ವಾಷಿಂಗ್ಟನ್: ಟ್ವಿಟ್ಟರ್‌ನಲ್ಲಿ ಯಾರು ದೀಪ ಬೆಳಗಿಸಬೇಕು ಎಂದು ಕೆಲಸ ಮಾಡುತ್ತಿಲ್ಲ ಎಂದು ಟ್ವಿಟ್ಟರ್ ಸಿಇಒ ಪರಾಗ್ ಅಗರವಾಲ್ ಟ್ವೀಟ್ ಮಾಡುವ ಮೂಲಕ ಹೊಸ ಬದಲಾವಣೆ ಕುರಿತು ಹಂಚಿಕೊಂಡಿದ್ದಾರೆ.
ಪರಾಗ್ ಅವರು ತಮ್ಮ ತಂಡದಲ್ಲಿ ಇತ್ತೀಚಿಗೆ ನಡೆಯುತ್ತಿರುವ ಬದಲಾವಣೆಗಳ ಕುರಿತು ವಿವರಗಳನ್ನು ಥ್ರೆಡ್ ಪೋಸ್ಟ್ ಮಾಡಿದ್ದಾರೆ. ಮೈಕ್ರೋ-ಬ್ಲಾಗಿಂಗ್ ಸೈಟ್ ಅನ್ನು ಟೆಸ್ಲಾ ಸಿಇಒ ಎಲೋನ್ ಮಸ್ಕ್ ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿದಾಗಿನಿಂದ ಇಲ್ಲಿವರೆಗೂ ಅವರ ತಂಡದ ಮೇಲೆ ಬೀರಿರುವ ಪರಿಣಾಮವನ್ನು ವಿವರಿಸಿದ್ದಾರೆ. ಇದನ್ನೂ ಓದಿ: ಉಡುಪಿ ಪ್ರವಾಸ ಕೈಗೊಂಡಿರುವ ನಿರ್ಮಲಾ ಸೀತಾರಾಮನ್
Advertisement
Advertisement
ಟ್ವೀಟ್‍ನಲ್ಲಿ ಏನಿದೆ?
ಟ್ವಿಟ್ಟರ್‌ನಲ್ಲಿ ಕಾರ್ಯನಿರ್ವಾಹಿಸುತ್ತಿದ್ದ ಇಬ್ಬರು ಹಿರಿಯ ಕೆಲಸಗಾರರನ್ನು ವಜಾಗೊಳಿಸಿದ ಒಂದು ದಿನದ ನಂತರ ದೀರ್ಘ ಪೋಸ್ಟ್ ಮಾಡಿದ ಪರಾಗ್, 44 ಶತಕೋಟಿ ವ್ಯವಹಾರವನ್ನು ಪ್ರಸ್ತುತ ತಡೆಹಿಡಿಯಲಾಗಿದೆ ಎಂದು ಘೋಷಿಸಿದರು. ಈ ಕಂಪನಿಯನ್ನು ಸ್ವಾಧೀನ ಪಡೆದುಕೊಂಡರು ‘ಲೇಮ್-ಡಕ್’ ಸಿಇಒ ಬದಲಾವಣೆಗಳನ್ನು ಏಕೆ ಮಾಡುತ್ತಾರೆ ಎಂದು ಕೆಲವರು ನನ್ನನ್ನು ಪ್ರಶ್ನೆ ಮಾಡುತ್ತಿದ್ದಾರೆ.
Advertisement
A lot has happened over the past several weeks. I’ve been focused on the company and haven't said much publicly during this time, but I will now.
— Parag Agrawal (@paraga) May 13, 2022
Advertisement
ಈ ಪ್ರಶ್ನೆಗೆ ನಾನು ತುಂಬಾ ಸರಳವಾಗಿ ಉತ್ತರಿಸುತ್ತೇನೆ. ನಾನು ಈ ಡೀಲ್ ಕ್ಲೋಸ್ ಮಾಡಲು ಯೋಚನೆ ಮಾಡುತ್ತಿರುವಾಗ ಎಲ್ಲ ರೀತಿಯ ಸನ್ನಿವೇಶಗಳಿಗೂ ನಾವು ಸಿದ್ಧನಾಗಿರಬೇಕು. ಯಾವಾಗಲೂ ಟ್ವಿಟ್ಟರ್‌ಗೆ ಸರಿಯಾದದ್ದನ್ನು ಮಾಡಬೇಕಾಗಿದೆ. ಟ್ವಿಟ್ಟರ್ ಮುನ್ನಡೆಸಲು ಮತ್ತು ನಿರ್ವಹಿಸಲು ನಾನು ಜವಾಬ್ದಾರನಾಗಿರುತ್ತೇನೆ. ನಮ್ಮ ಕೆಲಸವು ಪ್ರಬಲವಾಗಿದೆ. ಇದನ್ನೂ ಓದಿ: ಜನರು ಕಡಿಮೆ ನಾಟಕವನ್ನು ಬಯಸಿದ್ದರಿಂದ ಬೈಡನ್ ಆಯ್ಕೆಯಾದರು: ಟ್ರಂಪ್ ಕಾಲೆಳೆದ ಮಸ್ಕ್
No one at Twitter is working just to keep the lights on. We take pride in our work. Regardless of the company’s future ownership, we’re here improving Twitter as a product and business for customers, partners, shareholders, and all of you.
— Parag Agrawal (@paraga) May 13, 2022
ಟ್ವಿಟ್ಟರ್‌ನಲ್ಲಿ ಯಾರೂ ದೀಪ ಬೆಳಗಿಸಲು ಕೆಲಸ ಮಾಡುತ್ತಿಲ್ಲ. ನಾವು ನಮ್ಮ ಕೆಲಸದ ಬಗ್ಗೆ ಹೆಮ್ಮೆ ಪಡುತ್ತೇವೆ. ಕಂಪನಿಯ ಭವಿಷ್ಯದ ಮಾಲೀಕತ್ವವನ್ನು ಲೆಕ್ಕಿಸದೆಯೇ, ನಾವು ಗ್ರಾಹಕರು, ಪಾಲುದಾರರು, ಷೇರುದಾರರು ಮತ್ತು ನಿಮ್ಮೆಲ್ಲರಿಗೂ ಉತ್ಪನ್ನ ಮತ್ತು ವ್ಯಾಪಾರಗಳ ಬಗ್ಗೆ ಹೆಚ್ಚು ಗಮನ ಕೊಡುತ್ತೇನೆ ಎಂದು ಬರೆದುಕೊಂಡಿದ್ದಾರೆ.