷಣದ ಬಳಿಕ ಟ್ವಿಟ್ಟರ್‍ನಲ್ಲಿ ನಟಿ, ಮಾಜಿ ಸಂಸದೆ ರಮ್ಯಾ ಮೋದಿ ಕಾಲೆಳೆದಿದ್ದು, ಇದಕ್ಕೆ ಶಾಸಕ ಜಮೀರ್ ಅಹಮದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಧಾನ ಮಂತ್ರಿಗಳಿಗೆ ಯಾರೇ ಆದರೂ ಗೌರವ ಕೊಡಬೇಕು. ಈ ರೀತಿ ಮಾತನಾಡಬಾರದು ಅಂತ ಶಾಸಕರು, ರಮ್ಯಾ ಟ್ವೀಟ್ ಗೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಇದನ್ನೂ ಓದಿ: ಈಕೆ ಯಾರು? ಸಾಧನೆ ಏನು? ಕನ್ನಡ ಬಾರದ ಕಾಡುಪಾಪ- ಮೋದಿ ಕಾಲೆಳೆದ ರಮ್ಯಾ ವಿರುದ್ಧ ಜಗ್ಗೇಶ್ ಕಿಡಿ

ಮೋದಿ ಕೇವಲ ರಾಜಕೀಯ ಭಾಷಣ ಮಾಡಿ ಹೋಗಿದ್ದಾರೆ. ಮಹದಾಯಿ ಬಗ್ಗೆ ಒಂದೇ ಒಂದು ಶಬ್ಧ ಮಾತನಾಡಿಲ್ಲ. ಯಾರ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ ಗೊತ್ತಿಲ್ಲ. ಯಡಿಯೂರಪ್ಪ ಅವರನ್ನ ಪಕ್ಕದಲ್ಲಿ ಕೂರಿಸಿಕೊಂಡು ಮೋದಿ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಭ್ರಷ್ಟಾಚಾರ ಮಾಡಿ ಯಡಿಯೂರಪ್ಪ ಜೈಲಿಗೆ ಹೋಗಿ ಬಂದವರು. ನಮ್ಮ ಸಿಎಂ ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಆದ್ರೆ ಮೋದಿ ಮಾಡಿದ ಆರೋಪಕ್ಕೆ ಒಂದೇ ಒಂದು ದಾಖಲೆ ಕೊಡಲಿ ಅಂತ ಅವರು ಸವಾಲೆಸೆದ್ರು. ಇದನ್ನೂ ಓದಿ: ಮೋದಿ ಭಾಷಣವನ್ನ ಮೂರು ಅಕ್ಷರಗಳಲ್ಲಿ ಟೀಕಿಸಿದ ರಮ್ಯಾ  

ರಮ್ಯಾ ಹೇಳಿದ್ದೇನು?: ಮೋದಿ ಭಾಷಣದ ಬಳಿಕ ಟ್ವಿಟ್ವರ್‍ನಲ್ಲಿ ಕಾಂಗ್ರೆಸ್-ಬಿಜೆಪಿ ನಡುವಿನ ವಾರ್ ತೀವ್ರಗೊಂಡಿತ್ತು. ನಶೆಯಲ್ಲಿದ್ದಾಗ ಹೀಗೆಲ್ಲಾ ಆಗುತ್ತೆ ಎಂದು ಹೇಳುವ ಮೂಲಕ ನಟಿ, ಮಾಜಿ ಸಂಸದೆ ರಮ್ಯಾ ಪ್ರಧಾನಿ ಮೋದಿಯ ಕಾಲೆಳೆದಿದ್ದರು.  ಇದನ್ನೂ ಓದಿ: ಕನ್ನಡಿಗ ರಾಹುಲ್ ದ್ರಾವಿಡ್‍ ಬಗ್ಗೆ ಮೋದಿ ಪ್ರಶಂಸೆ

ಭಾಷಣದಲ್ಲಿ ರೈತರು ತಮ್ಮ ಟಾಪ್ ಆದ್ಯತೆ ಎಂದು ಮೋದಿ ಹೇಳಿದ್ದರು. ಟಾಪ್(TOP) ಎಂದರೆ ಟೊಮೆಟೋ, ಈರುಳ್ಳಿ, ಪೊಟಾಟೋ ಎಂದು ವಾಖ್ಯಾನಿಸಿದ್ದರು. ಇದನ್ನೇ ಉಲ್ಲೇಖಿಸಿದ ರಮ್ಯಾ ಟಾಪ್ ನನ್ನು ಉಲ್ಟಾ ಬರೆದು ಪಾಟ್ ಮಾಡಿದ್ದರು. ಪಾಟ್(POT) ಎಂದರೆ ಮಾದಕ ದ್ರವ್ಯ. ಮರಿಜುನಾ ಮಾದಕ ದ್ರವ್ಯ ಗಿಡಕ್ಕೆ ಪಾಟ್ ಎನ್ನುವ ಹೆಸರೂ ಇದೆ. ಇದನ್ನೂ ಓದಿ: ಮೋದಿ ರ‍್ಯಾಲಿಯಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ಲಾಭ

ಪದಪುಂಜ ಬಿಡಿಸೋದು ಬಿಟ್ಟರೆ ಪ್ರಧಾನಿ ರೈತರ ಬಗ್ಗೆ ಏನೂ ಮಾಡಿಲ್ಲ. ಕರ್ನಾಟಕದಲ್ಲಿ 3,500 ರೈತರು ಸಾವನ್ನಪ್ಪಿದ್ದರೂ ಗುಜರಾತ್, ಆಂಧ್ರ, ರಾಜಸ್ಥಾನ, ತಮಿಳುನಾಡಿಗೆ ಹೆಚ್ಚು ಪರಿಹಾರ ಕೊಟ್ಟಿರೋ ಮೋದಿ ಸರ್ಕಾರ, ಕರ್ನಾಟಕಕ್ಕೆ ಅತ್ಯಂತ ಕಡಿಮೆ ಬರ ಪರಿಹಾರ ಕೊಟ್ಟಿದೆ. ಸಿದ್ದರಾಮಯ್ಯ ಸರ್ಕಾರ 1,165 ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ್ರೆ, ಮೋದಿ ಸರ್ಕಾರ ಮಾಡಿರೋ ಸಾಲ ಮನ್ನಾ ಸೊನ್ನೆ ಎಂದು ರಮ್ಯಾ ತಿರುಗೇಟು ನೀಡಿದ್ದರು. ರಮ್ಯಾ ಅವರ ಟ್ವೀಟ್ ಗೆ ನವರಸ ನಾಯಕ ಜಗ್ಗೇಶ್ ಕೂಡ ತಿರುಗೇಟು ನೀಡುವ ಮೂಲಕ ಕಿಡಿಕಾರಿದ್ದರು. ಇದನ್ನೂ ಓದಿ: ಬಿಜೆಪಿ ಪರಿವರ್ತನಾ ಸಮಾರೋಪ ಸಮಾರಂಭ ಮುಕ್ತಾಯ- ಮಹದಾಯಿ ಕುರಿತು ತುಟಿಬಿಚ್ಚದ ಮೋದಿ!