ರಾಯಚೂರು: ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಐದು ಮನೆಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಕುಖ್ಯಾತ ಕಳ್ಳರನ್ನು ಹಿಡಿಯುವಲ್ಲಿ ಸಿಂಧನೂರು (Sindhanur) ಪೊಲೀಸರು ಯಶಸ್ವಿಯಾಗಿದ್ದಾರೆ. ಬಳ್ಳಾರಿಯ (Bellary) ಸಿರಗುಪ್ಪಾ (Siruguppa) ಮೂಲದ ನಾಗರಾಜ್, ಉಲ್ಲೇಶ್ ಹಾಗೂ ಶ್ರೀಕಾಂತ್ ಬಂಧಿತ ಆರೋಪಿಗಳು.
Advertisement
ಆರೋಪಿಗಳಿಂದ 19 ಲಕ್ಷ 86 ಸಾವಿರ ರೂ. ಬೆಲೆ ಬಾಳುವ 331 ಗ್ರಾಂ ಬಂಗಾರ (Gold), 10 ಸಾವಿರ ರೂ. ಬೆಲೆಬಾಳುವ 150 ಗ್ರಾಂ ಬೆಳ್ಳಿ ಆಭರಣ, 16 ಸಾವಿರ ರೂ. ನಗದು, ಒಂದು ಬೈಕ್ ಸೇರಿ 20 ಲಕ್ಷ 12 ಸಾವಿರ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಮಾ.26 ರಂದು ಸಿಂಧನೂರು ತಾಲೂಕಿನ ಗೊರೆಬಾಳ ಕ್ಯಾಂಪ್‍ನಲ್ಲಿ ಹಾಡಹಗಲೇ ಮನೆ ಬೀಗಮುರಿದು ಶೇಷಗಿರಿರಾವ್ ಎಂಬುವವರ ಮನೆ ಕಳ್ಳತನ ಮಾಡಲಾಗಿತ್ತು. ಮನೆಯಲ್ಲಿದ್ದ 256 ಗ್ರಾಂ ಚಿನ್ನಾಭರಣ, 4 ಲಕ್ಷ 50 ಸಾವಿರ ರೂ. ನಗದು ದೋಚಿದ್ದರು. ಇದನ್ನೂ ಓದಿ: ಅಪ್ರಾಪ್ತೆಯ ಅತ್ಯಾಚಾರ- ಕೃತ್ಯದ ವೇಳೆ ಬಳಸಿದ್ದ ಶರ್ಟ್ ಬಣ್ಣದಿಂದ ಆರೋಪಿ ಅರೆಸ್ಟ್
Advertisement
Advertisement
ಈ ಸಂಬಂಧ ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಳ್ಳರ ಪತ್ತೆಗೆ ಪೊಲೀಸ್ ವಿಶೇಷ ತಂಡ ರಚಿಸಲಾಗಿತ್ತು. ಬಂಧಿತ ಆರೋಪಿಗಳು ಇದರ ಜೊತೆಗೆ ಸಿಂಧನೂರು ಗ್ರಾಮೀಣ ಠಾಣೆ ಹಾಗೂ ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಟ್ಟು ಐದು ಪ್ರಕರಣಗಳಲ್ಲಿ ಭಾಗಿಯಾಗಿರುವುದನ್ನ ಬಾಯಿ ಬಿಟ್ಟಿದ್ದಾರೆ. ಇದನ್ನೂ ಓದಿ: ಕತ್ತು ಹಿಸುಕಿ ಮಗಳನ್ನೇ ಕೊಲೆಗೈದ ತಂದೆ ಅರೆಸ್ಟ್